ಚಿಟಗುಪ್ಪ: ಪುರಸಭೆ ಸದಸ್ಯರು ಪುರಸಭೆ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಸೋಮವಾರ ಜರುಗಿದೆ.ಪುರಸಭೆಯಲ್ಲಿ ಕರೆಯಲಾಗಿದ್ದ ತುರ್ಚು ಸಭೆಯ ಬಳಿಕ ಪುರಸಭೆ ಉಪಾಧ್ಯಕ್ಷ ಮತ್ತು ಕೆಲ ಸದಸ್ಯರು ಪುರಸಭೆಗೆ ಸಂಭಂದಿಸಿದ ಮಳಿಗೆಗಳಲ್ಲಿ ಖರ್ದಿ ಮಾಡಿರುವ ಯಾವ ಯಾವ ಸಮಾಗ್ರಿಗಳು ಉಳಿದುಕೊಂಡಿವೆ ಹಾಗೂ ಎಷ್ಟು ಬಳಕೆಯಾಗಿವೆ ತೋರಿಸಿ ಎಂದು ಕೇಳಿದಾದ ಪುರಸಭೆ ಅಭಿಯಂತರರು ಮತ್ತು ಸ್ಟೋರ್ ಸಿಬ್ಬಂದಿಗಳು ಮಳಿಗೆಯಲ್ಲಿ ಏನು ಇಲ್ಲ ಎಂದು ಹೇಳುತ್ತಾರೆ.
ಕೂಡಲೇ ಮಳಿಗೆಗಳು ಓಪನ್ ಮಾಡಿ ಎಂದು ಪುರಸಭೆ ಸದಸ್ಯರು ಹೇಳಿದಾಗ ಕೀಲಿಗಳು ಸಿಗುತ್ತಿಲ್ಲ ಎನ್ನುತ್ತಾರೆ ಸಿಬ್ಬಂದಿಗಳು.ಸ್ವಲ್ಪ ಸಮಯ ನಂತರ ಮಳಿಗೆ ತೇರುದು ನೋಡಿದಾಗ ಅಡ್ಡ ದಿಡ್ಡಿ ಬಿಸಾಡಿದ ಬ್ಲಿಚಿಂಗ್ ಪೌಡರ್, ಕಸ ತುಂಬುವ ಬಕೆಟ್ ಗಳು, ಹೊಲಿಗೆ ಯಂತ್ರ, ಎಲ್ಇಡಿ ಲೈಟ್, ವೈರ್,ಸೇರಿ ಅನೇಕ ಸಾಮಗ್ರಿಗಳು ಕಂಡು ಬರುತ್ತವೆ.
ಮಳಿಗೆಯಲ್ಲಿ ಸಾಮಗ್ರಿಗಳು ಇಲ್ಲ ಎಂದು ಸುಳ್ಳು ಯಾಕೆ ಹೇಳುತ್ತೀರಿ,ಇವುಗಳನ್ನು ಮಾರಾಟ ಮಾಡಿಕೊಳ್ಳುತ್ತಿರಾ ಎಂದು ಪುರಸಭೆ ಸದಸ್ಯರು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಅದಕ್ಕೆ ಸಿಬ್ಬಂದಿಗಳು ನಾವು ಯಾಕೆ ಮಾರಿಕೊಳ್ಳೋದು ನಮಗೆ ಅಂತಹ ಕೆಲಸ ಬರುವುದಿಲ್ಲ ಹಾಗೆ ಹೇಳಬೇಡಿ ಎಂದು ಹೇಳುತ್ತಾರೆ.ಇದರಿಂದ ಪುರಸಭೆ ಸದಸ್ಯರ ಮತ್ತು ಸಿಬ್ಬಂದಿಗಳ ನಡುವೆ ಮಾತಿಗೆ ಮಾತು ನಡೆದಿದೆ.
ವರದಿ:ಸಜೀಶ ಲಂಬುನೋರ್