ಅರಸೀಕೆರೆ :ಇಂದು ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆಎಂ ಶಿವಲಿಂಗೇಗೌಡರು ಅರಸೀಕೆರೆ ನಗರ ಸಭೆಯಲ್ಲಿ ಆಯೋಜಿಸಲಾಗಿದ್ದ.
ಜಿಲ್ಲಾಡಳಿತ ಹಾಸನ ಮತ್ತು ನಗರಸಭೆ ಅರಸೀಕೆರೆ ಇವರ ಸಂಯುಕ್ತಾಕ್ಷರದಲ್ಲಿ ಪ್ರಧಾನ ಮಂತ್ರಿ ಅವಾಜ್ ಯೋಜನೆ (ನಗರ )ಹೌಸಿಂಗ್ ಫಾರ್ ಹಾಲ್ ಯೋಜನೆಯಡಿ ಅರಸೀಕೆರೆ ನಗರದಲ್ಲಿ ನಿರ್ಮಿಸಲಾಗುತ್ತಿರುವ ಗುಂಪು ಮನೆಗಳಿಗೆ ಬ್ಯಾಂಕ್ ಸಾಲ ಮನ್ನಾ ಹಾಗೂ ವಿವಿಧ ಸವಲತ್ತುಗಳ ವಿತರಣಾ ಸಮಾರಂಭ ಭಾಗವಹಿಸಿದರು.
1) ಶೇ. 5 ವಿಶೇಷ ಚೇತನರ ಕಲ್ಯಾಣ (ಎಸ್ ಎಫ್ ಸಿ ಮುಕ್ತ ನಿಧಿ ಹಾಗೂ ನಗರಸಭಾ ನಿಧಿ 2018-19. 2019-20. ಹಾಗೂ 2022-23) ಶೇ. 75 ವಿಕಲತೆ ಹೊಂದಿದ 14 ಜನ ವಿಶೇಷ ಚೇತನರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ಮೋಟಾರ್ ವಾಹನ ವಿತರಿಸಲಾಯಿತು ವೆಚ್ಚ 18.17 ಲಕ್ಷ

2)ಶೇ 7.25 ನಗರಸಭಾ ನಿಧಿ 2024 -25 ಹೊರಗುತ್ತಿಗೆ ಆಧಾರದ ಮೇಲೆ ಅರಸೀಕೆರೆ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರೆ ಹಿಂದುಳಿದ ವರ್ಗದ 29 ಜನ ನೌಕರರಿಗೆ ತಲಾ ರೂ. 22 ಲಕ್ಷದ ಅಪಘಾತ ವಿಮಾ ಸೌಲಭ್ಯ ನೀಡುದರು. 1.05 ಲಕ್ಷ
3) ಅಮೃತ್ ಮಿತ್ರ 2.0 ಪಾರ್ಕ್ ನಿರ್ವಹಣೆ1) ಕೆಂಗಲ್ ಸಿದ್ದೇಶ್ವರ ದೇವಸ್ಥಾನದ ಪಾರ್ಕ್ (ವಾರ್ಡ್ ನಂಬರ್ 21 )
5ಲಕ್ಷ
2) ಪಂಚಮುಖಿ ಆಂಜನೇಯ ಸ್ವಾಮಿ (ಗಣಪತಿ )ದೇವಸ್ಥಾನದ ಪಾರ್ಕ್ ( ವಾರ್ಡ್ ನಂಬರ್ 30 ) 5ಲಕ್ಷ
ಈ ಒಂದು ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ನಗರಸಭೆಯ ಅಧ್ಯಕ್ಷರು ಎಂ ಸಮಿಉಲ್ಲಾ
ನಗರಸಭೆ ಪೂರಾಯುಕ್ತರಾದ ಕೃಷ್ಣಮೂರ್ತಿ ನಗರಸಭೆ ಮಾಜಿ ಅಧ್ಯಕ್ಷರಾದ ಜಿ ಟಿ ಗಣೇಶ್. ನಗರಸಭೆ ಸದಸ್ಯರಾದ ವೆಂಕಟಮನಿ. ಕೇಬಲ್ ರಾಜು.. ರೇವಣ್ಣ. ಅಭಿಷೇಕ್. ಯುವರಾಜು. ಪ್ರೇಮ ಮಲ್ಲಿಕಾರ್ಜುನ.. ಇಮ್ರಾನ್.ಭಾಸ್ಕರ್ . ಅನ್ನಪೂರ್ಣ. ರೇಷ್ಮಾ ಬಾನು. ಗುಲ್ಜಾರ್ ಬಾನು. ಅರಸೀಕೆರೆ ನಗರಸಭೆಯ ಆಶ್ರಯ ಸಮಿತಿ ಸದಸ್ಯರುಗಳಾದ ಅಮ್ಜತ್. ಮಾರುತಿ. ಕಿರಣ. ರೋಷನ್. ಸಂತೋಷ್ ಮಠ. ಹಾಗೂ ನಗರಸಭೆಯ ಅಧಿಕಾರಿಗಳು. ವಸತಿ ಗೃಹ ಬೆಂಗಳೂರು ಅಧಿಕಾರಿಗಳು.ಬ್ಯಾಂಕ್ ಅಧಿಕಾರಿಗಳು ಫಲಾನುಭಾವಿಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರುಗಳು
ಉಪಸ್ಥಿತರಿದ್ದರು.
ವರದಿ: ರಾಜು ಅರಸೀಕೆರೆ




