ತುಮಕೂರು : ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿ ಬಿಕೆ ಹಳ್ಳಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಬರುವ ವಡ್ರೆವು ಗ್ರಾಮದಲ್ಲಿ ಈ ಊರಿನ ರೈತರು ಸುಮಾರು 40 ಜನ ರೈತರು ರೈತರು ಸೇರಿ ಆರೋಪ ಮಾಡಿರುತ್ತಾರೆ. ವಡ್ರೆವು ಗ್ರಾಮದ ಸಂಜೀವ ಅವರು ಮಾತನಾಡಿ ನಮ್ಮ ಜಮೀನುಗಳನ್ನು ನಮಗೆ ಗೊತ್ತಾಗುದಂಗೆ ರಾಮಪ್ಪ ಎಂಬುವರು ಉಗ್ರ ನರಸಿಂಹಪ್ಪನಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಫೋರ್ ಜರ್ರಿ ಸಹಿಗಳು ಹಾಕಿ ರಾಮಪ್ಪ ಮತ್ತು ಉಗ್ರ ನರಸಿಂಹ ಇವರಿಬ್ಬರೂ ಸೇರಿ 470 ಎಕರೆ ಜಮೀನುಗಳನ್ನು ನಮಗೆ ಗೊತ್ತಾಗ್ದಂಗೆ ಅಗ್ರಿಮೆಂಟ್ ಮಾಡಿಕೊಂಡು ರೈತರನ್ನು ಮೋಸ ಮಾಡಿದ್ದಾರೆ ಸಂಜೀವ ಈ ಸಂದರ್ಭದಲ್ಲಿ ಮಾತಾಡಿದ್ದಾರೆ.
ಅದೇ ಗ್ರಾಮದ ಇನ್ನೊಬ್ಬರು ರೈತರು ಮಾತನಾಡಿ ನಮ್ಮ ಪಾವಗಡ ತಾಲೂಕಿನ ನಾಗಲ ಮಡಕೆ ಹೋಬಳಿಯಲ್ಲಿ ಹೆಚ್ಚಾಗಿ ಸೋಲಾರ್ ಆಗಿದ್ದ ಕಾರಣದಿಂದ ಈ ಕಡೆ ಇರುವ ಜಮೀನುಗಳಿಗೆ ಹೆಚ್ಚಾಗಿ ಬೇಡಿಕೆ ಇದೆ ಅದರಿಂದ ಕರ್ನಾಟಕ ಮತ್ತು ಆಂಧ್ರ ಸೇರಿ ಹಲವು ಭಾಗಗಳಿಂದ ಜಮೀನುಗಳಿಗೆ ಖರೀದಿ ಮಾಡುವುದಕ್ಕೆ ಹೆಚ್ಚಾಗಿ ಬರುತ್ತಿದ್ದಾರೆ ಅದರಂತೆ ಮಧ್ಯವರ್ತಿಗಳಿಂದ ರೈತರಿಗೆ ಗೊತ್ತಾಗದಂತೆ ಸ್ಥಳೀಯ ರಾದ ರಾಮಪ್ಪ ಅವರು ಉಗ್ರ ನರಸಿಂಹಪ್ಪನವರಿಗೆ ಸುಳ್ಳು ದಾಖಲತೆಗಳನ್ನು ಮಾಡಿ ರೈತರು ಜಮೀನುಗಳು ಪೌವತಿ ಆಗಿರುವ ಹೆಸರುಗಳನ್ನು ಸೇರಿಸಿಕೊಂಡು ನಕಲಿ ದಾಖಲೆಗಳು ಮತ್ತು ಫೋರ್ ಜರ್ರಿ ಸಹಿಗಳು ಸೃಷ್ಟಿ ಮಾಡಿ ರೈತರಿಗೆ ಗೊತ್ತಾಗದ ಹಾಗೆ ರಾಮಪ್ಪ ಎಂಬವರು ಮತ್ತು ಉಗ್ರ ನರಸಿಂಹಪ್ಪನವರು ಸೇರಿಕೊಂಡು ಇವರಿಬ್ಬರು ಸೇರಿಕೊಂಡು ರೈತರು ಮಾರಾಟ ಮಾಡದಂಗೆ ಉಗ್ರ ನರಸಿಂಹಪ್ಪನಿಗೆ ಮಾರಾಟ ಮಾಡಿದ್ದಾರೆಂದು ಫೋರ್ ಜರಿ ಅಗ್ರಿಮೆಂಟ್ ಮಾಡಿಕೊಂಡು ಇದ್ದಾರೆ ಸ್ಥಳೀಯವಾಗಿ ರೈತರ ಫೋನ್ ರೆಕಾರ್ಡ್ ಮತ್ತು ವ್ಯಾಟ್ಸಪ್ ಮುಖಾಂತರ ನಮಗೆ ತಿಳಿದು ಬಂದಿದೆ.
