Ad imageAd image

ಮಹಾ ವನ ಬೌದ್ಧಿಕ ವಿಕಲಚೇತನರ ಮಕ್ಕಳ ವಸತಿ ಯುಕ್ತ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

Bharath Vaibhav
ಮಹಾ ವನ ಬೌದ್ಧಿಕ ವಿಕಲಚೇತನರ ಮಕ್ಕಳ ವಸತಿ ಯುಕ್ತ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ
WhatsApp Group Join Now
Telegram Group Join Now

ಮೊಳಕಾಲ್ಮುರು:ಹಾನಗಲ್ ಗ್ರಾಮದ ಶುಭೋದಯ ನಗರದಲ್ಲಿ ಭಾನುವಾರ ಮಧ್ಯಾಹ್ನ 1:30ಕ್ಕೆ ಮಹಾ ವನ ಬೌದ್ಧಿಕ ವಿಕಲಚೇತನರ ಮಕ್ಕಳ ವಸತಿ ಯುಕ್ತ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಿತು.

ಕೃಷ್ಣ ಟ್ರಸ್ಟ್ ಬೆಂಗಳೂರು, ನಮ್ಮ ಆಶ್ರಮ ಮೊಳಕಾಲ್ಮೂರು ಸಂಸ್ಥೆಗಳ ಸಹಯೋಗದಲ್ಲಿ ಈ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ,ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ ಮಾನವರಿಗೆ ಜಾತಿ ಎಂಬುವುದಿಲ್ಲ ಮಾನವರೆಲ್ಲರೂ ಒಂದೇ ಕುಲ,ಪ್ರತಿಯೊಬ್ಬರನ್ನು ನಾವು ಸಮನಾಗಿ ನೋಡಬೇಕು. ಬುದ್ಧಿಮಾಂದ್ಯ ಮಕ್ಕಳನ್ನು ಮುಖ್ಯ ವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಮಾಡುತ್ತಿರುವ ಈ ಸತ್ಕಾರ್ಯ ನಿಜಕ್ಕೂ ಕೂಡ ಶ್ಲಾಘನೀಯವಾದದ್ದು. ಬುದ್ಧಿಮಾಂದ್ಯ ಮಕ್ಕಳನ್ನು ಪ್ರಾಮಾಣಿಕವಾಗಿ ಸಾಮಾಜಿಕವಾಗಿ ಬದಲಾವಣೆ ತರುವಂತಹ ನಿಟ್ಟಿನಲ್ಲಿ ಕೆಲಸವಾಗುತ್ತಿದ್ದು ಈ ಆಶ್ರಮದ ಸದಾ ಇರುತ್ತೇನೆ.ಸಮಾಜಕ್ಕೆ ತಕ್ಕಮಟ್ಟಿಗೆ ಸಹಾಯ ಸೇವೆ ಮಾಡುವ ಮನಸ್ಸುಗಳು ಬೇಕು.

ಅಂಗವೈಕಲ್ಯ ಒಂದು ಜ್ವಲಂತ ಸಾಮಾಜಿಕ ಸಮಸ್ಯೆ,ಅಂಗವೈಕಲ್ಯ ತಡೆಗಟ್ಟುವಿಕೆ, ಸೂಕ್ತ ಪುನ ರ್ವಸತಿ, ವಿಶೇಷ ಅಗತ್ಯತೆ ಪೂರೈಕೆ ಯೊಂದಿಗೆ ವಿಶೇಷ ಶಿಕ್ಷಣ ನೀಡಿ ಇವರಲ್ಲಿ ಹೊಸ ಭರವಸೆ ಸೃಷ್ಟಿ ಯೊಂದಿಗೆ ಆತ್ಮವಿಶ್ವಾಸ ತುಂಬುವ ಕಾರ್ಯದಲ್ಲಿ ನಿರತವಾಗಿದೆ ಶ್ರೀನಿವಾಸ್ ಮೂರ್ತಿಯವರ ಕಾರ್ಯ ಅನನ್ಯವಾದದ್ದು ಎಂದು ಶ್ಲಾಘಿಸಿದರು.

