Ad imageAd image

ಪ್ರತಿ ರಾಜ್ಯದಲ್ಲೂ ಏಕರೂಪ ನಾಗರೀಕ ಸಂಹಿತೆ ಜಾರಿಗೆ : ಅಮಿತ್ ಶಾ

Bharath Vaibhav
ಪ್ರತಿ ರಾಜ್ಯದಲ್ಲೂ ಏಕರೂಪ ನಾಗರೀಕ ಸಂಹಿತೆ ಜಾರಿಗೆ : ಅಮಿತ್ ಶಾ
AMITH SHA
WhatsApp Group Join Now
Telegram Group Join Now

ನವದೆಹಲಿ : ಇಂದು ಭಾರತ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳು ಪೂರೈಸಿದ ಹಿನ್ನಲೆ ಈ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಏಕರೂಪ ನಾಗರಿಕ ಸಂಹಿತೆ, ಮುಸ್ಲಿಂ ವೈಯಕ್ತಿಕ ಕಾನೂನು ಹಾಗೂ ಧಾರ್ಮಿಕ ಮೀಸಲಾತಿ ರೀತಿಯ ಗಂಭೀರ ವಿಚಾರಗಳ ಬಗ್ಗೆ ಮಾತನಾಡಿದರು.ಇದೇ ವೇಳೆ ಪ್ರತಿ ರಾಜ್ಯದಲ್ಲೂ ಏಕರೂಪ ನಾಗರೀಕ ಸಂಹಿತೆ ಜಾರಿಗೆ ಬರಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಪ್ರಪಂಚದಲ್ಲಿ ಕಳೆದ 75 ವರ್ಷಗಳಲ್ಲಿ, ಅನೇಕ ರಾಷ್ಟ್ರಗಳು ಸ್ವಾತಂತ್ರ್ಯಗಳಿಸಿವೆ, ಆದರೆ ಆ ಯಾವ ದೇಶದಲ್ಲೂ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ನಿಲ್ಲಲಿಲ್ಲ. ಆದ್ರೆ ನಮ್ಮ ಪ್ರಜಾಪ್ರಭುತ್ವವು ಆಳವಾಗಿ ಬೇರೂರಿದೆ.ಒಂದೇ ಒಂದು ಹನಿ ರಕ್ತವನ್ನು ಚೆಲ್ಲದೆ ಹಲವಾರು ಬದಲಾವಣೆಗಳನ್ನು ಮಾಡಿದ್ದೇವೆ ಎಂದು ಹೇಳಿದರು.

ಇದೇ ವೇಳೆ ನಾವು ಎಂದಿಗೂ ಆರ್ಥಿಕವಾಗಿ ಸ್ವತಂತ್ರರಾಗುವುದಿಲ್ಲ ಎಂದು ಹೇಳಿದವರಿಗೆ ನಮ್ಮ ದೇಶದ ಜನ ಹಾಗೂ ನಮ್ಮ ಸಂವಿಧಾನ ಸೂಕ್ತ ಉತ್ತರ ನೀಡಿದೆ. ಇಂದು ನಾವು ಐದನೇ ಅತಿದೊಡ್ಡಆರ್ಥಿಕತೆಯಾಗಿದ್ದೇವೆ ಮತ್ತು ಬ್ರಿಟನ್ ಅನ್ನು ಹಿಂದಿಕ್ಕಿದ್ದೇವೆ ಎಂದು ಅಮಿತ್ ಶಾ ಸಂತಸ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!