Ad imageAd image

ಪುರಸಭೆ ಸದಸ್ಯ ನಿಗೆ ತಾಲ್ಲೂಕು ಅಧಿಕಾರಿ ಪಟ್ಟ ಚುನಾಯಿತ ಪ್ರತಿನಿಧಿಗೆ ಆಡಳಿತಾತ್ಮಕ ಹುದ್ದೆ, ಹಲವರಿಂದ ಆಕ್ಷೇಪ

Bharath Vaibhav
ಪುರಸಭೆ ಸದಸ್ಯ ನಿಗೆ ತಾಲ್ಲೂಕು ಅಧಿಕಾರಿ ಪಟ್ಟ ಚುನಾಯಿತ ಪ್ರತಿನಿಧಿಗೆ ಆಡಳಿತಾತ್ಮಕ ಹುದ್ದೆ, ಹಲವರಿಂದ ಆಕ್ಷೇಪ
WhatsApp Group Join Now
Telegram Group Join Now

ಹುಕ್ಕೇರಿ  : ಮಹತ್ವಾಕಾಂಕ್ಷಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ರ್ಆಎಲ್‌ಎವರ್) ದ ಹುಕ್ಕೇರಿ ವಲಯ ಮೇಲ್ವಿಚಾರಕ ಹುದ್ದೆಗೆ ಸ್ಥಳೀಯ ಪುರಸಭೆ ಸದಸ್ಯನನ್ನು ನಿಯೋಜಿಸಿರುವುದು ಇದೀಗ ಭಾರೀ ವಿವಾದ ಸೃಷ್ಟಿಸಿದೆ.

ಸ್ವಸಹಾಯ ಸಂಘಗಳನ್ನು ರಚಿಸಿ, ಉದ್ಯಮಶೀಲ ಚಟುವಟಿಕೆಗಳನ್ನು ಉತ್ತೇಜಿಸಲು గ్రామిణ ಮಹಿಳೆಯರಿಗಾಗಿಯೇ ರೂಪಿಸಿದ ಬಹುನಿರೀಕ್ಷಿತ ಈ ಯೋಜನೆ ಅನುಷ್ಠಾನದ ಆಡಳಿತಾತ್ಮಕ ಹುದ್ದೆಗೆ ಪಟ್ಟಣ ಪ್ರದೇಶದ ಪುರಸಭೆ ಸದಸ್ಯನನ್ನು ನೇಮಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ದೀನದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್ ಎಲ್‌ಎಮ್)ದ ಹುಕ್ಕೇರಿ ವಲಯ ಮೇಲ್ವಿಚಾರಕ ಹುದ್ದೆಯನ್ನು ಸ್ಥಳೀಯ ಪುರಸಭೆಯ 8ನೇ ವಾರ್ಡ್‌ ಸದಸ್ಯ ಭೀಮಶಿ ಉರ್ಥ ಭೀಮಪ್ಪ ಮಾರುತಿ ಗೋರಖನಾಥ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಜವಾಬ್ದಾರಿಯುತ ಹುದ್ದೆಯನ್ನು ಚುನಾಯಿತ ಪ್ರತಿನಿಧಿಗೆ ಕರುಣಿಸಲಾಗಿದ್ದು ಇದರಲ್ಲಿ ಉನ್ನತ ಅಧಿಕಾರಿಗಳ ಕೈವಾಡವಿದೆ ಎನ್ನಲಾಗಿದೆ.

ಹುಕ್ಕೇರಿ ವಿಧಾನಸಭೆ ಮತಕ್ಷೇತ್ರದ 32 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಎನ್‌ಆರ್‌ಎಲ್‌ಎಂ ಯೋಜನೆಯ ಅನುಷ್ಠಾನಕ್ಕೆ ಪುರಸಭೆ ಸದಸ್ಯ ಗೋರಖನಾಥ ಅವರನ್ನು ನೇಮಕ ಮಾಡಿಕೊಂಡಿರುವ ಬೆಳಗಾವಿ ಜಿಲ್ಲಾ ಪಂಚಾಯಿತಿ ಮತ್ತು ಹುಕ್ಕೇರಿ ತಾಲೂಕು ಪಂಚಾಯಿತಿ ನಡೆ ಕಾನೂನುಬಾಹಿರ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಹುದ್ದೆಗೆ ಯಾವುದೇ ಸ್ಥಳೀಯ ಸಂಸ್ಥೆಯ ಸದಸ್ಯರಲ್ಲದವರನ್ನು ನಿಯೋಜಿಸಿಕೊಳ್ಳಬೇಕೆಂಬ ಸರ್ಕಾರದ ಆದೇಶವನ್ನು ಗಾಳಿಗೆ ತೂರಲಾಗಿದೆ. ಇದರೊಂದಿಗೆ ಅಧಿಕಾರಯುತ ಈ ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಅನುಮಾನ ಮೂಡಿದೆ. ಕೂಡಲೇ ಈ ನಿಯೋಜನೆ ರದ್ದುಗೊಳಿಸಬೇಕು ಎಂಬ ಕೂಗು ಹೆಚ್ಚುತ್ತಿವೆ.

