Ad imageAd image

ಹಿಂದೂ ಹುಲಿ ಡಾ.ಪ್ರವೀಣ್ ಭಾಯ್ ತೊಗಾಡಿಯಾ ಹುಟ್ಟು ಹಬ್ಬದ ಶುಭ ಕೋರಿದ – ವಿ.ಆನಂದ್

Bharath Vaibhav
ಹಿಂದೂ ಹುಲಿ ಡಾ.ಪ್ರವೀಣ್ ಭಾಯ್ ತೊಗಾಡಿಯಾ ಹುಟ್ಟು ಹಬ್ಬದ ಶುಭ ಕೋರಿದ – ವಿ.ಆನಂದ್
WhatsApp Group Join Now
Telegram Group Join Now

ಬೆಂಗಳೂರು : ಸನಾತನ ಹಿಂದೂ ಧರ್ಮದ ಬಗ್ಗೆ ಅಪಾರ ಕಾಳಜಿ ಹೊಂದಿದ ಯಾರಾದರು ಇದ್ದಾರೆಂದರೆ ಅವರೇ ಹಿಂದೂ ಹುಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರವೀಣ್ ಭಾಯ್ ತೊಗಾಡಿಯಾ ಎಂದರೆ ತಪ್ಪಾಗಲಾರದು ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಹೇಳಿದರು.

ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪೀಣ್ಯ 2ನೇ ಹಂತದಲ್ಲಿರುವ ಕರ್ನಾಟಕ ರಾಜ್ಯ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಪ್ರಧಾನ ಕಚೇರಿಯಲ್ಲಿ ಭಾರತೀಯ ಸಂಸ್ಕೃತಿ ಸಂಪ್ರದಾಯ ಪರಂಪರೆದಂತೆ ನಮ್ಮ ಧರ್ಮದ ಆರಾಧ್ಯ ದೈವ ಶ್ರೀ ರಾಮನ ಭಾವಚಿತ್ರಕ್ಕೆ ಪೂಜಾ ಪುನಸ್ಕಾರ ಸಲ್ಲಿಸಿ ಜ್ಯೋತಿ ಬೆಳಗಿಸಿ ಕೆಕ್ ಕತ್ತರಿಸಿ ಡಾ. ಪ್ರವೀಣ್ ಭಾಯ್ ತೊಗಾಡಿಯಾ ಅವರ ಹುಟ್ಟು ಹಬ್ಬವನ್ನು ಸಿಹಿ ತಿನ್ನಿಸುವ ಮೂಲಕ ಸರಳವಾಗಿ ವಿನೂತನವಾಗಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಕೇಂದ್ರ ಸರ್ಕಾರದ ಜೊತೆಗೆ ನಮ್ಮ ರಾಷ್ಟ್ರೀಯ ವರಿಷ್ಟ ಡಾ.ಪ್ರವೀಣ್ ತೊಗಾಡಿಯಾ ಮತ್ತು ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್ ಹಲವಾರು ಹಿಂದೂ ಸಂಘಟನೆಗಳ ಮುಖಂಡರು ಮಾತುಕತೆ ಮಾಡಿ ಗೌರವಾನ್ವಿತ
ರಾಷ್ಟ್ರಪತಿ ರವರಿಗೆ ಬಾಂಗ್ಲಾದೇಶ ಹಿಂದೂಗಳ ಮೇಲೆ ನಡೆಯುತ್ತಿರುವ ವಿಷಯದ ಬಗ್ಗೆ ಮನವರಿಕೆ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಅದಲ್ಲದೆ ನಾವು ಕೂಡಾ ಕಳೆದ ವಾರದಲ್ಲಿ ನಮ್ಮ ಪದಾಧಿಕಾರಿಗಳ ನೇತೃತ್ವದಲ್ಲಿ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮೂಲಕ ರಾಷ್ಟ್ರಪತಿ ರವರಿಗೆ ಕಳಿಸಲಾಗಿದೆ ಮತ್ತು ದೇಶದಲ್ಲಿ ಬೃಹತ್ ಕುಂಭ ಮೇಳ ನಡೆಯಲಿದೆ ದೇಶದ ವಿವಿಧ ಭಾಗಗಳಿಂದ ಬರುವ ಕೋಟ್ಯಂತರ ಜನರಿಗೆ ವಸತಿ, ಊಟ, ಆರೋಗ್ಯ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ವಿ ಆನಂದ್ ಮಾತನಾಡಿದರು.
ಜಿಲ್ಲಾ ಅಧ್ಯಕ್ಷ ಸಂಧರಾಜನ್ ಮಾತನಾಡಿ ಈಗಾಗಲೇ ಕೇಂದ್ರ ವರಿಷ್ಟರು ಪ್ರದಾನ ಮಂತ್ರಿ ನರೇಂದ್ರ ಮೋದಿ ಮತ್ತು ಗ್ರಹ ಸಚಿವ ಅಮಿತ್ ಷಾ ಜೊತೆಗೆ ಮಾತನಾಡಿದ್ದಾರೆ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯ ಶೀಘ್ರದಲ್ಲಿ ಭಗಿಹರಿಸುತ್ತಾರೆ ಯಾವುದೇ ಸಂಶಯಬೇಡ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ರವೀಂದ್ರ ಕುಮಾರ್ ಜಿಕೆಡಬ್ಲ್ಯ ಲೇಔಟ್, ಗೊವೀಂದರಾಜು, ಶಂಕರ್, ಸಿದ್ಧಲಿಂಗಯ್ಯ, ಆಟೋ ಚಾಲಕರ ಸಂಘದ ಮುಖಂಡ ಶಿವಣ್ಣ, ಪಾಂಡೆ, ಗಂಗರಾಜು, ಶ್ರೀಕಾಂತ್, ಅಹಿಂದಾ ರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ಭೀಮ ಸಂದೇಶ ಪತ್ರಿಕೆಯ ಸಂಪಾದಕ ನರಸಿಂಹಮೂರ್ತಿ ವೈ ಜಿ, ಸಂಜೆ ಸಮಯ ಪತ್ರಿಕೆಯ ಪ್ರತಿನಿಧಿ ಕೆಂಪರಾಜು, ಅಯ್ಯಣ್ಣ ಮಾಸ್ಟರ್ ಸೇರಿದಂತೆ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಪದಾಧಿಕಾರಿಗಳು ಕಾರ್ಯಕರ್ತರು ಮುಂತಾದವರು ಇದ್ದರು.

 

ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!