ಕಾಗವಾಡ : ಪಂಚಮಲಿಂಗಾಯಿತರಿಗೆ 2a ಹಾಗೂ ಲಿಂಗಾಯತ್ ಒಬಿಸಿ ಮೀಸಲಾತಿ ಚಳುವಳಿಗಾರರ ಮೇಲೆ ಲಾಠಿ ಚಾರ್ಜ್ ವಿರೋಧಿಸಿ ಕಾಗವಾಡದಲ್ಲಿ ರಸ್ತೆ ತಡೆದು ಪ್ರತಿಭಟನೆ.
ಕೂಡಲಸಂಗಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಂಚಮಸಾಲಿ ದೀಕ್ಷ ಮೊಲೆಗೌಡ ಗೌಡ ಗೌಡ ಲಿಂಗಾಯತರಿಗೆ 2a ಹಾಗೂ ಲಿಂಗಾಯತ್ ಒಬಿಸಿ ಮೀಸಲಾತಿ ಚಳುವಳಿಗಾರರ ಮೇಲೆ ಲಿಂಗಾಯತ್ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡಿದ ಮಾರಣಾಂತಿಕ ಹಲ್ಲೆ ಖಂಡಿಸಿ ರಸ್ತೆ ತಡಿ ಚಳುವಳಿ ಹಾಗೂ ಬೃಹತ್ ಪ್ರತಿಭಟನೆ ಹಾಗೂ ಎಡಿಜಿಪಿ ಪೊಲೀಸ್ ಅಧಿಕಾರಿ ಯತೀಂದ್ರ ಅವರನ್ನು ವಜಾ ಗೊಳಿಸುವ ಕುರಿತು ಪ್ರತಿಭಟನೆ ಮಾಡಲಾಯಿತು.
ಮಂಗಳವಾರ ದಿನಾಂಕ 3 ರಂದು ಲಿಂಗಾಯತ್ ಪಂಚಮಸಾಲಿ ಸಮುದಾಯದ 2a ಮೀಸಲಾತಿ ಹೋರಾಟವನ್ನು ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ದುರಷ್ಟದಿಂದ ಲಾಟಿಚಾರ್ಜ್ ನೆಪದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಸುಮಾರು ಸಾವಿರಾರು ಜನರಿಗೆ ಗಂಭೀರ ಗಾಯಗಳಾಗಿದ್ದವು ನೂರಾರುಕ್ಕು ಹೆಚ್ಚು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವಿಷಯ ಕುರಿತು ಕಾಗವಾಡದಲ್ಲಿ ಲಿಂಗಾಯತ ಸಮುದಾಯ ವತಿಯಿಂದ ತಡೆದು ಬೃಹತ್ ಹೋರಾಟ ಮಾಡಲಾಯಿತು.
ಈ ಸಂದರ್ಭದಲ್ಲಿ ಎಲ್ಲ ಪಂಚಂ ಲಿಂಗಾಯತ್ ಸಮುದಾಯದ ಮುಖಂಡರು ಹಾಗೂ ಇನ್ನು ಇತರರುಉಪಸ್ಥಿತರಿದ್ದರು.
ವರದಿ ರಾಜು ಮುಂಡೆ