ಸೇಡಂ:- ತಾಲೂಕಿನ ಶೀಲಾರಕೂಟ್ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಮಯ ಊರಲ್ಲಿ ಹಣಮಂತ ಕಲಾಲ್ ಎಂಬ ವ್ಯಕ್ತಿಯ ಕಿರಣ ಅಂಗಡಿಯಲ್ಲಿ ಪರುಶುರಾಮ ಮತ್ತು ಆತನ ಸ್ನೇಹಿತರು ಇಬ್ಬರು ಸೇರಿ ಮದ್ಯ ಖರೀದಿಸಿ ಕುಡಿದರು.
ಕುಡಿದ ನಂತರ ಅವರು ಕೈ ತೊಳೆದು ಮನೆಗೆ ವಾಪಸ್ ಆಗುವ ಸಮಯದಲ್ಲಿ ಕಿರಣ ಅಂಗಡಿ ಪಕ್ಕದಲ್ಲಿರುವ ಉಮೇಶ್ ಕಲಾಲ ಎಂಬಾತನ ಮನೆಕಡೆ ನೀರು ಬಿದ್ದವು ಅದನ್ನು ಅವರು ತಪ್ಪು ಕಲ್ಪನೆ ಮಾಡಿಕೊಂಡು ಮಾದಿಗ ನನ್ ಮಕ್ಳು ಇಲ್ಲಿ ಬಂದು ಕುಡಿದಿದ್ದು ಅಲ್ಲದೆ ಮೂತ್ರೆ ಮಾಡಿದರೆ ಎಂದು ನಿಂದನೆ ಮಾಡಿ ಗಲಾಟೆಗೆ ಕೈ ಹಾಕಿದರು.
ಇದರಲ್ಲಿ ತಪ್ಪು ಯಾರದು ಎಂಬುದನ್ನು ಬಿಟ್ಟರೆ.ಅವರೆಲ್ಲರೂ ಸೇರಿ ಜಾತಿ ನಿಂದನೆ ಮಾಡಿದ್ದು ಮಾತ್ರ ಖಚಿತ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಪರಶುರಾಮ ಮತ್ತು ಆತನ ಸ್ನೇಹಿತರನ್ನು ಗಂಭೀರವಾಗಿ ಗಾಯಾಳು ಆಗುವಂತೆ ಈಡಿಗ ಸಮಾಜದವರು ಹೊಡೆದಿದ್ದಾರೆ ಎಂದು ತಿಳಿದಿದೆ.
ಈ ಗಲಾಟೆಯಲ್ಲಿ ಪರುಶುರಾಮ ಅವರ ತಾಯಿಗೆ ಗಂಬಿರಾ ಗಾಯಲಾಗಿ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದಿದೆ.ಪ್ರಕರಣ ಮುಧೋಳ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪರುಶುರಾಮ ಅವರು ಅವರು ಪತ್ರಿಕೆಗೆ ತಿಳಿಸಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡುವುದೇ ತಪ್ಪು ಅದಲ್ಲದೆ ಜಾತಿ ನಿಂದನೆ ಮಾಡಿ ಗಲಾಟೆಗೆ ಕೈ ಹಾಕಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್