ಗುರುಮಠಕಲ್ : ಗುರುಮಠಕಲ್ ಗಡಿಬಗದಲ್ಲಿ ಬರುವ ನಾರಾಯಣಪೇಟ ಜಿಲ್ಲೆಗೆ ಬರುವ ಕೃಷ್ಣ ಮಾದಿಗಣ್ಣ ಅವರಿಗೆ ಗುರುಮಠಕಲ್ MRPS ವತಿಯಿಂದ ಅಭಿನಂದನೆ ಜೊತೆಗೆ ಸ್ವಾಗತ ಕೋರುವವರು ಗುರುಮಠಕಲ್ ತಾಲೂಕ ಅಧ್ಯಕ್ಷ ರವಿ ಬೂರನೊಳ
ಒಳ ಮೀಸಲಾತಿ ಹೋರಾಟ ಸಮಿತಿ (MRPS) ಸಂಸ್ಥಾಪಕ ಕ್ರಿಯಾಶೀಲ ನಾಯಕ ಮಂದ ಕೃಷ್ಣ ಮಾದಿಗ ಅವರು ಸಾರ್ವಜನಿಕ ವ್ಯವಹಾರಗಳ ಕ್ಷೇತ್ರದಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ಅವರ ಮೂರು ದಶಕಗಳ ಹೋರಾಟವು ಅಂತಿಮವಾಗಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಸಾಮಾಜಿಕ ನ್ಯಾಯದಲ್ಲಿ ಮಹತ್ವದ ಮೈಲುಗಲ್ಲು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೀಡುವ ಈ ಪ್ರಶಸ್ತಿಯು ಅಂಚಿನಲ್ಲಿರುವ ಸಮುದಾಯಗಳನ್ನು ಸಬಲೀಕರಣ ಗೊಳಿಸಲು ಮಂದಕೃಷ್ಣ ಮಾದಿಗ ಅವರ ಅಚಲ ಬದ್ಧತಿಯನ್ನು ಕೊಂಡಾಡುತ್ತದೆ ವ್ಯವಸ್ಥಿತ ಅಸಮಾನತೆಗಳನ್ನು ಸವಾಲು ಮಾಡುವಲ್ಲಿ ಒಬ್ಬ ಸಮರ್ಪಿತ ವ್ಯಕ್ತಿಯು ಹೊಂದಿರುವ ಪ್ರಭಾವಕ್ಕೆ ಪ್ರಬಲವಾದ ಸಾಕ್ಷಿಯಾಗಿದೆ. ಇದು
೧೯೯೪ ರಲ್ಲಿ ಅವರು ಎಸ್ಸಿಗಳ ಉಪ ವರ್ಗೀಕರಣಕ್ಕಾಗಿ ಒತ್ತಾಯಿಸಿ ಮಾದಿಗ ದಂಡೋರ MRPS ಸ್ಥಾಪಿಸಿದರು ಮತ್ತು ಮಾದಿಗ ಉಪಜಾತಿಗಳ ಉನ್ನತಿಗಾಗಿ ಹಲವಾರು ಪ್ರತಿಭಟನೆಗಳನ್ನು ಮಾಡಿದರು ೨೦೦೮ರಲ್ಲಿ ಎಸ್ಸಿ ಉಪ ವರ್ಗಿಕರಣದ ವಿಷಯದಲ್ಲಿ ರಾಷ್ಟ್ರದ ಗಮನ ಸೆಳೆಯಲು ಮಂದಕೃಷ್ಣ ಮಾದಿಗ ಅವರು ಉಪವಾಸ ಸತ್ಯಾಗ್ರಹ ನಡೆಸಿದರು
೧೯೯೯ ರಿಂದ ತೆಲಂಗಾಣ ರಾಜಕೀಯದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟರು ಚುನಾವಣೆ ರಾಜಕೀಯದಲ್ಲಿ ಕೆಲವು ಭಾರಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದರು ಆದರೆ ಯಶಸ್ವಿಯಾಗಲಿಲ್ಲ ಆದಾಗ್ಯ ಅವರು ದೇಶಾದ್ಯಂತ ಎಸ್ಸಿ ಮೀಸಲಾತಿ
ವರ್ಗಿಕರಣದ ಮುಖವಾಗಿ ಹೊರಹೊಮ್ಮಿದರು ಸುಪ್ರೀಂ ಕೋರ್ಟು ಕೆಲವು ಷರತ್ತು ಗಳೊಂದಿಗೆ ಎಸ್ಸಿ ವರ್ಗಿಕರಣದ ಷರತ್ತು ಹಾದಿಯನ್ನು ತೆರವು ಗೊಳಿಸಿದ್ದರಿಂದ ಅವರ ಪ್ರಯತ್ನ ವ್ಯರ್ಥವಾಗಲಿಲ್ಲ ಇಂತಹ ಒಬ್ಬ ಮಹಾ ನಾಯಕನಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡುವುದರಿಂದ ಆ ಪ್ರಶಸ್ತಿಗೆ ಗೌರವ ತಂದಂತಾಗಿದೆ ಎಂದು ಮಾದಿಗ ದಂಡೋರ ಗುರುಮಠಕಲ್ ಮತ್ತು ನಮ್ಮ ಮಾದಿಗ ಸಮಾಜದ ವತಿಯಿಂದ ಅಭಿನಂದನೆಗಳು ಮತ್ತು ನಮ್ಮ ಗಡಿಭಾಗಕ್ಕೆ ಇಂದು ಬರುವ ಕೃಷ್ಣ ಮಾದಿಗಣ್ಣಗೆ ನಮ್ಮ ಗುರುಮಠಕಲ್ ತಾಲೂಕು ಮತ್ತು ಯಾದಗಿರಿ ಜಿಲ್ಲೆಯ ವತಿಯಿಂದ ಸ್ವಾಗತ ಕೋರುತ್ತೇವೆ
ವರದಿ-ರವಿ ಬುರನೋಳ




