ಬಾಗಲಕೋಟೆ : ಕಲ್ಯಾಣ ಮಂಟಪದಲ್ಲಿ ಮದುವೆಯ ಸಂಬಂಧಿಕರೆಲ್ಲರೂ ಸಂತೋಷದಿಂದ ಇದ್ದರು. ಆದರೆ ಈ ವೇಳೆ ಕಳ್ಳ ಬೆಕ್ಕಿನಂತೆ ಬಂದ ಖತರ್ನಾಕ್ ಕಳ್ಳನೊಬ್ಬ ಮದುವೆ ಮಂಟಪಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ನೆಕ್ಲೆಸ್ ಅನ್ನು ಕದ್ದು ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಕಲ್ಯಾಣ ಮಂಟಪದಲ್ಲಿ ಕಳ್ಳನೊಬ್ಬ ಚಿನ್ನದ ನೆಕ್ಲೇಸ್ ಎಗರಿಸಿ ಪರಾರಿ ಆಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಇದೀಗ ಬಿಗ್ ಶಾಕ್ ಎದುರಾಗಿದೆ.
ಕಳ್ಳ ಬೆಕ್ಕಿನಂತೆ ಮದುವೆ ಮಂಟಪಕ್ಕೆ ನುಗ್ಗಿದ ಖತರ್ನಾಕ್ ಕಳ್ಳನೊಬ್ಬ ರಾಜಾರೋಷವಾಗಿ ಕಲ್ಯಾಣ ಮಂಟಪದಲ್ಲಿ ಓಡಾಟ ನಡೆಸಿದ್ದಾನೆ.
ರಾಜಾರೋಷವಾಗಿ ಕಲ್ಯಾಣ ಮಂಟಪದಲ್ಲಿ ಓಡಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರರೆಯಾಗಿದೆ. ಈ ವೇಳೆ ಯಾವುದೇ ಭಯವಿಲ್ಲದೆ ಕಲ್ಯಾಣ ಮಂಟಪದಲ್ಲಿರುವ ರೂಮ್ ಗೆ ಹೋಗಿ ನೆಕ್ಲೇಸ್ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ.
ಈ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಗೆ ಮದುವೆ ಸಂಬಂಧಿಕರು ದೂರು ನೀಡಿದ್ದಾರೆ ದೂರು ದಾಖಲಿಸಿಕೊಂಡು ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.