ಚಿಕ್ಕೋಡಿ : ಮೆಟಾಸ್ಟಾಟಿಕ್ ನ್ಯೂರೋಬ್ಲಾಸ್ಟೋಮಾ ಕ್ಯಾನ್ಸರ್ನಿಂದ ಬಳಲುತ್ತಿರುವ ಚಿಕ್ಕೋಡಿ ಪಟ್ಟಣದ ಸಮರ್ಥ್ ಪ್ರಕಾಶ ಸಾವಂತ ಎಂಬ ಬಾಲಕನಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಅಗತ್ಯವಿದೆ. ಬಾಲಕ ಸಮರ್ಥ್ ಒಂದು ವರ್ಷದಿಂದ ಪುಣೆಯ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಇನ್ನೂ ಗುಣಮುಖವಾಗಿಲ್ಲ.
ಈತನಿಗೆ ನೀಡಬೇಕಾದ ಚುಚ್ಚುಮದ್ದು ಭಾರತದಲ್ಲಿ ಲಭ್ಯವಿಲ್ಲದ್ದರಿಂದ ವಿದೇಶದಿಂದ ತರಿಸಬೇಕಾಗುತ್ತಿದೆ. ಸದ್ಯ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಬೇಕಾಗಿದ್ದು, ಲಕ್ಷಾಂತರ ರೂ. ವೈದ್ಯಕೀಯ ವೆಚ್ಚಕ್ಕಾಗಿ ಸಹೃದಯರಿಂದ ಆರ್ಥಿಕ ನೆರವು ಬೇಕಾಗಿದೆ.
ನೆರವು ನೀಡ ಬಯಸುವವರು ಬಾಲಕನ ತಂದೆ ಪ್ರಕಾಶ್ ತಾನಾಜಿ ಸಾವಂತ ಅವರ ಕೆನರಾ ಬ್ಯಾಂಕ್ ಖಾತೆ ಸಂ. 05092250032035 (ಐಎಫ್ ಸಿ ಸಿಎನ್ ಆರ್ ಬಿ 0010509) ಇಲ್ಲಿಗೆ ವರ್ಗಾಯಿಸಬಹುದು. ಪ್ರಕಾಶ ಸಾವಂತ ಅವರ ಮೊಬೈಲ್ ಸಂಖ್ಯೆ 9149676387.