ಆನೇಕಲ್ : ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳ ಹೆಸರು ಬಳಸಿ ಅಕ್ರಮ ಎಸಗುವ ಜನರ ಸಂಖ್ಯೆ ಹೆಚ್ಚಗುತ್ತಿದೆ. ಈ ಸಾಲಿಗೆ ಮತ್ತೊಂದು ಉದಾಹರಣೆ ಸೇರ್ಪಡೆಗೊಂಡಿವೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಹೆಸರನ್ನ ಬಳಸಿ ಆನೇಕಲ್ ವಿಶೇಷ ತಹಶೀಲ್ದಾರ್ ಕರಿಯಾ ನಾಯಕ್ ಮೇಲೆ ಪ್ರಭಾವ ಬೀರಿದ ಆರೋಪದಲ್ಲಿ ಚಿಕ್ಕಬಳ್ಳಾಪುರ ಮೂಲದ ಆನಂದ್ ನನ್ನ ಆನೇಕಲ್ ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ಇಲಾಖೆಯ ಉಪನಿಬಂದಕ ಅರವಿಂದ್ ಎನ್ ವಿ ನೀಡಿದ ದೂರಿನ ಮೇರೆಗೆ ಆನೇಕಲ್ ಇನ್ಸ್ಪೆಕ್ಟರ್ ಬಿಎಂ ತಿಪ್ಪೇಸ್ವಾಮಿ ತಂಡ ಯುವಕನನ್ನು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆ ಚಿಕ್ಕಬಳ್ಳಾಪುರ ಮೂಲದ ಆನಂದ ಕುಮಾರ್ ಆರೋಪಿಯಾಗಿದ್ದು ತಾನು ಉಪ ಲೋಕಾಯುಕ್ತ, ನಮ್ಮ ಹುಡುಗನನ್ನು ಕಳಿಸಿಕೊಡುತ್ತೇನೆ ಕೆಲಸ ಮಾಡಿಕೊಡಿ ಎಂದು ಶಿಫಾರಸ್ಸು ಮಾಡಿದ್ದ ಎಂದೆನ್ನಲಾಗಿದೆ
ಕರೆ ಸ್ವೀಕರಿಸಿದ ಕರಿಯಾನಾಯಕ್ ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿ ಸಭೆಯಲ್ಲಿದ್ದರು.ಮೊಬೈಲ್ನಲ್ಲಿ ಟ್ರೂಕಾಲರ್ ಮೂಲಕ ಉಪಲೋಕಾಯುಕ್ತ ಬಿ ವೀರಪ್ಪ ಎಂದು ಬಂದಿತ್ತು.
ಆ ಕ್ಷಣ ಉಪಲೋಕಾಯುಕ್ತ ಕಚೇರಿಗೆ ಹೋಗಿ ಕರೆ ಸ್ವೀಕರಸದಿದ್ದಕ್ಕೆ ಕ್ಷಮೆ ಕೋರಿದ್ದಾರೆ. ಆಗಲೇ ದಿಗ್ಬ್ರಾಂತರಾದ ಉಪಲೋಕಾಯುಕ್ತ ಕೂಡಲೇ ವಿಷಯ ಅರಿತು ದೂರು ನೀಡುವಂತೆ ತಿಳಿಸಿದ್ದಾರೆ.
ಇತ್ತ, ಆರೋಪಿ ಆನಂದ್ ಸರ್ಜಾಪುರ ಹೋಬಳಿ ಚಿಕ್ಕನಹಳ್ಳಿ ಸನಂ 18/ಪಿ16 ಹೊಸ ನಂಬರ್ 191 ರ ಒಂದು ಎಕರೆ ಜಮೀನನ್ನು ಎಸ್ ಎನ್ ರಾಮಸ್ವಾಮಿ ಅಡಿಗರಿಂದ ನಾರಾಯಣ ಅಡಿಗರ ಹೆಸರಿಗೆ ಖಾತೆ ಬದಲಾಯಿಸುವಂತೆ ಪ್ರಭಾವ ಬಳಸಲು ಆನೇಕಲ್ ತಾಲೂಕು ಕಚೇರಿಗೆ ಬಂದಿದ್ದು ಪೊಲೀಸರಿಗೆ ಸೆರೆಸಿಕ್ಕಿದ್ದಾನೆ. ಆರೋಪಿ ಆನಂದ್ ಮತ್ತಷ್ಟು ಮಂದಿಗೆ ಇದೇ ರೀತಿಯ ವಂಚನೆ ನಡೆಸಿರುವ ಸಾಧ್ಯತೆ ಇದೆ