ಬೆಂಗಳೂರು : ಮಾಜಿ ಸಚಿವರು ಹಾಗೂ ಯಶವಂತಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ರವರ ಶಿಫಾರಸ್ಸು ಮೇರೆಗೆ ಮತ್ತು ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಹೆಚ್. ರವರ ಸಹಕಾರದೊಂದಿಗೆ ನಮ್ಮ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್, ಜಿಲ್ಲಾ ಅಧ್ಯಕ್ಷ ಹನುಮಂತರಾಯಪ್ಪ, ಕೆಪಿಸಿಸಿ ರಾಜ್ಯ ಮಹಿಳಾ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಬಿ ರೋಹಿಣಿ ಸುರೇಶ್ ಇವರುಗಳ ಸಹಕಾರ ಮಾರ್ಗದರ್ಶನದಲ್ಲಿ ನನ್ನನ್ನು ಹೆರೋಹಳ್ಳಿ ಕಾಂಗ್ರೆಸ್ ಬ್ಲಾಕ್ ಮಹಿಳಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಶಾಸಕರಿಗೂ,ಹೆರೋಹಳ್ಳಿ ಕಾಂಗ್ರೆಸ್ ಮುಖಂಡರಿಗೂ ಮಹಿಳೆಯರು ಕಾರ್ಯಕರ್ತರಿಗೂ ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಮಹಿಳಾ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡ ಕವಿತಾ ಸಿ ವೀರಾಚಾರ್ ಅವರು ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದ್ದಾರೆ.
ವರದಿ: ಅಯ್ಯಣ್ಣ ಮಾಸ್ಟರ್