ಔರಾದ : ತಾಲೂಕಿನ ಸಂತಪೂರ ಮುರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುವುದಿಲ್ಲ,ಗ್ರಂಥಾಲಯ,ಪುಸ್ತಕಗಳು,ಆಟದ ಸಲಕರಣೆಗಳು ಸೇರಿದಂತೆ ಹಾಸ್ಟೆಲ್ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ,ಅದನ್ನು ಪ್ರಶ್ನೆ ಮಾಡಿದರೆ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿ ವಾರ್ಡನ್ ವಿರುದ್ಧ ಧಿಕ್ಕಾರ ಕೂಗಿರುವ ಘಟನೆ ಸಂತಪೂರನಲ್ಲಿ ನಡೆದಿದೆ.
ನಮಗೆ ನೀಡುವ ಊಟ ಗುಣಮಟ್ಟದಿರುವುದ್ದಿಲ್ಲಾ ಅನ್ನ ಸಾಂಬಾರನಲ್ಲಿ ಹುಳಗಳು ಬರುತ್ತವೆ ಇದೇನು ಎಂದು ಪ್ರಶ್ನಿಸಿದರೆ ಅದನ್ನು ತೆಗೆದು ತಿನ್ನು ಎನ್ನುತ್ತಾರೆ ವಸತಿ ನಿಲಯದ ವಾರ್ಡನ್ ಊಟಕ್ಕೆ ಮಜ್ಜಿಗೆ ಹಾಗೂ ಚಹಾದಲ್ಲಿ ಬರಿ ನೀರು ಇರುತ್ತದೆ ಹೀಗಿರುವಾಗ ನಾವು ಹೇಗೆ ಊಟ ಮಾಡಬೇಕು ನಮ್ಮ ಅಳಲನ್ನು ಯಾರ ಹತ್ತಿರ ತೋಡಿಕೊಳ್ಳಬೇಕು ಎನ್ನುತ್ತಾರೆ ವಿದ್ಯಾರ್ಥಿಗಳು.
ವಸತಿ ನಿಲಯದ ವಾರ್ಡನ್ ಮಾತು ಎತ್ತಿದರೆ ಸಾಕು ಬರಿ ಅವಚ್ಚ ಶಬ್ದಗಳನ್ನು ಬಳಕೆ ಮಾಡಿ ನ್ನಿಮ್ಮಪ್ಪಾ ನ ಜಾಗಿರಾಬೋಳಿಮಗನೆ ಅಂತೆಲ್ಲಾ ಬೈಯ್ದು ಬಿಡುತ್ತಾರೆ ಬೈ ಬೇಡಿ ಸರ್ ಎಂದಾಗ ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು ಎಂದು ತೋಚದಂತಾಗಿದೆ ನಾವುಗಳು ಇಲ್ಲಿ ನರಕಯಾತನೆ ಅನುಭವಿಸುತ್ತಿದೇವೆ ಎಂದು ವಸತಿ ನಿಲಯದ ವಿದ್ಯಾರ್ಥಿಗಳು ಮಾಧ್ಯಮದ ಮುಂದೆ ಅಳಲನ್ನು ತೋಡಿಕೊಂಡರು.
ಸಮಾಜ ಕಲ್ಯಾಣ ಇಲಾಖೆ ಮೇಲಾಧಿಕಾರಿಗಳು ವಾರ್ಡನ್ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ವರದಿ : ಸೂರ್ಯಕಾಂತ ಎಕಲಾರ