Ad imageAd image

ಉತ್ತರ ಕರ್ನಾಟಕ ದಿಲ್ಲಿ ವಿಶೇಷ ಸಂಸದರು ಪ್ರಕಾಶ್ ಅಣ್ಣಾ ಹುಕ್ಕೇರಿ ಯವರ ಹಲವು ಬೇಡಿಕೆ ಪೂರೈಸುವಂತೆ ಪ್ರಸ್ತಾಪ.

Bharath Vaibhav
ಉತ್ತರ ಕರ್ನಾಟಕ ದಿಲ್ಲಿ ವಿಶೇಷ ಸಂಸದರು ಪ್ರಕಾಶ್ ಅಣ್ಣಾ ಹುಕ್ಕೇರಿ ಯವರ ಹಲವು ಬೇಡಿಕೆ ಪೂರೈಸುವಂತೆ ಪ್ರಸ್ತಾಪ.
WhatsApp Group Join Now
Telegram Group Join Now

ಬೆಳಗಾವಿ:  ಸದನದಲ್ಲಿ ಉತ್ತರ ಕರ್ನಾಟಕ ದಿಲ್ಲಿ ವಿಶೇಷ ಸಂಸದರು ಪ್ರಕಾಶ್ ಅಣ್ಣಾ ಹುಕ್ಕೇರಿ ಯವರ ಹಲವು ಬೇಡಿಕೆ ಪೂರೈಸುವಂತೆ ಪ್ರಸ್ತಾಪ.

ಹೌದು ಈ ವರ್ಷದ ಚಳಿಗಾಲ ಆದಿವೇಶನದ ಸದನದಲ್ಲಿ ಕರ್ನಾಟಕ ದೆಹಲಿ ವಿಶೇಷ ಸಂವಸದರಾದ ಶ್ರೀ ಪ್ರಕಾಶಅಣ್ಣಾ ಹುಕ್ಕೇರಿ ಅವರು ಸುಮಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ವರ್ಷದ ಸದನದಲ್ಲಿ ಅತಿ ಸರಳವಾಗಿ ಪ್ರಸ್ತಾಪಿಸಿದರು.

ಒಂದು ಕೃಷ್ಣ ಮೇಲ್ದಂಡೆ ಯೋಜನೆ ಪ್ರತಿ ವರ್ಷ ಹಿಡಕಲ್ ಡ್ಯಾಮ್ ಹಾಗೂ ಆಲಮಟ್ಟಿ ಡ್ಯಾಮನಲ್ಲಿ ತುಂಬುವ ನೀರಿನ ಒತ್ತಡ ಹೆಚ್ಚಾಗಿ ಕೃಷ್ಣಾ ನದಿಯ ಮೇಲ್ದಂಡೆಯ ಕೆಲವು ಗ್ರಾಮಗಳು ಮುಳುಗಡೆಯಾಗುತ್ತಿವೆ.
ಪ್ರತಿ ವರ್ಷ ಸಂಬಂಧಪಟ್ಟ ಅಲ್ಲಿಯ ಜನರು ಈ ಪ್ರವಾಹದಿಂದ ತತ್ತರಿಸುತ್ತಿದ್ದಾರೆ ಆ ಗ್ರಾಮದ ಜನರನ್ನು ಸ್ಥಳಾಂತರಗೊಳಿಸಬೇಕು ಮತ್ತು ಅವರಿಗೆ ಮನೆ ಕಟ್ಟಲು ಹಣದ ಸಹಾಯ ನೀಡಬೇಕು ಎಂದು ಸಚಿವರಾದ ನಿರಾಣಿ ಅವರಿಗೆ ವಿನಂತಿಸಿದರು.

ಎರಡು ಬೆಳಗಾವಿಯಲ್ಲಿ ಕಂದಾಯ ಕೇಂದ್ರದಿಂದ 2017ರ ಸುಮಾರು 290 ಹಾಸ್ಪಿಟಲವನ್ನು 187 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಜೂರು ಮಾಡಿ ಕಟ್ಟಡ ನಿರ್ಮಾಣ ಮಾಡಿತ್ತು ಅದನ್ನು ಈಗ ಸಂಬಂಧಪಟ್ಟ ಇಂಜಿನಿಯರರು ಈಗಾಗಲೇ ಹಸ್ತಾಂತರ ಗೊಳಿಸಿದ್ದಾರೆ ಆದರೆ ಅದಕ್ಕೆ ಬೇಕಾಗುವ ಹತ್ತು ಜನ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಈ ಗ್ರೂಪು ಡಿ ಗ್ರೂಪ್ ಸಿ ಗ್ರೂಪ್ ಡಿ ಗ್ರೂಪ ಎಂದು ಎಲ್ಲವು ಸೇರಿ ಒಟ್ಟು 558 ಜನರನ್ನ ನೇಮಿಸಿ ನೇಮಿಸಿ ಅದಕ್ಕೆ ಪ್ರಾರಂಭಿಸಲು ಬರೆ 38 ಕೋಟಿ ರೂಪಾಯಿ ಬೇಕಾಗಿರುತ್ತದೆ ಅದನ್ನು ಒದಗಿಸಿ ಈ ಸೂಪರ್ ಸ್ಪೆಷಲಿಸ್ಟ್ ಆಸ್ಪತ್ರೆಯನ್ನು oಪ್ರಾರಂಭಿಸಿ ಜನರಿಗೆ ಒಪ್ಪಿಸಬೇಕು ಎಂದು ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದರು.

ಇನ್ನು ಮುಖ್ಯವಾದ ಬೇಡಿಕೆ ಎಂದರೆ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಬೇಕು ಈಗಾಗಲೇ ಸುಮಾರು ವರ್ಷಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ ಆದರೆ ಇನ್ನುವರೆಗೆ ಅದು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯ ಕನಸು ನನಸಾಗಿಲ್ಲ ಆಗುವವರೆಗೂ ಹೋರಾಟ ಬಿಡುವುದಿಲ್ಲ ದಯಮಾಡಿ ಈ ಸಲ ಈ ಬೇಡಿಕೆಯನ್ನು ಈಡೇರಿಸಬೇಕೆಂದು ಕೇಳಿಕೊಂಡರು.

ಅದರಂತೆ ಇನ್ನು ಹಲವು ಬೇಡಿಕೆಗಳನ್ನು ಇಟ್ಟು ಉತ್ತರ ಕರ್ನಾಟಕ ಚಿಕ್ಕೋಡಿಯ ಕರ್ನಾಟಕ ದೆಹಲಿ ವಿಶೇಷ ಸಂಸದರಾದ ಪ್ರಕಾಶಣ್ಣ ಹುಕ್ಕೇರಿ ಅವರು ಈ ಸದನದಲ್ಲಿ ನಮ್ಮ ಎಲ್ಲ ಬೇಡಿಕೆಗಳನ್ನು ಮಾತನಾಡುವ ಅವಕಾಶವನ್ನು ತೆಗೆದುಕೊಂಡು ಚಳಿಗಾಲದ ಸದನದಲ್ಲಿ ಪ್ರಸ್ತಾಪಿಸಿದ್ದಾರೆ ಇನ್ನು ಕಾದು ನೋಡಬೇಕು ಯಾವ ಯಾವ ಬೇಡಿಕೆ ಈಡೇರುತ್ತದೆ ಎಂಬುದನ್ನು ಬನ್ನಿ ಕೇಳೋಣ.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!