ವಿಜಯಪುರ : ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರದಲ್ಲಿ ೨೦೨೪-೨೦೨೫ ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ,ಕ್ರೀಡೆ, ಸ್ಕೌಟ್ಸ್ ಮತ್ತು ಗೈಡ್ಸ್, ಮತದಾರ ಸಾಕ್ಷರತಾ ಸಂಘ, ಎನ್.ಎನ್.ಎಸ್ ರೆಡ್ ಕ್ರಾಸ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಪದವಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಜರುಗಿತು.
ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಾಹಿತಿಗಳಾದ ಡಾ ಮಲ್ಲಿಕಾರ್ಜುನ್ ಮೇತ್ರಿ ಅವರು ಜೀವನ ಎನ್ನುವುದು ಒಂದು ಪ್ರವಾಸ, ಅದರ ಪ್ರಯಾಣಿಕರು ನಾವು ಎಲ್ಲಾ ವಿದ್ಯಾರ್ಥಿಗಳ ಜೀವನ ಸುಖಕರವಾಗಿರಲಿ, ವಿದ್ಯಾರ್ಥಿನಿಯರು ಪಠ್ಯ ಮತ್ತು ಪಠ್ಯತರ ಚಟುವಟಿಕೆಗಳಲ್ಲಿ ಸಕ್ರಿಯವರಾಗಿ ಭಾಗವಹಿಸಿ ಪ್ರಭುದ್ಧರಾಗಬೇಕು ಜ್ಞಾನಕ್ಕೆ ಸಮಾನವಾದದ್ದು ಜಗತ್ತಿನಲ್ಲಿ ಯಾವುದು ಇಲ್ಲ ಬೆಳಕು ಜ್ಞಾನದ ಸಂಕೇತ. ಜ್ಞಾನದ ಬಲದಿಂದ ಅಜ್ಞಾನದ ಕೇಡವಾಗುತ್ತದೆ ಜ್ಞಾನದ ನೆಲೆಯಿಂದ ಜೀವನವನ್ನು ಭದ್ರವಾಗಿ ಕಟ್ಟಿಕೊಳ್ಳಬಹುದು, ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು, ಇದರಿಂದ ಚಿಂತನೆ ಮತ್ತು ನೈತಿಕ ನೆಲೆಯನ್ನು, ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಶ್ರಾಂತಿ ಪ್ರಾಧ್ಯಾಪಕರಾದ ಎಸ್.ಪಿ. ಬಿಡಗೊಂಡ ಮಾತನಾಡುತ್ತಾ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರಬೇಕು ಪ್ರಯತ್ನವಾದಿಗಳಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ ಆರ್ ಎಸ್ ಕಲ್ಲೂರ್ಮಠ ಮಾತನಾಡುತ್ತಾ ಶಿಸ್ತು, ಶಿಕ್ಷಣ, ಸಂಘಟನೆ , ಮತ್ತು ಸಾವಲಂಬನೆ ಒಂದಕ್ಕೊಂದು ಪೂರಕವಾಗಿವೆ. ಇಂದಿನ ಯುವ ಜನತೆ ನಿರಂತರ ಪ್ರಯತ್ನ, ಶಿಸ್ತು, ಶ್ರಮವಹಿಸಿ ಜೀವನದಲ್ಲಿ ಉನ್ನತವಾದ ಗುರಿ ಸಾಧಿಸಲು ಕರೆ ನೀಡಿದರು.
