Ad imageAd image

ಆಲಮಟ್ಟಿ ರೈಲ್ವೆ ನಿಲ್ದಾಣದಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

Bharath Vaibhav
ಆಲಮಟ್ಟಿ ರೈಲ್ವೆ ನಿಲ್ದಾಣದಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
WhatsApp Group Join Now
Telegram Group Join Now

ಆಲಮಟ್ಟಿ: ಆಲಮಟ್ಟಿ ರೈಲ್ವೆ ನಿಲ್ದಾಣದಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಸಂಸದರ ಸೂಚನೆಯಂತೆ ರೈಲ್ವೆ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ ವೇಳೆ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಕೆಳಸೇತುವೆಯ ಅಗತ್ಯತೆ ಕುರಿತು ಮನವರಿಕೆ ಮಾಡಿದರು.

ಆಲಮಟ್ಟಿ ರೆಲ್ವೆ ನಿಲ್ದಾಣದಲ್ಲಿರುವ 3ನೇ ಪ್ಲಾಟಪಾರ್ಮಮನಲ್ಲಿ ಪ್ರಯಾಣಿಕರಿಗೆ ಸರಿಯಾದ ನಿಲುಗಡೆ ಹಾಗು ನೇರಳಿನ ವ್ಯವಸ್ಥೆಗಳು ಇರುವುದಿಲ್ಲ. ರೆಲ್ವೆ ನಿಲ್ದಾಣದ ಹತ್ತಿರದ ಗ್ರಾಮಸ್ಥರಿಗೆ ಹೋಗಲು ಬರಲು ಕೆಳಸೇತುವೆ ಮುಖ್ಯವಾಗಿರುತ್ತದೆ. ಹಾಗೂ ಉಪಹಾರ ಕೇಂದ್ರ, ಸಾರ್ವಜನಿಕ ಸೌಚಾಲಯ ಈ ಎಲ್ಲ‌ ಸೇವೆಗಳನ್ನು 3ನೇ ಪ್ಲಾಟಪಾರ್ಮನಲ್ಲಿ ಒದಗಿಸಬೇಕೆಂದು ಜನರ ಬೇಡಿಗಳ ಕುರಿತಾಗಿ ರೈಲ್ವೆ ಅಧಿಕಾರಿಗಳ ಮುಂದೆ ಪ್ರಸ್ತಾಪನೆ ಮಾಡಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿಸದಸ್ಯ ಶಿವಾನಂದ ಅವಟಿ, ಗ್ರಾಪಂ ಮಾಜಿಉಪಾಧ್ಯಕ್ಷ ಎನ್.ಎ.ಪಾಟೀಲ್, ತಾಪಂ ಮಾಜಿಸದಸ್ಯ ಮಲ್ಲು ರಾಠೋಡ, ರಮೇಶ ರೇಶ್ಮಿ, ಎಸ್.ಎಂ.ಜಲ್ಲಿ, ಶಿವಾನಂದ ಕೋಳಿ, ಮಹಾಂತೇಶ ಹಿರೇಮಠ, ಶ್ರೀಧರ ಬಿದರಿ, ರಮೇಶ ಆಲಮಟ್ಟಿ, ವಸಂತ ಬಳ್ಳೊಳ್ಳಿ, ಮುರಳಿ ಬಡಿಗೇರ, ಭೀಮಣ್ಣ ಪತ್ತಾರ, ಭೀಮಶಿ ಗೌಡರ, ಸಿ.ಜಿ.ಹುಂಡೇಕಾರ, ಎಂ.ಡಿ.ಬಾಗಲಕೋಟ, ಮೀರಾಸಾ ವಡ್ಡರ, ರಾಘವೇಂದ್ರ ಬಂಡಿವಡ್ಡರ, ಹಾಗೂ ಅಧಿಕಾರಿಗಳಾದ ಎಇಇ ಸೋಮನಾಥ ಮತ್ತಿತರಿದ್ದರು.

ವರದಿ: ಕೃಷ್ಣಾ ಎಚ್‌ ರಾಠೋಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!