Ad imageAd image

NIFTEM ಸ್ಥಾಪನೆಗೆ ಕೇಂದ್ರ ಆಹಾರ ಸಂಸ್ಕರಣಾ ಉಧ್ಯಮ ಸಚಿವ ಚಿರಾಗ ಪಾಸ್ವಾನ ರಿಗೆ ಮನವಿ ಸಲ್ಲಿಸಿದ ಸಂಸದ ಜಗದೀಶ್ ಶಟ್ಟರ

Bharath Vaibhav
NIFTEM ಸ್ಥಾಪನೆಗೆ ಕೇಂದ್ರ ಆಹಾರ ಸಂಸ್ಕರಣಾ ಉಧ್ಯಮ ಸಚಿವ ಚಿರಾಗ ಪಾಸ್ವಾನ ರಿಗೆ ಮನವಿ ಸಲ್ಲಿಸಿದ ಸಂಸದ ಜಗದೀಶ್ ಶಟ್ಟರ
WhatsApp Group Join Now
Telegram Group Join Now

ಬೆಳಗಾವಿ : ಬೆಳಗಾವಿಯಲ್ಲಿ “National Institute of Food Technology Entrepreneurship & Management (NIFTEM)” ಸ್ಥಾಪನೆಗೆ ಕೋರಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಮಾಜಿ ಮುಖ್ಯ ಮಂತ್ರಿಗಳು ಜಗದೀಶ ಶೆಟ್ಟರ ಇವರು ಇಂದು ನವ-ದೆಹಲಿಯಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಉಧ್ಯಮ ಸಚಿವರು  ಚಿರಾಗ ಪಾಸ್ವಾನ ಇವರನ್ನು ಭೇಟಿ ಮಾಡಿ ಮನವಿಯನ್ನು ಅರ್ಪಿಸಿದರು.

ಕರ್ನಾಟಕ ರಾಜ್ಯ ಕೃಷಿ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ಇಲ್ಲಿ ವಿವಿಧ ಬೆಳೆಗಳನ್ನು, ಅಂದರೆ, ರಾಗಿ, ಗೋಧಿ, ಭತ್ತ, ದ್ವಿದಳ ಧಾನ್ಯಗಳು, ನಗದು ಬೆಳಗಳೆನಿಸಿದ ಕಬ್ಬು, ತಂಬಾಕು ಇತ್ಯಾದಿ ಬೆಳೆಯಲಾಗುತ್ತದೆ. ಅದರಂತೆ ರಾಜ್ಯದಲ್ಲಿ ಬೆಳೆಯಲಾಗುವ ಮಸಾಲೆ ಪದಾರ್ಥಗಳೆನಿಸಿದ ಕರಿ ಮೆಣಸು, ಏಲಕ್ಕಿ, ಶುಂಟಿ, ಬೆಳ್ಳೂಳ್ಳಿ ಇತ್ಯಾದಿಗಳನ್ನು ಬೇರೆ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿದೆ

ಅದರಂತೆ, ಬೆಳಗಾವಿ ನಗರವು ಉದ್ಯಮ ಬೆಳವಣಿಗೆ ಕ್ಷೇತ್ರದಲ್ಲಿಯೂ ಸಾಕಷ್ಟು ಪ್ರಗತಿ ಸಾಧಿಸಿದೆ. ಹೈಡ್ರಾಲಿಕ್ಸ್ ಉದ್ಯಮ ಪ್ರಪ್ರಥಮವಾಗಿ ಬೆಳಗಾವಿಯಲ್ಲಿ ಸ್ಥಾಪನೆಗೊಂಡಿದೆ.

ಬೆಳಗಾವಿ ನಗರವು ವ್ಯವಸ್ಥಿತವಾಗಿ ಎಲ್ಲ ಅನಕೂಲತೆ, ಅವಕಾಶಗಳು ಕಲ್ಪಿಸಿಕೊಡುವಲ್ಲಿ ಯಶಸ್ಸು ಸಾಧಿಸಿದೆ. ಬೆಳವಣಿಗೆ ರಂಗದಲ್ಲಿ ರಾಜ್ಯದ ಎರಡನೆಯ ರಾಜಧಾನಿಯಾಗಿ ಹೊರ ಹೊಮ್ಮಿದೆ. ಹೀಗಾಗಿ ಬೆಳಗಾವಿ ಕೃಷಿ, ಉದ್ಯಮ ಹಾಗೂ ವ್ಯಾಪಾರ ಕೇಂದ್ರವಾಗಿ ಪರಿಗಣಿಸಲ್ಪಡುತ್ತದೆ.

ಈ ಎಲ್ಲ ಅಂಶಗಳ ಬಗ್ಗೆ ಸಂಸದರಾದ ಜಗದೀಶ ಶೆಟ್ಟರ ಇವರು ಕೇಂದ್ರ ಸಚಿವರಲ್ಲಿ ಪ್ರಸ್ತಾಪಿಸಿ, ಬೆಳಗಾವಿ ನಗರದಲ್ಲಿ National Institute of Food Technology Entrepreneurship & Management (NIFTEM) ಸ್ಥಾಪನೆ ಮಾಡಿ, ರೈತರಿಗೆ, ಉದ್ಯಮದಾರರಿಗೆ, ಗ್ರಾಹಕರಿಗೆ, ಎಲ್ಲ ಮದ್ಯಸ್ಥಗಾರರಿಗೆ ಅನುಕೂಲತೆಯನ್ನು ಕಲ್ಪಸಿ ಕೊಡುವಂತೆ ಮಾನ್ಯ ಕೇಂದ್ರ ಸಚಿವರಲ್ಲಿ ವಿನಂತಿಸಿದರು.

ಬೆಳಗಾವಿಯಲ್ಲಿ National Institute of Food Technology Entrepreneurship & Management (NIFTEM) ಸ್ಥಾಪಿಸುವ ಬಗ್ಗೆ ಇಲ್ಲಿರುವ ಎಲ್ಲ ಅನುಕೂಲತೆ ಬಗ್ಗೆ ಅವಲೋಕಿಸಿ ಬೆಳಗಾವಿಯಲ್ಲಿಯೇ ಇದರ ಸ್ಥಾಪನೆಯ ಅಗತ್ಯ ಭರವಸೆಯನ್ನು ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವರಾದ ಚಿರಾಗ ಪಾಸ್ವಾನ ನೀಡಿರುವುದಾಗಿ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ ಅವರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.

ವರದಿ : ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!