ನಿಪ್ಪಾಣಿ ಕೃಷಿಕರಿಗಾಗಿ 50ರಷ್ಟು ರಿಯಾಯಿತಿ ದರದಲ್ಲಿ ಪಂಪ ಸೆಟ್ ವಿತರಣೆ. ಪಂಕಜ್ ಪಾಟೀಲ ಯುವ ವೇದಿಕೆಯ ಯೋಜನೆ.
ಕೃಷಿಕರ ಹಾಗೂ ಬಡ ರೈತರ ಅನುಕೂಲಕ್ಕಾಗಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪಂಕಜ್ ಪಾಟೀಲ್ ಯುವ ವೇದಿಕೆಯ ವತಿಯಿಂದ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಶಾಂತಿನಗರ ಸರ್ಕಲ ದಲ್ಲಿ 50ರಷ್ಟು ರಿಯಾಯಿತಿ ದರದಲ್ಲಿ ಔಷದ ಸಿಂಪರಣೆಯ ಪಂಪ ಸೆಟ್ ಬ್ಯಾಟರಿ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ಸೇರಿದಂತೆ ಕೃಷಿ ಸಲಕರಣೆಗಳನ್ನು ವಿತರಿಸಲಾಯಿತು.

ಇದರಲ್ಲಿ ಎಲೆಕ್ಟ್ರಿಕ್ ಹಾಗೂ ವಿವಿಧ ಬೆಳೆಗಳಿಗೆ ಔಷದ ಸಿಂಪರಣೆಗಾಗಿ ಅತ್ಯಧುನಿಕ ಸೌಲಭ್ಯವುಳ್ಳ ಪಂಪುಗಳನ್ನು ರಿಯಾಯಿತಿ ದರದಲ್ಲಿ ಅಂದರೆ 3000 ಬೆಲೆ ಬಾಳುವ ಪಂಪ ಸೆಟ್ ಗೆ 1600 ಹಾಗೂ 6000 ಬೆಲೆ ಯ ಪಂಪಗೆ 3000ರೂಪಾಯಿಗೆ ಯುವ ನಾಯಕ ದತ್ತಕುಮಾರ ಪಾಟೀಲ ಪಂಕಜ್ ಪಾಟೀಲ್ ಸುನಿಲ್ ಪಾಟೀಲ್ ತಾತ್ಯಾಸಾಹೇಬ್ ಖೋತ್ ಅವರ ಹಸ್ತದಿಂದ ಪಂಪುಗಳನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ಪ್ರಕಾಶ್ ಪಾಟೀಲ್ ಸುದರ್ಶನ್ ಖೋತ ಬಾಬಣ್ಣ ಖೋತ ಆರ್ ಜಿ ಡೊಮನೆ ಬಸವರಾಜ ಪಾಟೀಲ್. ಅನುಜ ಹವಲೆ ಭರತ್ ಖೋತ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




