Ad imageAd image

ಐತಿಹಾಸಿಕ ಮುದಗಲ್ಲ ಪಟ್ಟಣದಲ್ಲಿ ಆಶಾಪುರ ನಾಟಕ ಕಂಪನಿ.

Bharath Vaibhav
ಐತಿಹಾಸಿಕ ಮುದಗಲ್ಲ ಪಟ್ಟಣದಲ್ಲಿ ಆಶಾಪುರ ನಾಟಕ ಕಂಪನಿ.
WhatsApp Group Join Now
Telegram Group Join Now

ಮುದಗಲ್ಲ :- ರಂಗಭೂಮಿ ಮತ್ತು ರಂಗ ಕಲಾವಿದರ ಉಳಿವಿಗಾಗಿ ಸತತ 50 ವರ್ಷಗಳಿಂದ ಶ್ರಮಿಸುತ್ತಿರುವ ತಮಗೆ ಸುಂದರವಾದ ಕೋಟೆ ಗೆ ಹೆಸರಾಗಿರುವ ಮುದಗಲ್ಲ ಪಟ್ಟಣದಲ್ಲಿ ಭಾಗದ ಕಲಾಸ್ತಕರ ಸಹಕಾರ ಬೇಕು, ಬಹುವರ್ಷಗಳ ನಂತರ ನನ್ನದೆ ಆದ ಸ್ವತಃ ನಾಟಕ ಕಂಪನಿಯೊಂದಿಗೆ ನಿಮ್ಮ ಮುದಗಲ್ಲ ಪಟ್ಟಣಕ್ಕೆ ರಂಗ ಪ್ರದರ್ಶನಕ್ಕೆ ಬಂದಿದ್ದಾಗಿ ಆಶಾಪುರದ ಸಂಗಮೇಶ್ವರ ನಾಟ್ಯ ಸಂಘದ ಒಡತಿ, ನಾಟಕ ಅಕಾಡೆಮಿ ಮಾಜಿ ಸದಸ್ಯೆ ಪ್ರೇಮಾ ಗುಳೇದಗುಡ್ಡ ಹೇಳಿದ್ದಾರೆ.

ಕೋಟೆ ಪಕ್ಕದ ಸಂತೆ ಮೈದಾನದಲ್ಲಿ ಆವರಣದಲ್ಲಿ ಹಮ್ಮಿಕೊಂಡಿದ್ದ ರಂಗ ಸಜ್ಜಿಕೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 34 ವರ್ಷಗಳಿಂದ ನಮ್ಮ ಯಜಮಾನ ಬಸವರಾಜ ಪಾಟೀಲ್ ನೇತೃತ್ವದಲ್ಲಿ ನಡೆದು ಬಂದ ಈ ನಾಟಕ ಕಂಪನಿ ಈಗ 9 ವರ್ಷಗಳಿಂದ ತಾವೇ ಮುನ್ನಡೆಸಿ ಕೊಂಡು ಬರುತ್ತಿರುವುದಾಗಿ ಹೇಳಿದರು.

ಓರ್ವ ಮಹಿಳೆ ಒಂದು ನಾಟಕ ಕಂಪನಿ ನಡೆಸುವುದು ಸಾಮಾನ್ಯ ಮಾತಲ್ಲ. ತಮ್ಮಂತೆ ಇನ್ನೂ ಮೂವರು ಮಹಿಳೆಯರು ಕಂಪನಿ ನಡೆಸುತ್ತಿದ್ದಾರೆ. ಇದು ಕಷ್ಟ ಕೆಲಸ. ಆದರೂ ರಂಗಭೂಮಿ, ಕಲಾವಿದರು ಮತ್ತು ಕಲೆಯ ಉಳಿವಿಗಾಗಿ ತಾವು ಸಾಯುವವರೆಗೂ ಕಂಪನಿ ಮುನ್ನಡೆಸಿಕೊಂಡು ಹೋಗುವುದಾಗಿ ನುಡಿದರು.

ಚಿಕ್ಕಂದಿನಿಂದಲೇ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ, ನೃತ್ಯ ಮಾಡುತ್ತಲೇ ರಂಗಭೂಮಿಯಲ್ಲಿ ಬೆಳೆದಿದ್ದು, ಕಲಾವಿದೆಯ ಮಗಳಾಗಿ 50 ವರ್ಷಗಳಿಂದ ರಾಜ್ಯದ ಉದ್ದಗಲಕ್ಕೂ ಸಂಚರಿಸಲಾಗುತ್ತಿದೆ. ಸಮಾಜ ಮತ್ತು ಸರಕಾರದಿಂದ ದೊರೆಯಬೇಕಾದ ಸ್ಥಾನ ಮಾನಗಳು ದೊರೆತಿವೆ.

ಈಗೇನಿದ್ದರೂ ರಂಗಭೂಮಿ ಉಳಿಯಬೇಕು ಮತ್ತು ಕಲಾವಿದರು ಬೆಳೆಯಬೇಕು ಎಂಬ ಉದ್ದೇಶದಿಂದ ಮಾತ್ರ ಕಂಪನಿ ಮುನ್ನಡೆ ಸಲಾಗುತ್ತಿದೆ ಎಂದರು.

ಈ ನಾಟಕದಲ್ಲಿ ಅಶ್ಲೀಲ ಪದಗಳಿಗೆ ಅವಕಾಶವಿಲ್ಲ. ಕ್ಯಾಬರೆ ನೃತ್ಯಗಳಿಲ್ಲ. ಉತ್ತಮ ಸಂಭಾಷಣೆ, ಉತ್ತಮ ಹಾಡು, ಸಂಗೀತ ಮತ್ತು ಅಭಿನಯದೊಂದಿಗೆ ಕಲಾಸ್ತಕರ ಮನ ತಣಿಸುವುದಾಗಿ ಅವರು ನುಡಿದರು.

34 ವರ್ಷಗಳಲ್ಲಿ ರಾಜ್ಯದೆಲ್ಲೆಡೆ ವೀರರಾಣಿ ಕಿತ್ತೂರ ಚನ್ನಮ್ಮ , ಎಚ್ಚರ ತಂಗಿ ಎಚ್ಚರ, ದೇಸಾಯರ ದರ್ಬಾರ್, ಖಾನಾವಳಿ ಚೆನ್ನಿ ಸೇರಿದಂತೆ ಅನೇಕ ನಾಟಕಗಳು ಸಾವಿರಾರು ಪ್ರಯೋಗಗಳನ್ನು ಕಂಡಿವೆ. ಇಲ್ಲಿಯೂ ಕಲಾಸ್ತಕರು ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಅದರಂತೆ ರವಿವಾರ ದಂದು ವೈಭವದಿಂದ ಪ್ರಾರಂಭ ವಾಗುತ್ತದೆ ಪತ್ರಿದಿನ 2 ಆಟ ಸಂಜೆ 6:15 ಕ್ಕೆ 9,30 ಆರಂಭ ವಾಗುತ್ತದೆ ಇದು ಒಂದು ಪುಲ್ ಕಾಮಿಡಿ ನಾಟಕ ಹಿಂಗಾದರ ಹ್ಯಾಂಗ ?

ಈ ಸಂದರ್ಭದಲ್ಲಿ ಪೇಮಾ ಬಸವರಾಜ ಪಾಟೀಲ್ , ಮಂಜು ಗುಳೇದ ಗುಡ್ಡ ,ಭವಾನಿ ಹಿರಿಯೂರ ,ಪರಶುರಾಮ ,

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!