Ad imageAd image

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ

Bharath Vaibhav
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ
WhatsApp Group Join Now
Telegram Group Join Now

ಬೆಳಗಾವಿ: ನಗರದ ಆರ್ ಪಿಡಿ ವೃತ್ತದ ಬಳಿ 10ಕ್ಕೂ ಹೆಚ್ಚು ಯುವಕರ ಗುಂಪು ಅನ್ಯಕೋಮಿನ ಇಬ್ಬರು ಸಹೋದರರ ಪೋನ್ ಮಾಡಿ ಕರೆಸಿ ಹಲ್ಲೆ ಮಾಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ.

ನಗರದ ಖಾಸಬಾಗದ ಪಾಟೀಲ ಗಲ್ಲಿಯಲ್ಲಿ ನೂರ ಬಸೀರ್ ಅಹ್ಮದ್ ಹೊಸಪೇಟ (35), ಮಂಜೂರ್ ಹೊಸಪೇಟ ಎಂಬವರ ಮೇಲೆ ದಾಳಿ ನಡೆಸಿದ್ದರಿಂದ ತಲೆ, ಬೆನ್ನು, ಮುಖಕ್ಕೆ ಗಾಯಗಳಾಗಿದ್ದು ಯುವಕರು ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಗಲಾಟೆ ನಡೆಸಿದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ” ಹಲ್ಲೆಗೊಳಗಾದ ಇಬ್ಬರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ, ಗೌಂಡಿ ಕೆಲಸ ಮಾಡುತ್ತಿದ್ದ ಯುವಕರ ಮಧ್ಯೆ ಸಣ್ಣಪುಟ್ಟ ಜಗಳದಿಂದ ಹಲ್ಲೆಯಾಗಿದೆ.

ಹಲ್ಲೆ ಪ್ರಕರಣ ಸಂಬಂಧ ಈಗಾಗಲೇ ಎರಡೂ ಗುಂಪಿನ ಕಡೆಯಿಂದಲೂ ಆರು ಮಂದಿ ಯುವಕರ ವಶಕ್ಕೆ ಪಡೆಯಲಾಗಿದೆ. ಹಲ್ಲೆಗೆ ಒಳಗಾದ ಇಬ್ಬರಿಗೆ ಗಂಭೀರ ಗಾಯವಾಗಿಲ್ಲ, ಸಣ್ಣಪುಟ್ಟ ಗಾಯಗಳಾಗಿದ್ದು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡವಾರದು ಎಂದು ಡಿಸಿಪಿ ರೋಹನ್ ಜಗದೀಶ್‌ ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!