ನಮ್ಮನ್ನು ರಾಮಪ್ಪ ಮತ್ತು ಉಗ್ರ ನರಸಿಂಹಪ್ಪ ಅವರು ನಮಗೆ ಮೋಸ ಮಾಡಿದ್ದಾರೆಂದು ನಮಗೆ ತಿಳಿದು ತಕ್ಷಣ ಊರಿನ ರೈತರು ಎಲ್ಲರೂ ಸೇರಿ ತಿರುಮಣಿ ಪೊಲೀಸ್ ಠಾಣೆಗೆ ದೂರು ಕೊಡುವುದಕ್ಕೆ ಹೋಗಿದ್ದೇವೆ ಆದರೆ ಪೊಲೀಸ್ ಇಲಾಖೆಯಲ್ಲಿ ದೂರು ತೆಗೆದುಕೊಂಡಿಲ್ಲ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ ಮತ್ತು ಆಂಧ್ರ ಭಾಗದ ತಿಮ್ಮಾಪುರ ಗ್ರಾಮಕ್ಕೆ ಸೇರಿದ ರೈತರು ಮಾತನಾಡಿ ನಮ್ಮ ಜಮೀನು ಕರ್ನಾಟಕ ಭಾಗಕ್ಕೆ ಸೇರಿದ ವಡ್ರೆವು ಗ್ರಾಮದಲ್ಲಿ ನಮ್ಮ ಜಮೀನು ಇದೆ ನಮ್ಮದು ಕೂಡ ರಾಮಪ್ಪ ಎಂಬವರು ನಮಗೆ ಗೊತ್ತಾಗದಂತೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮೋಸ ಮಾಡಿದ್ದಾರೆ ಎಂದು ಹೇಳಿದ್ದರು ನಮಗೆ ಸ್ಥಳೀಯ ವಡ್ರೆವು ಗ್ರಾಮಸ್ಥರಿಂದ ಮಾಹಿತಿ ಗೊತ್ತಾಯ್ತು ನಂತರ ನಾವೆಲ್ಲರೂ ಸೇರಿ ಪೊಲೀಸ್ ಠಾಣೆಗೆ ದೂರು ಕೊಡುವುದಕ್ಕೆ ಹೋಗಿದ್ದೆವು ತಿರುಮಣಿ ಪೊಲೀಸ್ ಇಲಾಖೆಯಲ್ಲಿ ನಮ್ಮ ದೂರು ತೆಗೆದುಕೊಂಡಿಲ್ಲ ನಮ್ಮನ್ನು ನಿರ್ಲಕ್ಷ ಮಾಡಿದ್ದಾರೆಂದು ಎಲ್ಲ ರೈತರು ಆರೋಪ ಮಾಡುತ್ತಿದ್ದಾರೆ ಅದಕ್ಕೆ ನಮಗೆ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ರೈತರನ್ನು ಮೋಸ ಮಾಡಿರುವಂತಹ ವ್ಯಕ್ತಿಗಳಾದ ರಾಮಪ್ಪ ಮತ್ತು ಉಗ್ರ ನರಸಿಂಹ ಇವರ ಮೇಲೆ ಕಾನೂನು ರೀತಿಯಲ್ಲಿ ಶಿಕ್ಷೆ ಕೊಡಬೇಕೆಂದು ಜಮೀನಿನ ಮಾಲೀಕರಾದ ರೈತರಗಳು ಒತ್ತಾಯ ಮಾಡುತ್ತಿದ್ದಾರೆ.
ವರದಿ: ಶಿವಾನಂದ