ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಗೋಲ್ಮಾಲ್ ಹಲವು ತಿಂಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ಜನಸಾಮಾನ್ಯರಿಗೆ ಪ್ರತಿಯೊಬ್ಬ ನಾಗರಿಕನಿಗೆ 5 ಕೆ.ಜಿ ಅಕ್ಕಿ ಕೊಡಲಾಗುವುದು ಎಂದು ಸರ್ಕಾರ ಆದೇಶಿಸಿದೆ ಆದರೆ ಹತ್ತಳ್ಳಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ನಾಲ್ಕರಿಂದ ನಾಲ್ಕುವರೆ ಕೆಜಿ ಅಕ್ಕಿ ಜನರಿಗೆ ನೀಡಿ ಮೋಸ ಮಾಡುತ್ತಿದ್ದಾರೆ ಸ್ವತಃ ಇಲ್ಲಿಯ ನಾಗರಿಕರು ಹೇಳುತ್ತಿದ್ದಾರೆ ಇಲ್ಲಿಯ ಗ್ರಾಮದವರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಕಣ್ಣು ಮುಚ್ಚಿ ಕೂಳಿತಿದೆ ಇದಕ್ಕೆ ಯಾರೂ ಇಲ್ಲಿ ಧ್ವನಿ ಎತ್ತುವವರಿಲ್ಲ ಹೀಗಾದರೆ ಇವರ ಗೋಳು ಕೇಳುವವರು ಯಾರು? ಎಂದು ಪ್ರಶ್ನೆ ಉದ್ಭವವಾಗಿದೆ ಮತ್ತು ತಾಲೂಕು ದಂಡಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಸ್ವಲ್ಪ ಗಮನ ಹರಿಸಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ವರದಿ : ಉಮಾಶಂಕರ ಕ್ಷತ್ರಿ