ಮುದಗಲ್ :- ಪಟ್ಟಣದ ಹೊರವಲಯದಲ್ಲಿರುವ ತಾವರಗೇರಿ ಮುಖ್ಯರಸ್ತೆ ಮತ್ತು ಮುದಗಲ್ ಪಟ್ಟಣ ರಸ್ತೆಗೆ ಹೊಂದಿಕೊಂಡಿರುವ ವೃತ್ತಕ್ಕೆ ಶ್ರೀ ನಿರುಪಾಧೀಶ್ವರ ವೃತ್ತವೆಂದು ನಾಮಕರಣ ಮಾಡಿ ಎಂದು ಪುರಸಭೆ ಮನವಿ ಪತ್ರ ಸಲ್ಲಿಸಲಾಯಿತು.
ಸುಕ್ಷೇತ್ರ ಅಂಕಲಿಮಠವು ಜ್ಞಾನ ದಾಸೋಹ ಮತ್ತು ಅನ್ನ ದಾಸೋಹಕ್ಕಾಗಿ ಪ್ರಸಿದ್ದಿ ಹೊಂದಿ ಭಾವೈಕ್ಕತೆಯ ಬಿಡಾಗಿ, ವಿಶ್ವಕುಟುಂಬವಾಗಿ ಸರ್ವ ಸಮಾಜದ ಏಳಿಗೆಗಾಗಿ ಭಕ್ತರೊಳನ್ನೋಳಗೊಂಡಿರುವ ಸುಕ್ಷೇತ್ರ ಅಂಕಲಿಮಠದ ಶ್ರೀ ನಿರುಪಾಧೀಶ್ವರ ಹೆಸರನ್ನು ಸುಕ್ಷೇತ್ರ ಅಂಕಲಿಮಠಕ್ಕೆ ಹೋಗುವ ಮಾರ್ಗ ತಾವರಗೇರಿಗೆ ಹೋಗುವ ಮುಖ್ಯರಸ್ತೆಗೆ ಮತ್ತು ಮುದಗಲ್ ಪಟ್ಟಣ ರಸ್ತೆಗೆ ಹೊಂದಿಕೊಂಡಿರುವ ವೃತ್ತಕ್ಕೆ ಶ್ರೀ ನಿರುಪಾಧೀಶ್ವರ ವೃತ್ತವೆಂದು ನಾಮಕರಣ ಮಾಡಬೇಕೆಂದು ಪುರಸಭೆಯ ಉಪಾಧ್ಯಕ್ಷ ರಾದ ಅಜ್ಮೀರ್ ಬೆಳ್ಳಿಕಟ್ ಹಾಗೂ ಮ್ಯಾನೇಜರ್ ಸುರೇಶ್ ಹೊನ್ನಹಳ್ಳಿ ಮನವಿ ಸ್ವೀಕರಿಸಿದರು..
ಈ ಸಂದರ್ಭದಲ್ಲಿ ನಾಗನಗೌಡ ತುರಡಗಿ, ತಮಣ್ಣ ಗುತ್ತಿಗೆದಾರ ,ನಾಗನಗೌಡ ಬಯ್ಯಾಪೂರ ,ರಿಯಾಜ್ ಜಂಬಾಳಿ, ಸತೀಶ್ ಭೋವಿ , ಖಾಲೀದ್ ಪಾನ್ ಶಾಪ್ ,ಹನುಮಂತ , ಡಾ!!ಬಸವರಾಜ ಕರಡಿ , ಇತರರು ಉಪಸ್ಥಿತರಿದ್ದರು..
ವರದಿ: ಮಂಜುನಾಥ ಕುಂಬಾರ