ರಾಮದುರ್ಗ:ಆಧುನಿಕತೆಯ ಭರಾಟೆಯಲ್ಲಿ ವಿಸ್ಮೃತಿಗೆ ಒಳಗಾಗುತ್ತಿರುವ ನಮ್ಮ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯ ಒಂದು ಕಿರು ನೋಟ ಅವಲೋಕನ ಹಾಗೂ ಪ್ರದರ್ಶನ ಕಾರ್ಯಕ್ರಮವು ಜರುಗಿತು.ಯುವಜನರು ನಮ್ಮ ದೇಶಿಯ ಸಂಸ್ಕೃತಿಯ ಅರಿವು ಮೂಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ತಾಲೂಕಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಸುರೇಬಾನ-ಮನಿಹಾಳ ಮಹಾ ವಿದ್ಯಾಲಯದಲ್ಲಿ ನಡೆದ ನಮ್ಮೂರು-ನಮ್ಮೂಟ ಕಾರ್ಯಕ್ರಮವನ್ನು ಪತ್ರಕರ್ತರಾದ ಎಸ್ ಆರ್ ಗುರುಬಸಣ್ಣವರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಸಾಂಪ್ರದಾಯಿಕ ಅಡುಗೆ,ಆಹಾರ ಪದಾರ್ಥಗಳು ಬಿಳಿಜೋಳ ರೊಟ್ಟಿ, ಕೊಬ್ಬರಿ ಸಾರು, ಶೇಂಗಾ ಚಟ್ನಿ, ತುಪ್ಪದಲ್ಲಿ ಮಾಡಿದ ಸದಕಿನ ಉಪ್ಪಿಟ್ಟು, ಸಜ್ಜೆ ಕಡುಬು, ಜೋಳದ ಪಡ್ಡು, ಉಳ್ಳಾಗಡ್ಡಿ ಪಚಡಿ, ಒಣಕಾರದ ಜುನುಕದ ವಡೆ, ಹೂರಣ ಕಡುಬು, ಕೊಬ್ಬರಿ ಕರ್ಚಿಕಾಯಿ, ಉದರ ಸಜ್ಜಕ, ಸುರಳ ಹೋಳಿಗೆ ಸೇರಿದಂತೆ ಇನ್ನೂ ವಿವಿಧ ರೀತಿಯ ಅಡುಗೆ, ಆಹಾರ ಪದಾರ್ಥಗಳ ಪ್ರದರ್ಶನ ಹಾಗೂ ತೊಡುಗೆ ಆಚರಣೆಗಳ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ರಮೇಶ ಮೋಟೆ, ಉಪನ್ಯಾಸಕರಾದ ರಮೇಶ ಬಡಿಗೇರ,ಪ್ರವೀಣ ಕೋಟಿ,, ಎಸ್.ಬಿ.ಪಾಟೀಲ,ಈರಪ್ಪ, ಪ್ರಕಾಶ ವಡ್ಡರ,ಮಹಾಲಕ್ಷ್ಮೀ ಮುನ್ನವಳ್ಳಿಮಠ, ಪತ್ರಕರ್ತ ಕುಮಾರ ಮಾದರ ಸೇರಿದಂತೆ ಎಲ್ಲ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ವರದಿ: ಕುಮಾರ ಎಂ




