ಕಳ್ಳರ ಬಗ್ಗೆ ಎಚ್ಚರದಿಂದರಬೇಕು ಎಂದು ಸಲಹೆ ಕೊಟ್ಟ ಪಿಐ ವೀರಭದ್ರಯ್ಯ ಹಿರೇಮಠ
ಮನೆ ಕಳ್ಳರ ಹಾವಳಿ ಜಾಸ್ತಿ ಇದ್ದು,ಎಚ್ಚರ ಅಗತ್ಯ ಜನ ಇರುವ ಕಡೆ ಜಾಸ್ತಿ ಮೊಬೈಲ್ ಕಳವಾಗುತ್ತೆ
ಮಾನ್ವಿಯ ಜನತೆ ಜಾಗರೂಕತೆಯಿಂದ ಇರುವುದರ ಜೊತೆಗೆ ಕಳ್ಳರ ಬಗ್ಗೆ ಎಚ್ಚರದಿಂದರಬೇಕು ಎಂದು ಪಿಐ ವೀರಭದ್ರಯ್ಯ ಹಿರೇಮಠ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸಂತೆ ಮಾರುಕಟ್ಟೆ ಹಾಗು ಸಾರ್ವಜನಿಕರ ಸಂಚಾರ ಇರುವ ಕಡೆ ಜಾಗೃತಿ ಅಭಿಯಾನ ಮಾಡಿ ಪಿಐ ವೀರಭದ್ರಯ್ಯ ಹಿರೇಮಠ ಕಾನೂನಿನ ನಿಯಮಗಳ ಬಗ್ಗೆ ತಿಳಿ ಹೇಳಿದರು.ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ತೆರಳಬೇಕಾದರೆ ಎಚ್ವರದಿಂದರಬೇಕು.ಸಾರ್ವಜನಿಕರು ಕೊರಳಲ್ಲಿ ಬಂಗಾರ ಹಾಕಬಾರದು,ಹಾಗೆಯೇ ಮೊನೈಲನ್ನು ಸಹ ಕೈಯಲ್ಲಿ ಅಥವಾ ಜೇಬಲ್ಲಿ ಇಟ್ಟುಕೊಳ್ಳಬಾರದು,ಕಳ್ಳರು ಎಗರಿಸುವ ಕೆಲಸ ಮಾಡುತ್ತಾರೆಂದು ಜಾಗೃತಿ ಮೂಡಿಸಿದರು.