Ad imageAd image

ಸಾರ್ವಜನಿಕರಿಗೆ ಮರಳು ಗಣಿಗಾರಿಕೆ ಅವಕಾಶ : ಪ್ರತಿ ಮೆಟ್ರಿಕ್ ಟನ್ ಗೆ 850 ರೂ. ನಿಗದಿ

Bharath Vaibhav
ಸಾರ್ವಜನಿಕರಿಗೆ ಮರಳು ಗಣಿಗಾರಿಕೆ ಅವಕಾಶ : ಪ್ರತಿ ಮೆಟ್ರಿಕ್ ಟನ್ ಗೆ 850 ರೂ. ನಿಗದಿ
WhatsApp Group Join Now
Telegram Group Join Now

ಬೆಂಗಳೂರು: ನದಿ ಪಾತ್ರಗಳಲ್ಲಿ ಮರಳು ಎತ್ತಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಿದ್ದು, ಪ್ರತಿ ಮೆಟ್ರಿಕ್ ಟನ್ ಗೆ 850 ರೂ. ನಿಗದಿಪಡಿಸಲಾಗಿದೆ. ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರದಿಂದ ನೂತನ ಮರಳು ನೀತಿ -2020 ಜಾರಿಗೊಳಿಸಲಾಗಿದೆ.

ರಾಜ್ಯದ 4, 5 ಮತ್ತು ಉನ್ನತ ಶ್ರೇಣಿಯ ನದಿಗಳು, ಹೊಳೆ, ಜಲಾಶಯಗಳು, ಅಣೆಕಟ್ಟಿನ ಹಿನ್ನೀರಿನ ನದಿ ಪಾತ್ರಗಳಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೊಂದಿಗೆ ಸಾರ್ವಜನಿಕರಿಗೂ ಮರಳು ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.ಪ್ರತಿ ಮೆಟ್ರಿಕ್ ಟನ್ ಮರಳಿಗೆ 850 ರೂ. ದರ ನಿಗದಿಪಡಿಸಲಾಗಿದೆ

ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಿ ಮರಳು ಸರಬರಾಜು ಮಾಡಲು ಈ ಮೊದಲು ಹಟ್ಟಿ ಚಿನ್ನದ ಗಣಿ ಕಂಪನಿ, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಗೆ ವಹಿಸಲಾಗಿತ್ತು.

ನಿರೀಕ್ಷಿತ ಮಟ್ಟದಲ್ಲಿ ಈ ಸಂಸ್ಥೆಗಳು ಮರಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೊಂದಿಗೆ ನದಿ ಪಾತ್ರದ ಮರಳು ಬ್ಲಾಕ್ ಗಳನ್ನು ಸಾರ್ವಜನಿಕ ಟೆಂಡರ್ ಕಂ ಇ-ಹರಾಜು ಮೂಲಕ ವಿಲೇವಾರಿ ಮಾಡಿಕೊಡಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ನಿಗದಿತ ಬೆಲೆಯಲ್ಲಿ ಮರಳು ಪೂರೈಸಲು 1, 2 ಮತ್ತು 3ನೇ ಶ್ರೇಣಿಯ ಹಳ್ಳಗಳಲ್ಲಿ ಲಭ್ಯವಿರುವ ಮರಳನ್ನು ತೆಗೆದು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ. ಗ್ರಾಮ ವತಿಯಿಂದ ವಿಲೇವಾರಿ ಮಾಡಿರುವ ಪ್ರತಿಮೆ ಟ್ರಿಕ್ ಟನ್ ಮರಳಿಗೆ 300 ರೂ. ದರ ನಿಗದಿಪಡಿಸಲಾಗಿದೆ.

ಸಾರ್ವಜನಿಕರಿಗೂ ಮರಳು ಗಣಿಗಾರಿಕೆ ಗುತ್ತಿಗೆ ಪಡೆಯಲು ಅವಕಾಶ ಮಾಡಿಕೊಟ್ಟಿದ್ದು, ಮಾರ್ಗಸೂಚಿ ಹೊರಡಿಸಲಾಗಿದೆ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಮರಳು ಪೂರೈಕೆ ಉದ್ದೇಶದಿಂದ ಮರಳು ಬ್ಲಾಕ್ ಗಳನ್ನು ಹಂಚಿಕೆ ಮಾಡುವ ಹೊಣೆಗಾರಿಕೆಯನ್ನು ಜಿಲ್ಲಾ ಸಮಿತಿಗಳಿಗೆ ವಹಿಸಲಾಗಿದೆ.

ರಾಜ್ಯದಾದ್ಯಂತ ಏಕರೂಪದ ಮಾರಾಟ ಬೆಲೆ ನಿಗದಿಪಡಿಸುವ ಬಗ್ಗೆ ವರದಿ ನೀಡಲು 2024ರಲ್ಲಿ ತಾಂತ್ರಿಕ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಮರಳಿಗೆ 900 ರೂ. ಏಕರೂಪದ ದರ ನಿಗದಿಗೆ ಶಿಫಾರಸು ಮಾಡಿತ್ತು.

ರಾಜ್ಯದಲ್ಲಿರುವ ಮರಳಿನ ಮಾರುಕಟ್ಟೆ ಬೆಲೆ, ಪೂರೈಕೆ, ಬೇಡಿಕೆ ಆಧರಿಸಿ ಇ- ಟೆಂಡರ್ ಮೂಲಕ ಮರಳು ವಿಲೇವಾರಿ ಮಾಡುವ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ವಿಲೇವಾರಿ ಮಾಡುವ ಪ್ರತಿ ಮೆಟ್ರಿಕ್ ಟನ್ ಮರಳಿಗೆ ಗರಿಷ್ಠ 850 ರೂ. ನಿಗದಿಪಡಿಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!