ಬಡತನ ನಿರ್ಮೂಲನೆ ಮತ್ತು ಗ್ರಾಮೀಣ ಬಡವರ ಮಹಿಳಾ ಸಂಘಟನೆಗಳನ್ನು ಕೇಂದ್ರಿಕರಿಸಿ ಅಗತ್ಯ ಕೌಶಲ್ಯಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಎನ್‌ಆರ್‌ಎಲ್‌ಎಂ ತಾಲೂಕು ಘಟಕದಲ್ಲಿ ಕಳೆದ ಮೂರು ವರ್ಷದಿಂದ ಗೋರಖನಾಥ ಅಧಿಕಾರಿಯಾಗಿದ್ದಾರೆ. ಈ ಕಾಲಾವಧಿಯಲ್ಲಿ ಸಾಲ-ಸಹಾಯಧನ ಹಂಚಿಕೆಯಲ್ಲಿ ಲಕ್ಷಾಂತರ ರೂಗಳ ಹಣ ದುರ್ಬಳಕೆಯಾಗಿರುವ ಶಂಕೆಯಿದೆ.

ಇದೇ ವೇಳೆ ತಾಲೂಕು ಪಂಚಾಯಿತಿ ಕಚೇರಿ ಬಳಿ ನಿರ್ಮಿಸಿರುವ ಮಹಿಳಾ ಉತ್ಪನ್ನಗಳ ಮಾರಾಟ ಮಳಿಗೆ ನಿರ್ಮಾಣದಲ್ಲಿಯೂ ಭ್ರಷ್ಟಾಚಾರ ನಡೆದಿರುವ ಬಲವಾದ ಆರೋಪಗಳಿವೆ. ಅಧಿಕಾರ ದುರುಪಯೋಗದಂತ ಗಂಭೀರ ದೂರುಗಳಿವೆ. ಸಾಲ ಪಡೆದ ಅನೇಕರು ಮರುಪಾವತಿ

ಎನ್‌ಆರ್‌ಎಲ್‌ಎಂ ಹುಕ್ಕೇರಿ ವಲಯ

ಮೇಲ್ವಿಚಾರಕ ಹುದ್ದೆಗೆ ಪುರಸಭೆ ಸದಸ್ಯನನ್ನು ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿಲ್ಲ. ಕೂಡಲೇ ತಾಪಂನಿಂದ ವರದಿ ತರಿಸಿಕೊಂಡು ಈ ನೇಮಕಾತಿಯಲ್ಲಿ ಅಕ್ರಮ ಕಂಡು ಬಂದರೆ ಕ್ರಮ ವಹಿಸಲಾಗುವುದು.

* ಮರಿಗೌಡ, ಡಿಪಿಎಂ, ಎನ್‌ಆರ್‌ಎಲ್‌ಎಂ ಬೆಳಗಾವಿ ಮಾಡಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಜಿಲ್ಲಾ ಪಂಚಾಯಿತಿಯು ತನ್ನ ಅಧೀನದಲ್ಲಿರುವ ಎನ್ ಆರ್‌ಎಲ್‌ಎಂ ತಾಲೂಕು ಘಟಕದ ಈ ಹುದ್ದೆಯ ನೇಮಕಾತಿಯಲ್ಲಿ ಸರ್ಕಾರಿ ಸೇವಾ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿಲಾಗಿದೆ.

ಈ ವಲಯ ಮೇಲ್ವಿಚಾರಕ ಹುದ್ದೆಯ ಅಕ್ರಮ ನೇಮಕಾತಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಗಳು ಕೇಳಿ ಬರುತ್ತಿವೆ.ಇನ್ನು ಎನ್‌ಆರ್‌ಎಲ್‌ಎಂ ತಾಲ್ಲೂಕು ಕಚೇರಿಯನ್ನು ಪತ್ತೆ ಹಚ್ಚುವಲ್ಲಿ ಮಹಿಳೆಯರು ಪರದಾಡಿ ಸುಸ್ತಾಗುವ ಪರಿಸ್ಥಿತಿಯಿದೆ.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದ ಸಂಕೀರ್ಣದಲ್ಲಿ ಈ ಕಚೇರಿಯನ್ನು ತೆರೆಯಲಾಗಿದ್ದರೂ ಸಹ ನಾಮಫಲಕ ಅಳವಡಿಸಿಲ್ಲ. ಕಚೇರಿಯ ಕೊಠಡಿ ಇಕ್ಕಟ್ಟಾಗಿರುವುದರಿಂದ ವಿವಿಧ ಕೆಲಸಗಳಿಗೆ ಬರುವ ಮಹಿಳೆಯರು ನೆಲದ ಮೇಲೆ ಚಾಪೆ ಹಾಸಿಕೊಂಡು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!