Ad imageAd image

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಸತತ ನಾಲ್ಕು ದಿನಗಳಿಂದ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಹೋರಾಟ ಚಿಕ್ಕೋಡಿ ವಕೀಲರು ಸಹಭಾಗಿ.

Bharath Vaibhav
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಸತತ ನಾಲ್ಕು ದಿನಗಳಿಂದ ಜಿಲ್ಲಾ ಹೋರಾಟ ಸಮಿತಿ ವತಿಯಿಂದ  ಹೋರಾಟ ಚಿಕ್ಕೋಡಿ ವಕೀಲರು ಸಹಭಾಗಿ.
WhatsApp Group Join Now
Telegram Group Join Now

ಚಿಕ್ಕೋಡಿ: ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗಾಗಿ ಪಟ್ಟಣದ ಎ.ಸಿ.ಕಚೇರಿ ಎದುರಿಗೆ ನಿರಂತರ 4 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ವೇದಿಕೆಗೆ, ಆಗಮಿಸಿದ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಹಾಗೂ ನ್ಯಾಯವಾದಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿದರು,

ನ್ಯಾಯವಾದಿಗಳಾದ ಬಿ.ಆರ್.ಯಾದವ ಮಾತನಾಡಿ, ಚಿಕ್ಕೋಡಿ ಭಾಗದ ಜನರಿಗೆ ಅಭಿವೃದ್ಧಿ ಕಾರ್ಯಗಳು ಕನಸಾಗಿಯೇ ಉಳಿದಿವೆ, ಚಿಕ್ಕೋಡಿ ಜಿಲ್ಲೆ ಆದರೆ ಮಾತ್ರ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ ಎಂದು ಹೇಳಿದರು, ಎಸ್.ಆರ್.ವಾಲಿ ಅವರು ಮಾತನಾಡಿ, ದಶಕಗಳಿಂದ ಹೋರಾಟ ಸಮಿತಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡುತ್ತಲಿದೆ, ಹಲವಾರು ಹಿರೀಯ ನ್ಯಾಯವಾದಿಗಳು ಸಕ್ರೀಯವಾಗಿ ಭಾಗವಹಿಸಿ 25 ವರ್ಷಗಳು ಕಳೆದರೂ ಸಹ ಯಶಸ್ಸು ದೊರೆಯದೇ ನಿರಾಶರಾಗಿದ್ದಾರೆ, ರಾಜಕಾರಣಿಗಳು ನಮ್ಮ ಬೇಡಿಕೆಗೆ ಸ್ಪಂದಿಸಿ ಈ ಚಳಿಗಾಲ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯಾಗಿ ಘೋಷಿಸಬೇಕು, ಇಲ್ಲವಾದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು, ಪಿ.ಆರ್.ಕೋಂಕನೆ ಮಾತನಾಡಿ ಬೆಳಗಾವಿ ರಾಜ್ಯದಲ್ಲಿಯೇ ಭೌಗೋಳಿಕವಾಗಿ ವಿಸ್ತಾರವಾದ ಜಿಲ್ಲೆ, ದಕ್ಷಿಣದಲ್ಲಿ ರಾಮನಗರ, ವಿಜಯನಗರ, ಹಾಸನ, ಮಂಡ್ಯ, ಗದಗ ಮುಂತಾದ ಹಲವಾರು ಚಿಕ್ಕ ಚಿಕ್ಕ ವಿಸ್ತೀರ್ಣ ಹೊಂದಿರುವ ಭಾಗಗಳನ್ನು ಜಿಲ್ಲೆಯಾಗಿ ಮಾಡಿದ್ದೀರಿ, ನಮ್ಮ ಭಾಗದ ಜನರನ್ನು ಏಕೆ ಬೆಳೆಯಲು ಬಿಡುತ್ತಿಲ್ಲಾ ಎಂದು ಪ್ರಶ್ನಿಸಿದರು, ಎಮ್.ಎಸ್.ಈಟಿ ಮಾತನಾಡಿ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿನ ಕೊನೆಯ ಹಳ್ಳಿಯ ಜನರು ಬೆಳಗಾವಿ ಜಿಲ್ಲಾ ಸ್ಥಾನಕ್ಕೆ ಹೋಗಲು ಒಂದು ದಿವಸ, ಕೆಲಸಕ್ಕೆ ಒಂದು ದಿವಸ, ಮರಳಿ ಬರಲಿಕ್ಕೆ ಒಂದು ದಿವಸ ಹೀಗೆ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಳ್ಳುವ ಪರಿಸ್ಥಿತಿ ಆಗಿದೆ, ನಮ್ಮ ಭಾಗದ ಜನರು ವಿದ್ಯೆ, ಆರೋಗ್ಯ, ಮೂಲ ಭೂತ ಸೌಕರ್ಯಗಳಿಂದ ವಂಚಿತರಿದ್ದಾರೆ, ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ, ಇದಕ್ಕೆಲ್ಲ ಕಾರಣ ಬೆಳಗಾವಿ ಜಿಲ್ಲೆಯ ವಿಸ್ತೀರ್ಣ ಮತ್ತು ಅಪಾರವಾದ ಜನಸಂಖ್ಯೆ , ಚಿಕ್ಕೋಡಿ ಜಿಲ್ಲೆಯಾದರೆ ಆಡಳಿತದ ವಿಕೇಂದ್ರಿಕರಣ ಆಗಿ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಮತ್ತು ನ್ಯಾಯವಾದಿಗಳು ಆದ, ಎಚ್.ಎಸ್.ನಸಲಾಪುರೆ, ಎಸ್.ಎಲ್.ಯರನಾಳೆ, ಮೋಹನ ಮೋಟಣ್ಣವರ, ರವಿ ಹುದ್ದಾರ, ಬಿ.ಎನ್.ಪಾಟೀಲ, ಮಹಾದೇವ ಭೆಂಡವಾಡೆ, ಎಮ್.ಆರ್.ಸಗರೆ, ವಿನೋದ ಪಾಟೀಲ, ಅರುಣ ಬೋಳಾಜ, ಎಮ್.ಕೆ.ಪೂಜೇರಿ, ಎ.ಎ.ಚೌಗಲಾ, ಡಿ.ಆರ್.ಕೋಟ್ಯಾಪ್ಪಗೋಳ, ರವಿ ಹಿರೆಕೋಡಿ, ಅಶೋಕ ಹರಗಾಪುರೆ, ಎಸ್.ವಾಯ್.ಪಾಟೀಲ ಹಾಗೂ ನೂರಾರು ಸಂಖ್ಯೆಯಲ್ಲಿ ನ್ಯಾಯವಾದಿ ಬಾಂಧವರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!