ಚೇಳೂರು: ತಾಲ್ಲೂಕಿನ ಬಿಳ್ಳೂರು ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಬೆಟ್ಟದಲ್ಲಿ ಇಂದು ಮೋಕ್ಷದ ಮೂವಿ ಮೇಕರ್ಸ್ ಫಿಲಂ ಟೀಮ್ ವತಿಯಿಂದ ಬೂಮ್ ಚಲನಚಿತ್ರದ ಅಂಗವಾಗಿ ವಿಜೃಂಭಣೆಯಿಂದ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು, ಅಲ್ಲದೇ ಈ ಸಂದರ್ಭದಲ್ಲಿ ಹಲವಾರು ಗಣ್ಯರು ಹಾಜರಿದ್ದು ಒಳ್ಳೆಯ ರೀತಿಯಲ್ಲಿ ಬೂಮ್ ಚಿತ್ರವು ಮುಂದೆ ಸಾಗಲಿ, ಗೋಪಿ ಎಂಬುವರು ತಮ್ಮ ಭಾಷಣ ಮೂಲಕ ಗೆದ್ದೆ ಗೆಲ್ಲುವೆ ಒಂದು ದಿನ ಒಳ್ಳೆಯತನ ಎಂಬ ಹಿತ -ನುಡಿಗಳನ್ನು ಹಂಚಿಕೊಂಡರು ನಮ್ಮ ಚಿತ್ರವು ಒಳ್ಳೆಯ ರೀತಿಯಲ್ಲಿ ಮೂಡಿಬರಲಿ-ಉತ್ತಮ ಸಾಧನೆಯನ್ನು ಸಾಧಿಸಳಿ ಯಾವುದೇ ಅಡೆಚನೆಗಳಿಗೆ ಆಸ್ಪದ ಕೊಡದೇ ಉತ್ತಮ ರೀತಿಯಲ್ಲಿ ಹೆಸರನ್ನು ಗಳಿಸಲಿ ಹೀಗೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರೊಡ್ಯೂಸರ್ ಟಿ ಆರ್ ನಾಗರಾಜು, ಡೈರೆಕ್ಟರ್ ತಿಲಕ್, ಮ್ಯೂಸಿಕ್ ಡೈರೆಕ್ಟರ್ ಅರುಣ್ ಸ್ಟುಡಿಯೋ ವಿಜಯ್ ಮತ್ತು ನಿಖಿಲ್, ಲೈರಿಕ್ ಚಂದ್ರಶೇಖರ್, ಹೀರೋ ವಿನೋದ್ ಕುಮಾರ್,ನವಾಜ್ (ಚೆರ್ರಿ )
ಹಾಗೂ ಅನಿಲ್ ಕುಮಾರ್, ಇನಾಯತ್,ಇನ್ನು ಹಲವರು ಇದೇ ವೇಳೆ ಹಾಜರಿದ್ದರು.
ವರದಿ :ಯಾರಬ್. ಎಂ.