ಕಾರ್ಯಕ್ರಮ ಕುರಿತಾಗಿ ಪ್ರಾಸ್ತವಿಕವಾಗಿ ನಮ್ಮ ಆಶ್ರಮ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಮಾತನಾಡಿ,ಹುಟ್ಟುವ ಮಕ್ಕಳು ಅಂಗವಿಕಲ, ಬುದ್ಧಿಮಾಂದ್ಯರಾಗಿ ಹುಟ್ಟಿದರೆ ಇದು ಜೀವನ ಪರ್ಯಂತ ತಂದೆ ತಾಯಿಗಳಿಗೆ ತುಂಬಾ ನೋವಿನ ಸಂಗತಿ.ಇಂತಹ ಮಕ್ಕಳಿಗೆ ನಮ್ಮ ಆಶ್ರಮದ ಮುಖಾಂತರ ವಿಶೇಷ ಕಾಳಜಿ ವಹಿಸಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ಇವರಿಗೆ ಸುಧಾರಿತ ಶಿಕ್ಷಣ ನೀಡಿ ಸುಧಾರಿತ ಬದುಕು ಕಲ್ಪಿಸಿ ಕೊಡುವಲ್ಲಿ ನಮ್ಮ ಟ್ರಸ್ಟ್ ಮುಂದಾಗಿದೆ.ಸಚಿವ ಡಿ.ಸುಧಾಕರ್ ಈ ಆಶ್ರಮಕ್ಕೆ 25 ಲಕ್ಷ ಸರ್ಕಾರದ ಅನುದಾನ ನೀಡಿ ನಮ್ಮ ಜೊತೆಗೆ ಸದಾ ಇರುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.ಇನ್ನು ಅನೇಕ ಸ್ನೇಹಿತರು ನನ್ನೊಟ್ಟಿಗೆ ಈ ಆಶ್ರಮದ ಬೆಳವಣಿಗೆಗೆ ಕಾರಣಿಭೂತರಾಗಿದ್ದಾರೆ.

ಬೌದ್ಧಿಕ ವಿಕಲಚೇತನ ಮಕ್ಕಳಿದ್ದ ಕುಟುಂಬಗಳು ಸಂಕಟಮಯವಾಗಿರುವುದನ್ನು ಕಾಣಲಾಗದೇ ಕೆಲ ವರ್ಷಗಳ ಹಿಂದೆ ತಾಲೂಕಿನ ನಾನಾ ಗ್ರಾಮಗಳಿಗೆ ತೆರಳಿ ಅತ್ಯಂತ ಕಡು ಬಡತನದಲ್ಲಿರುವ ಕುಟುಂಬಗಳ ಬುದ್ದಿಮಾಂದ್ಯ ಮಕ್ಕಳ ಪೋಷಣೆ ಕಷ್ಟಕರವಾಗಿರುವ ಕುಟುಂಬಗಳನ್ನು ಗುರ್ತಿಸಲಾಗಿದ್ದು, ಈಗಾಗಲೇ ಪಟ್ಟಣದಲ್ಲಿ ಬಾಡಿಗೆ ಕಟ್ಟಡದಲ್ಲಿ ಇಂತಹ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರ ಭವಿಷ್ಯ ಉಜ್ವಲಗೊಳ್ಳಸುವ ನಿಟ್ಟಿನಲ್ಲಿ ಎರಡು ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.

ಜಿಲ್ಲೆಯಲ್ಲಿ ಸುಮಾರು 612 ಮಕ್ಕಳಿದ್ದು ಅವರನ್ನು ದಿವ್ಯಾಂಗ ಮಕ್ಕಳೆಂದು ಪರಿಗಣಿಸಲಾಗಿದೆ. ತಾಲೂಕಿನಲ್ಲಿ ಸುಮಾರು 150 ರಿಂದ 200 ಮಕ್ಕಳಿದ್ದು ಇವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಸುಧಾರಿತ ಮಕ್ಕಳನ್ನಾಗಿಸಲು ಶ್ರಮಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣ ಟ್ರಸ್ಟ್ ಅಧ್ಯಕ್ಷ ಎಂ ಸದಾನಂದಪ್ಪ ವಹಿಸಿದ್ದರು.ವಿಕಲಚೇತನರ ಹಾಗೂ ಹಿರಿಯ ನಾಗರೀಕರ ನಿರ್ದೇಶನಾಲಯದ ನಿರ್ದೇಶಕ ಟಿ. ರಾಘವೇಂದ್ರ, ತಹಶೀಲ್ದಾರ್ ಜಗದೀಶ್,ರಾಜ್ಯ ಸಂಚಾಲಕರಾದ ಆರ್.ವಿ. ಯದುಪತಿ, ನಮ್ಮ ಆಶ್ರಮ ಟ್ರಸ್ಟ್ ಉಪಾಧ್ಯಕ್ಷರಾದ ಪಿ.ಆರ್ ಶಶಿಧರ್, ಕಾರ್ಯದರ್ಶಿ ಜಿಜೆ ಜನಾರ್ಧನ್ , ಧರ್ಮದರ್ಶಿಗಳಾದ ಡಾ.ಕೆ ರಾಜಶೇಖರ್, ಡಾ.ಪಿಎಂ ಮಂಜುನಾಥ್, ಜಿಕೆ ಕಿರಣ್,ವಿರುಪಾಕ್ಷಪ್ಪ ಸೇರಿದಂತೆ ಹಲವರಿದ್ದರು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!