ಬೆಂಗಳೂರು: ನ್ಯೂ ಇಯರ್‌ಗೆ ಕಿಕ್ಕೇರಿಸಲು ಸ್ಟೋರ್ ಮಾಡಿಟ್ಟಿದ್ದ 24 ಕೋಟಿ ರೂ. ಮೌಲ್ಯದ ಬಾಂಬೆ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೈಜೀರಿಯನ್ ಮೂಲದ ರೋಜ್ಲೈಮ್ (40) ಬಂಧಿತ ಮಹಿಳೆ. ಮುಂಬೈನಿಂದ ಗ್ರಾಸರಿ ಐಟಂಗಳ ಪ್ಯಾಕೇಟ್‌ನಲ್ಲಿ ಡ್ರಗ್ಸ್ ತರಿಸ್ತಿದ್ದ ಈಕೆಯನ್ನು ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ.
ಈಕೆ ಕೆ.ಆರ್ ಪುರದ ಟಿಸಿ ಪಾಳ್ಯದ ತನ್ನ ಅಂಗಡಿಯಲ್ಲಿ 24 ಕೋಟಿ ರೂ. ಮೌಲ್ಯದ 12 ಕೆಜಿ ಎಂಡಿಎಂಎ ವೈಟ್ ಮತ್ತು ಯೆಲ್ಲೊ ಕ್ರಿಸ್ಟಲ್ ಶೇಖರಣೆ ಮಾಡಿಟ್ಟಿದ್ದಳು.
ಮುಂಬೈನ ಮಹಿಳೆಯೊಬ್ಬಳು ಗ್ರಾಸರಿ ಐಟಂ ಹಾಗೂ ಡೆಟಾಲ್ ಸೋಪ್‌ನಲ್ಲಿ ಡ್ರಗ್ಸ್ ಅಡಗಿಸಿ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳು. ಮುಂಬೈನಲ್ಲಿರೋ ವಿದೇಶಿ ಮಹಿಳೆ ಜುಲೀಯಟ್ ಇಲ್ಲಿನ ನೈಜಿರೀಯಾ ಮಹಿಳೆಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ಳು.
ಈ ಡ್ರಗ್ಸ್ ಅನ್ನ ಸ್ಥಳೀಯ ನಿವಾಸಿಗಳು ಹಾಗೂ ಕೆಲ ಸಪ್ಲೈಯರ್ಸ್ ಗೆ ನೈಜಿರಿಯನ್ ಪ್ರಜೆಗಳಿಗೆ ಮಹಿಳೆ ರಿಟೇಲ್ ನಲ್ಲಿ ಮಾರಾಟ ಮಾಡ್ತಿದ್ಳು. ಈ ಬಗ್ಗೆ ಮಾಹಿತಿ ತಿಳಿದು ಶುಕ್ರವಾರ ಅಂಗಡಿ ಬಳಿ ಸಿಸಿಬಿ ಟೀಂ ಹೋಗಿತ್ತು. ಈ ವೇಳೆ ದೆಹಲಿಯಿಂದ ಡ್ರಗ್ಸ್ ತಂದು ಕೊಡಬೇಕಾದ್ರೆ ರೆಡ್ ಹ್ಯಾಂಡಗಿ ರೋಜ್ಲೈಮ್ ಸಿಕ್ಕಿ ಬಿದ್ದಿದ್ದಾಳೆ.
ದೆಹಲಿಯಿಂದ ಡ್ರಗ್ಸ್ ತಂದಿದ್ದ ಜೂಲಿಯಟ್ ಎಂಬ ಮಹಿಳೆ ಪರಾರಿಯಾಗಿದ್ದು, ಸದ್ಯ ಸಿಸಿಬಿ ಪೊಲೀಸ್ರು 24 ಕೋಟಿ ಡ್ರಗ್ಸ್ ಜೊತೆಗೆ 70 ಸಿಮ್‌ಗಳನ್ನು ಸೀಜ್ ಮಾಡಿದ್ದಾರೆ. ಸದ್ಯ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರೋ ಜೂಲಿಯೇಟ್‌ಗಾಗಿ ಶೋಧ ನಡೆಸಿದ್ದಾರೆ.