ಕಾರ್ಯಕ್ರಮವು ಕುಮಾರಿ ಲಕ್ಷ್ಮಿ ಹಾಗೂ ಸಂಗಡಿಗಾರಿಂದ ಪ್ರಾರ್ಥನೆಯಿಂದ ಪ್ರಾರಂಭವಾಯಿತು. ದೀಪ ಹಚ್ಚುವ ಮೂಲಕ ಉದ್ಘಾಟನೆಗೊಂಡ ಕಾರ್ಯಕ್ರಮವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ರಾಜಶೇಖರ್ ಬೆನಕನಹಳ್ಳಿ ಅತಿಥಿಗಳನ್ನು ಸ್ವಾಗತಿಸಿದರು, ಐ. ಕ್ಯೂ.ಎಸ್.ಸಿ ಸಂಚಾಲಕರಾದ ಡಾ ಚಿದಾನಂದ ಎಸ್ ಆನೂರ ಅತಿಥಿ ಮೊಹೋದರನ್ನು ಪರಿಚಯಿಸಿದರು. ಕಾಲೇಜಿನ ಎಲ್ ಎಮ್ ಎಸ್ ಸಂಚಾಲಕರಾದ ಪ್ರೊ. ಎಂ ಆರ್ ಜೋಶಿ ಪ್ರಾಸ್ತಾವಿಕ ನುಡಿಗಳನಾಡಿದರು. ಪ್ರೊ ಲಕ್ಷ್ಮಿ ಮೋರೆ ನಿರೋಪಿಸಿದರು. ಪ್ರೊ ಪಿ.ಬಿ ಬಿರಾದಾರ ವಂದಿಸಿದರು .
ವೇದಿಕೆ ಮೇಲೆ ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳಾದ ಡಾ ಭಾರತಿ ಹೊಸಟ್ಟಿ, ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮದ ಅಧಿಕಾರಿಗಳಾದ ಡಾ ಅನಂತ ಪದ್ಮನಾಭ, ಸರವಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ ಎಂ ಆರ್ ಕೆಂಭಾವಿ, ಪ್ರೊ ರಮೇಶ್ ಬಳ್ಳೊಳ್ಳಿ, ಡಾ ದಾವಲ್ ಸಾಬ್ ಪಿಂಜಾರ್, ಪ್ರೊ ಅರ್ಪಿತಾ ಪಾಟೀಲ, ಪ್ರೊ ಭಾರತಿ ಹಾಲು, ಡಾ ನೀಲಕಂಠ ಹಳ್ಳಿ, ಡಾ ಆನಂದ್ ಕುಲಕರ್ಣಿ, ಪ್ರೊ ನಾಥುರಾಮ್ ಜಾದವ, ಡಾ ಸವಿತಾ ಚೌವ್ಹಾಣ , ಡಾ ಬೋರಮ್ಮ ಗುಂಜಾಳ್, ಡಾ ರಾಜೇಶ್ವರಿ ಪುರಾಣಿ, ಪ್ರೊ ಶೋಭಾ ರುದ್ರಗೌಡ, ಪ್ರೊ ಸದಾಶಿವ ಚಲವಾದಿ,ಡಾ ರಾಘವೇಂದ್ರ ಗುರಜಾಳ, ಪ್ರೊ ಆಸಿಫ್ ರೋಜಿಲ್ದಾರ್, ಪ್ರೊ ತನ್ವೀರ್ ಗೋಡೆ ಸವಾರ, ಪ್ರೊ ಮಂಜುನಾಥ್ ಗಾಣಿಗೇರ, ಪ್ರೊ ಅಸಾದುಲ್ಲ, ಡಾ ರಾಮಣ್ಣ ಕಳ್ಳಿ, ಡಾ ಶಕಿರಾ ಬಾನು ಕಿತ್ತೂರ್ , ಡಾ ಖು ದುಸ್ ಪಾಟೀಲ, ಪ್ರೊ ರಶ್ಮಿ ಹೊನ್ನಕೇರಿ, ಶಿವಾನಂದ ಸಂಗೊಳಿ, ವೀರನಗೌಡ ಪಾಟೀಲ, ನವೀನ ಗೌಡ ಬಿರಾದಾರ, ಸುಜಾತಾ ಬಿರಾದಾರ, ಎಚ್ ಎಮ್ ಉಕ್ಕಲಿ, ಸುಮಂಗಲ ಬಾಸಗಿ ಪೂಜಾ ಪೂಜಾರಿ, ಹಾಗೂ ಕಾಲೇಜಿನ ಬೋಧಕ – ಬೋಧಕ್ಕೆ ತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವರದಿ: ಸಾಯಬಣ್ಣ ಮಾದರ