Ad imageAd image

ಬಸವೇಶ್ವರರ ಪುತ್ತಳಿ ಪ್ರತಿಷ್ಠಾಪಿಸಲು ಮನವಿ

Bharath Vaibhav
ಬಸವೇಶ್ವರರ ಪುತ್ತಳಿ ಪ್ರತಿಷ್ಠಾಪಿಸಲು ಮನವಿ
WhatsApp Group Join Now
Telegram Group Join Now

ಮುದಗಲ್: ಪಟ್ಟಣದ ಹೊರವಲಯದಲ್ಲಿರುವ ನಿರುಪಾಧೀಶ್ವರ ಪೆಟ್ರೋಲ್ ಬಂಕ್ ಹತ್ತಿರ ಇರುವ ಸರ್ಕಲ್ ಗೆ ಬಸವೇಶ್ವರರ ಸರ್ಕಲ್ ಎಂದು ನಾಮಕರಣ ಮಾಡಿ ಬಸವಣ್ಣನವರ ಪುತ್ತಳಿ ಪ್ರತಿಷ್ಠಾಪಿಸಬೇಕೆಂದು
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಲಿಂಗಸುಗೂರು ತಾಲ್ಲೂಕು ಘಟಕದಿಂದ ಪುರಸಭೆ ಅಧ್ಯಕ್ಷರಿಗೆ ಮನವಿ ಮಾಡಿದರು.

12 ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಬಸವಣ್ಣನವರ ಪುತ್ತಳಿಯನ್ನು ಸರ್ಕಲ್ ನಲ್ಲಿ ಸ್ಥಾಪಿಸಬೇಕು. ಅಲ್ಲದೆ ಈ ಸರ್ಕಲ್ ನ್ನು ಬಸವೇಶ್ವರ ಸರ್ಕಲ್ ಎಂದು ನಾಮಕರಣ ಮಾಡಬೇಕು. ಈ ಬಗ್ಗೆ ಶೀಘ್ರದಲ್ಲಿ ಪುರಸಭೆ ಸಾಮಾನ್ಯ ಸಭೆ ಕರೆದು ಈ ಕುರಿತು ಗೊತ್ತುವಳಿ ಪಾಸು ಮಾಡಿ, ಅಗತ್ಯ ಕ್ರಮ ತೆಗುದುಕೊಳ್ಳ ಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಲಿಂಗಸುಗೂರು ತಾಲ್ಲೂಕು ಘಟಕ ಮನವಿ ಮಾಡಿತು. ಮನವಿ ಪತ್ರವನ್ನು ಪುರಸಭೆ ಮ್ಯಾನೇಜರ್ ಸುರೇಶ ಹೊನ್ನಹಳ್ಳಿ ಸ್ವೀಕರಿಸಿದರು.

ಸುರೇಂದ್ರ ಪಾಟೀಲ ಆದಾಪುರ ,ಲಿಂಗಪ್ಪ ಹಣಗಿ, ಗುರುಬಸಪ್ಪ ಸಜ್ಜನ್, ರಾಜು ಕುಮಾರ ಮಾಲಿ ಪಾಟೀಲ, ಅನಿಲ ಕುಮಾರ, ಶಿವಪ್ಪ ಸುಕಂದ್, ಮಹೇಶ ವಸ್ತ್ರದ್, ಮಲ್ಲಪ್ಪ ಮಾಟೂರ, ಉದಯ ಕುಮಾರ ಕಮ್ಮಾರ, ಜವಹಾರಲಾಲ ಶೇಟ್, ತಮ್ಮಣ್ಣ ಗುತ್ತೇದಾರ್ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!