*ಮರಾಠಾ ಅರ್ಬನ್ ಕೊ ಆಪರೇಟಿವ್ ಕ್ರೆಡಿಟ್ ಸೊಸೈಟಿ ಆಡಳಿತ ಮಂಡಳಿ ಚುನಾವಣೆ*
ರಾಮದುರ್ಗ : ಮರಾಠಾ ಅರ್ಬನ್ ಕೊ ಆಪರೇಟಿವ್ ಕ್ರೆಡಿಟ್ ಸೊಸೈಟಿ ರಾಮದುರ್ಗ ಜಿಲ್ಲಾ ಬೆಳಗಾವಿ ಇದರ ಆಡಳಿತ ಮಂಡಳಿ ಚುನಾವಣೆಗೆ ಇಂದು ಚುನಾವಣೆ ನಡೆದಿದ್ದು , ಅಧ್ಯಕ್ಷರಾಗಿ
ಪಿ,ಎಂ. ಜಗತಾಪ ವಕೀಲರು ಹಾಗೂ ಉಪಾಧ್ಯಕ್ಷರಾಗಿ ಎಸ್. ಕೆ .ನಲವಡೆ ಅವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಗಿರೀಶ್ ಯಾವಗಲ್ ಪ್ರಕಟಣೆ ಮಾಡಿದರು, ಅದೇ ರೀತಿ ಆಡಳಿತ ಮಂಡಳಿಗೆ ಎಲ್ಲ 17 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
*ಬಹುಸಾಹೇಬ್ ಶಿಂದೆ, ಆನಂದ್ ಜಗತಾಪ್,ಪ್ರಕಾಶ್ ಬರ್ಗೆ,ಜೈಪ್ರಕಾಶ್ ಶಿಂದೆ, ಸದಾನಂದ್ ಕರಾಂಡೆ, ಶಂಕರ್ ಬಾಬು ಶಿಂದೆ, ಮಹದೇವ್ ಕೊಡಗ, ಪುಂಡಲಿಕಪ್ಪ ಆರೇರ, ಶಂಕರಸಾ ಹಬೀಬ ರಾಮಣ್ಣ ತ್ಯಾಪಿ, ಯುವರಾಜ್ ಸಿಂಧೆ,
ಭಾರತಿದೇವಿ ನಲವಡೆ, ರಾಜಶ್ರೀ ಗಂಗಾಧರ್ ಭೋಸಲೆ,
ಫಕೀರಪ್ಪ ಮಾದರ್,ಕಾಳಪ್ಪ ಹೂವನ್ನವರ, ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.
*ನೂತನ ಅಧ್ಯಕ್ಷರಾಗಿ ಮಾತನಾಡಿ ಕಳೆದ ಆರು ಅವಧಿಯಿಂದ ನಮ್ಮ ಮರಾಠ ಸೊಸೈಟಿಗೆ ಆಡಳಿತ ಮಂಡಳಿ ಹಾಗೂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲು ಸಹಾಯ ಸಹಕಾರ ನೀಡಿದ ಎಲ್ಲ ಸಮಾಜದ ಹಿರಿಯರು ಶೇರುದಾರರು ಠೇವಣಿದಾರರು ಸಹಕರಿಸಿದ್ದಕ್ಕೆ ಧನ್ಯವಾದಗಳು ಹೇಳಿದರು.
*ಬರುವಂತಹ ದಿನಗಳಲ್ಲಿ ಸೊಸೈಟಿಯನ್ನು ಇನ್ನು ಒಳ್ಳೆಯ ರೀತಿಯಿಂದ ನಡೆಸಿಕೊಂಡು ಹೋಗಲು ಠೇವಣಿದಾರರ, ಶೇರುದಾರರ ಹಾಗೂ ಸಿಬ್ಬಂದಿ ವರ್ಗ ಅದೇ ರೀತಿ ನೂತನವಾಗಿ ಚುನಾಯಿತರಾದ ಸದಸ್ಯರು ಸಹಕಾರ ನೀಡಬೇಕೆಂದು ಪಿಎಂ ಜಗತಾಪ ವಕೀಲರು ಹೇಳಿದರು.
*ಈ ಸಂದರ್ಭದಲ್ಲಿ ಸೊಸೈಟಿಯ ಪ್ರಭಾರಿ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಪಟ್ಟನ್ ಸಂದೀಪ್ ಪವರ್ ಹಾಗೂ ಎಲ್ಲ ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ರಜಪೂತ