ಬೆಂಗಳೂರು:ಜನ್ಮ ಕೊಟ್ಟ ತಾಯಿ, ತಂದೆ ಶಿಕ್ಷಣ ನೀಡಿದ ಗುರುಗಳು ನಮ್ಮೂರು ಶಾಲೆ ಎಂಬ ಅಭಿಮಾನ ಪ್ರೀತಿ ಗುರುವಿಗೆ ಅರ್ಪಿಸುವ ಗುರು ಕಾಣಿಕೆ ಎಲ್ಲಕ್ಕಿಂತ ದೊಡ್ಡದು ಎಂದು ತೆಂಗಳಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹಾಗೂ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ತೆಂಗಳಿ ಹೇಳಿದರು.
ಕಲಬುರ್ಗಿ ನಗರದ ರಾಜುವಿಕ ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹರಿಕಾರ ಎಂದೇ ಕರೆಯಲ್ಪಡುವ ದಿವಂಗತ ಮಾಜಿ ಮುಖ್ಯಮಂತ್ರಿ ಎನ್ ಧರಮ್ ಸಿಂಗ್ ಅವರ ಕುಟುಂಬದ ಶಾಲೆಯಲ್ಲಿ ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು, ಅಭಿಮಾನದ ಸಂಗತಿ.
ಮಕ್ಕಳು ಕೂಡ ಶಿಕ್ಷಣ ಕಲಿತು ಈ ಭಾಗದ ಅಭಿವೃದ್ಧಿಗಾಗಿ ದುಡಿಯುವ ಮಹಾನ್ ವ್ಯಕ್ತಿಗಳಾಗಲಿ ವಿಷೇಶವಾಗಿ ಈ ಶಾಲೆಯಲ್ಲಿ ಕಲಿತ ಮಕ್ಕಳಿ ಒಬ್ಬರಾದರು ಮುಖ್ಯ ಮಂತ್ರಿ ಪದವಿ ಲಭಿಸಲಿ ಎಕೆಂದರೆ ಈ ಶಾಲೆ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಬಳಗದವರ ಅವರ ಆದರ್ಶಗಳು ಮೈಗೂಡಿಸಿಕೊಂಡು ಬಾಳಲಿ ಎಂದು ಮಕ್ಕಳಿಗೆ ಶುಭ ಹಾರೈಸಿ ಮಾತನಾಡಿದರು.
ಮುಖ್ಯ ಅತಿಥಿ ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯಕೋಡಿ ಈ ಶಾಲೆ ಸಣ್ಣ ಸಣ್ಣ ಮಕ್ಕಳು ಪಠ್ಯ ಪುಸ್ತಕ ಜೊತೆಗೆ ಭೌತಿಕ, ಶಾರೀರಿಕ ಚಿತ್ರಕಲೆ ಸಂಗೀತ ಶಿಕ್ಷಣ ಕೊಡುವಲ್ಲಿ ರಾಜುವಿಕ ಶಾಲಾ ಸಂಸ್ಥೆಯವರು ಮುಖ್ಯೋಪಾಧ್ಯಾಯರು ಶಿಕ್ಷಕ ಶಿಕ್ಷಕಿಯರು ಶ್ರಮದಿಂದ ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಯಂಕಮ್ಮ ಗುತ್ತೇದಾರ್, ವಿದ್ಯಾನಗರ ವೆಂಕಯ್ಯ ಸೊಸೈಟಿ ಅಧ್ಯಕ್ಷ ಮಲ್ಲಿನಾಥ್ ದೇಶಮುಖ್, ಆರ್ಯನ್ ಶಿಕ್ಷಣ ಸಂಸ್ಥೆ ಚೇರಮನ್ ಸಂಜಯ ಸಿಂಗ್, ರಾಜವಿಕ ಶಾಲಾ ಮುಖ್ಯ ಶಿಕ್ಷಕಿ ಶೃತಿ ನಾಯ್ಡು, ಎಮ್.ಎಸ್.ಡಬ್ಲೂ ಪ್ರಾಚಾರ್ಯ ಶ್ರೀದೇವಿ ಸೇರಿದಂತೆ ಮಕ್ಕಳು ಪೋಷಕರು ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್