Ad imageAd image

ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನರಸಿಂಹಲು ಆಯ್ಕೆ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು : ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಇಂದು ನಡೆದಿದ್ದು, ನಿನ್ನೇನೆ ಫಲಿತಾಂಶ ಕೂಡ ಪ್ರಕಟವಾಗಿದೆ. ಮತ್ತೊಮ್ಮೆ ಸಾರಾ ಗೋವಿಂದು ಬಳಕ್ಕೆ ಚುನಾವಣೆಯಲ್ಲಿ ಜಯ ದೊರಕಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನರಸಿಂಹಲು ಆಯ್ಕೆ ಆಗಿದ್ದಾರೆ.

ಇನ್ನೂ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿ ಕೆವಿ ವೆಂಕಟೇಶ್ ಆಯ್ಕೆ ಆಗಿದ್ದಾರೆ. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಸಾರಾ ಗೋವಿಂದು ಬಳಗದವರಾಗಿದ್ದು, ಮತ್ತೊಮ್ಮೆ ಇದೇ ಬಳಗಕ್ಕೆ ವಾಣಿಜ್ಯ ಮಂಡಳಿಯ ಚುಕ್ಕಾಣಿ ದೊರೆತಿದೆ.

ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ಒಟ್ಟು 128 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಅದರಲ್ಲಿ 24 ಮಂದಿ ಅವಿರೋಧವಾಗಿ ಆಗಿಬಿಟ್ಟಿದ್ದರು. ವಾಣಿಜ್ಯ ಮಂಡಳಿಯಲ್ಲಿ ಒಟ್ಟು 1,409 ಮತದಾರರಿದ್ದು ಇದರಲ್ಲಿ ಅತಿ ಹೆಚ್ಚು ಮತ ನಿರ್ಮಾಪಕ ವಲಯದಿಂದಲೇ ಇದೆ.

ಅಧ್ಯಕ್ಷ ಸ್ಥಾನಕ್ಕೆ ನರಸಿಂಹಲು ಎಂ, ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯ ಸಫೈರ್ ವೆಂಕಟೇಶ್, ನಿರ್ಮಾಪಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಪ್ರವೀಣ್ ಕುಮಾರ್, ವಿತರಕ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ ಸಿ ಶ್ರೀನಿವಾಸ್, ವಿತರಕ ವಲಯ ಗೌರವ ಕಾರ್ಯದರ್ಶಿ ಕುಮಾರ್ ಎಂ ಎನ್ (ಕೆಸಿಎನ್ ಕುಮಾರ್), ಪ್ರದರ್ಶಕ ವಲಯ ಉಪಾಧ್ಯಕ್ಷ ಸ್ಥಾನ ರಂಗಪ್ಪ, ಪ್ರದರ್ಶಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಕುಶಾಲ್ ಎಲ್, ಖಚಾಂಚಿ ಸ್ಥಾನಕ್ಕೆ-ಚಿಂಗಾರಿ ಮಹದೇವ್ ಆಯ್ಕೆ ಆಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!