ಬೆಂಗಳೂರು : ಮಾನವ ಸುರಕ್ಷಿತ, ನೆಮ್ಮದಿ ಮತ್ತು ಶಾಂತಿಯಿಂದ ಜೀವನ ನಡೆಸಬೇಕಾದರೆ ನಮ್ಮನ್ನು ನಾವು ಜಾಗರೂಕತೆಯಿಂದ ರಕ್ಷಿಸಿಕೊಳ್ಳಬೇಕು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಈ ದುಶ್ಚಟಗಳನ್ನು ಮೈಗೂಡಿಸಿಕೊಂಡಾಗ ನಾವೇ ಅಪರಾಧಗಳನ್ನು ಮಾಡಲು ದಾರಿಯಾಗುತ್ತದೆ.ಅದಕ್ಕೆ ನಾವು ನಮ್ಮ ಮಕ್ಕಳಿಗೆ ಜಾಗೃತೆಯಿಂದ ಇದಬೇಕು ಎಂದು ಪಿ.ಎಸ್.ಐ. ಬಸಂತರಾಯಪ್ಪ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕೈಗಾರಿಕಾ ಪ್ರದೇಶ ವಾರ್ಡಿನ ವ್ಯಾಪ್ತಿಯ ಪೀಣ್ಯ 2ನೇ ಹಂತದ ಬಸ್ ನಿಲ್ದಾಣದಲ್ಲಿ ರಾಜಗೋಪಾಲನಗರ ಪೊಲೀಸ್ ಠಾಣೆಯ ವತಿಯಿಂದ ವಿಶ್ವಪಥ ಕಲಾಸಂಗಮ ತಂಡದ ಸಹಯೋಗದೊಂದಿಗೆ ಅಪರಾಧಗಳನ್ನು ಹೇಗೆ ತಡೆಗಟ್ಟಬಹುದು ಎಂಬುದರ ವಿಚಾರಧಾರೆಯನ್ನು ಸಾಮಾಜಿಕ ನಾಟಕ ದೊಂದಿಗೆ ಪ್ರದರ್ಶಿಸಿದರು.
ಇದೆ ವೇಳೆ ಅಂತರಾಷ್ಟ್ರೀಯ ಹಿಂದೂ ಪರಿಷದ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ. ಆನಂದ್ ಈಗಿನ ಯುವ ಪೀಳಿಗೆಯು ಗಾಂಜಾ ಅಫೀಮು ಸಾರಾಯಿ ಇವುಗಳಿಂದ ದೂರವಿರಬೇಕು ಈಗಿನ ಸಂದರ್ಭದಲ್ಲಿಂತು ಹೆಚ್ಚಿನ ರೀತಿಯಲ್ಲಿ ಯುವಕರೇ ಮದ್ಯಪಾನ ಗಾಂಜಾ ಅಪೀಮು ಇವುಗಳಿಗೆ ಮೊರೆ ಹೋಗಿದ್ದಾರೆ ಅದಕ್ಕಾಗಿ ಅಪರಾಧಗಳನ್ನು ಮಾಡಲು ಸಾಧ್ಯವಾಗುತ್ತದೆ ಈ ಎಲ್ಲಾ ಡ್ರಗ್ಸ್ ಮಾಫಿಯಾದಿಂದ ಕಳ್ಳತನಗಳು ದರೋಡೆ ಕೊಲೆ ಸುಲಿಗೆ ಇನ್ನೂ ಹಲವಾರು ಅಪರಾಧಗಳನ್ನು ಮಾಡಿ ಜೈಲ್ ಪಾಲಾಗುತ್ತಾರೆ ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯ ಬೇಕು ಎಂದು ಯುವಕರಿಗೆ ವಿ.ಆನಂದ್ ಸಲಹೆ ನೀಡಿದರು.
ಪಿ.ಎಸ್.ಐ. ಸಂತೋಷ್ ವಾಸುದೇವ್ ಮಾತನಾಡಿ ನಮ್ಮ ಜನರು ಸದಾ ಅಸಮುಕಿಯಾಗಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಜೀವನ ಸುರಕ್ಷಿತವಾಗಿರಲಿ ತಂದೆ ತಾಯಿಗಳು ಹೆಂಡತಿ ಮಕ್ಕಳು ನಮ್ಮನ್ನೇ ನಂಬಿದ್ದಾರೆ ನಾವು ಇಂತಹ ದುಶ್ಚಟಗಳನ್ನು ಕಲಿತು ಸಂಸಾರಗಳು ಅದೋಗತಿಯತ್ತ ಹೋಗಬಾರದು ಎಂಬ ನಿಶ್ಚಲ ಮನಸ್ಸಿನಿಂದ ಮುನ್ನಡೆಯಬೇಕು ಎಂಬ ಗಟ್ಟಿ ನಿರ್ಧಾರವನ್ನು ನಮ್ಮ ಜನತೆ ತೆಗೆದುಕೊಳ್ಳಬೇಕು ಆಗ ಮಾತ್ರ ನಮ್ಮ ಸುತ್ತಮುತ್ತಲು ನಡೆಯುವ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ನಾವು ಸಹ ಶಕ್ತಿಮೀರಿ ಜನತೆಯ ಒಳಿತಿಗಾಗಿಯೇ ನಾವು ಶ್ರಮಿಸುತ್ತಿದ್ದೇವೆ. ಸಾರ್ವಜನಿಕರು ಪೊಲೀಸ್ ಇಲಾಖೆಗೆ ಕೈಜೋಡಿಸಿದಾಗ ಮಾತ್ರ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಜಿ, ಫ್ರೆಂಡ್ಸ್ ಕಾಲೋನಿ ಪ್ರಭು, ಚಂದ್ರು ವಿಶ್ವಪಥ ಕಲಾಸಂಗಮ ತಂಡದ ಅಶೋಕ್, ಪೂಜಾ, ವಿಸ್ಮಯ,ಮೇಘನಾ, ಕೃಷ್ಣ ಮೋಹನ್, ಕಾರ್ತಿಕ್,ಪ್ರನಿತ್ ವಸಿಷ್ಠ ರಾಜಗೋಪಾಲನಗರ ಪೊಲೀಸ್ ಠಾಣಾ ಸಿಬ್ಬಂದಿ ವೃಂದದವರು ಸಾರ್ವಜನಿಕರು ಮುಂತಾದವರು ಭಾಗವಹಿಸಿದ್ದರು.
ವರದಿ :ಅಯ್ಯಣ್ಣ ಮಾಸ್ಟರ್