ರಾಯಬಾಗ : ಭೀಮವಾದ ದಲಿತ ಸಂಘರ್ಷ ಸಮಿತಿ ವತಿಯಿಂದ ನಿನ್ನೆ ದಿನ ರಾಯಬಾಗ್ ತಾಲೂಕಿನಲ್ಲಿ ಪುನರ್ ಮಹಿಳಾ ಸಮಿತಿಯನ್ನು ರಚನೆ ಮಾಡಲಾಯಿತು.
ಈ ಸಭೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ. ಸಂಜು ಕಾಂಬಳೆ ಇವರು ಡಾ.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೇ ಸಲ್ಲಿಸಿ, ಡಾ.B.R ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಬಗ್ಗೆ ಮತ್ತು ಅವರ ಮಡದಿ ರಮಾಬಾಯಿ ಯವರ್ ಕುರಿತು ವಿಸ್ತಾರವಾಗಿ ಸಭೆಯಲ್ಲಿ ಮಾತನಾಡಿದರು ಡಿ ವೈಎಸ್ಪಿ ಶ್ರೀ ಪ್ರಶಾಂತ್ ಮುನ್ನೋಳಿ ಇವರು ನಮ್ಮ ಸಭೆಗೆ ಆಗಮಿಸಿದ್ದರು ಸಮುದಾಯದ ಕುಂದು ಕೊರತೆಯೇ ಹಾಗೂ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದರು ಶ್ರೀ ಬಿ ಎಸ್ ಮಂಟೂರೆ ರಾಯಬಾಗ್ ಪೊಲೀಸ್ ಇಲಾಖೆಯ ಸಿಪಿಐ ಅವರು ಕೂಡ ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರು ಆನಂದ್ ಅರಬಳೆ ,ಜಿಲ್ಲಾ ಸಂಚಾಲಕ, ಪರಶುರಾಮ್ ಟೋಣಪೆ ,ಜಿಲ್ಲಾ ಸಂಘಟನಾ ಸಂಚಾಲಕರು,ಕೃಷ್ಣ ಗಸ್ತೆ , ಜಿಲ್ಲಾ ಸಂಘಟನಾ ಸಂಚಾಲಕರು,ಮಹಾದೇವ ಇಟ್ಟಕೇರಿ, ರಾಜ್ಯ ಸಮಿತಿ ಸದಸ್ಯರು ಸಂಗೀತ ಕಾಂಬಳೆ, ಜಿಲ್ಲಾ ಮಹಿಳಾ ಸಂಚಾಲಕರು ಆರತಿ ಕಾಂಬಳೆ, ಸವಿತಾ ಸರಿಕರ್, ಶ್ರೀಮತಿ ಗೀತಾ ಕಾಂಬಳೆ ತಾಲೂಕ ಸಂಚಾಲಕಿಯವರು ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ವರದಿ: ರಾಜು ಮುಂಡೆ