ಅಥಣಿ : ಕರ್ನಾಟಕ ರಾಜ್ಯ ಮಟ್ಟದ ಅತಿಥಿ ಶಿಕ್ಷಕರ ಸಂಘ ಅಥಣಿ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರು ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿ ಎಲ್ಲಾ ಸಭೆಗೆ ಆಗಮಿಸಿದ ಅತಿಥಿ ಶಿಕ್ಷಕರ ಸರ್ವಾನುಮತಿಯಿಂದ ಅಧ್ಯಕ್ಷರಾಗಿ ಶ್ರೀ ಕುಮಾರ್ ನಾವಿ,ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ನಾವಿ, ಕಾರ್ಯದರ್ಶಿ ನವನಾಥ್ ಹೊನಕೊಂಡೆ, ಸಂಘದ ಖಜಾಂಚಿಯಾಗಿ ಶ್ರೀ ರಾಘವೇಂದ್ರ ಬುಲ್ ಬುಲೆ ಯವರನ್ನು ಆಯ್ಕೆ ಮಾಡಲಾಯಿತು. ಹೀಗೆ ಬೇರೆ ಬೇರೆ ವಲಯದಿಂದ ಆಗಮಿಸಿರುವ ಅತಿಥಿ ಶಿಕ್ಷಕರನ್ನ ಆಯಾ ವಲಯಕ್ಕೆ ತಕ್ಕಂತೆ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು..ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅತಿಥಿ ಶಿಕ್ಷಕರ ವ್ಯಥೆ ಯಾರಿಗೂ ಕಾಣಿಸದಂತಾಗಿದೆ. ಸರಕಾರಕ್ಕೆ ಲಾಭ ಬೇಕು ಮಕ್ಕಳ ಅಭಿವೃದ್ಧಿಯೂ ಬೇಕು ಆದರೆ ಅತಿಥಿ ಶಿಕ್ಷಕರ ವ್ಯಥೆ ಕೇಳೋದೇ ಬೇಡ ಎನ್ನುವ ಸರಕಾರಕ್ಕೆ ಬಿಸಿ ಮುಟ್ಟಿಸುವುದು ನಮ್ಮ ಅನಿವಾರ್ಯವಾಗಿದೆ. ನಮ್ಮ ಬೇಡಿಕೆಗಳು ಈಡೇರಬೇಕಾದರೆ ಡಾ. ಬಿ ಆರ್ ಅಂಬೇಡ್ಕರ್ ಅವರು ಹೇಳಿದಂತೆ ಸಂಘಟನೆ ನಮ್ಮ ಪ್ರಬಲ ಅಸ್ತ್ರವಾಗಬೇಕು. ಅದಕ್ಕೆ ಕಡ್ಡಾಯವಾಗಿ ಅತಿಥಿ ಶಿಕ್ಷಕರು ಸಂಘದ ಸದಸ್ಯತ್ವ ಪಡೆದು ಸರಕಾರದ ಮುಂದೆ ನಮ್ಮ ಬೇಡಿಕೆಗಳಾದ ವೇತನ ಹೆಚ್ಚಳ, ಸೇವಾ ಹಿರಿತನದ ಮೇಲೆ ನೇಮಕಾತಿ,ಕೃಪಾಂಕ ನೀಡುವುದು, ಸೇವಾ ಭದ್ರತೆಯನ್ನು ಒದಗಿಸುವುದು.ಹೀಗೆ ಎಲ್ಲ ವಿಷಯಗಳನ್ನು ಅಥಣಿ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಪದಾಧಿಕಾರಿಗಳ ಆಯ್ಕೆ ಇತರೆ ವಿಷಯಗಳನ್ನು ಚರ್ಚಿಸಲಾಯಿತು.
ಬೆಂಗಳೂರಲ್ಲಿ ನಡೆಯುವ ಅನಿರ್ದಿಷ್ಟ ಧರಣಿ ಹೋರಾಟದಲ್ಲಿ ಮಾಡು ಇಲ್ಲವೇ ಮಡಿ ಅತಿಥಿ ಶಿಕ್ಷಕರ ಸಂಘದ ಬೇಡಿಕೆ ಈಡೇರುವರೆಗೂ ಹೋರಾಟ. – ಕುಮಾರ್ ನಾವಿ (ಅಧ್ಯಕ್ಷರು ಅತಿಥಿ ಶಿಕ್ಷಕರ ಸಂಘ ಅಥಣಿ )




