ಸಿಂಧನೂರು : ಕಳೆದ 30 ವರ್ಷಗಳ ನಿರಂತರ ಹೋರಾಟದ ಫಲವಾಗಿ ಒಳ ಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದರೂ ಕೂಡ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಸಮಿತಿ ರಚಿಸುವುದಾಗಿ ಹೇಳಿ ಕಾಲಹರಣ ಮಾಡುತ್ತದೆ ಸಪ್ತ ನ್ಯಾಯಾಧೀಶರುಗಳು ಪೀಠ ವಿಚಾರಣೆ ನಡೆಸಿ ಇದೇ ಆಗಸ್ಟ್ 1ರಂದು ಪರಿಶಿಷ್ಟ ಜಾತಿ ಉಪ ವರ್ಗೀಕರಣಕ್ಕೆ ಸಂವಿಧಾನದ ಯಾವುದೇ ವಿಧಿಗಳು ಅಡ್ಡಿ ಬರುವುದಿಲ್ಲ ಎಂದು ತೀರ್ಪು ನೀಡುವುದು ಸರ್ವೋಚ್ಚ ನ್ಯಾಯಾಲಯದ ಚಾರಿತ್ರಿಕ ದಾಖಲೆ ಈ ತೀರ್ಪಿನಿಂದಾಗಿ ಪರಿಶಿಷ್ಟ ಜಾತಿಯ ಉಪ ವರ್ಗೀಕರಣಕ್ಕೆ ಇದ್ದ ಎಲ್ಲಾ ಅಡಚಣೆಗಳು ತಂತಾನೆ ದೂರಾದವು ಈ ತೀರ್ಪಿ ಜಾತಕ ಪಕ್ಷಗಳಂತೆ ಕಾಯುತ್ತಿದ್ದ ಸಮುದಾಯಗಳಿಗೆ ಹಾಲು-ಅನ್ನ ಉಂಡಷ್ಟೇ ಖುಷಿ ಕೊಟ್ಟಿದೆ ಆದರೆ ಸಿದ್ದರಾಮಯ್ಯನ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೆ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನೆಯ, ಸಿದ್ದರಾಮಯ್ಯನವರೇ ಇದು ಸರ್ವೋಚ್ಚ ನ್ಯಾಯಾಲಯದ ಸಂವಿಧಾನದ ಬೆಂಜ್ ಕೊಟ್ಟಿರುವ ತೀರ್ಪು ಇದರ ಮುಂದುವರಿದು ಆಯೋಗ ರಚನೆ ಮಾಡುತ್ತೇವೆ ಎನ್ನುವುದು ನೀವು ಸುಪ್ರೀಂ ಕೋರ್ಟಿಗೆ, ಸವಿಧಾನದ ಪೀಠ ಹಾಗೂ ಸಂವಿಧಾನಕ್ಕೆ ಮಾಡುತ್ತಿರುವ ದ್ರೋಹ
ಎಂದು “ಮಾದಿಗ ದಂಡೋರ ತಾಲೂಕು ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ಸಿಂಧನೂರು ಮಾನ್ಯ ತಹಸಿಲ್ದಾರ್ ಮುಖಾಂತರ ಸನ್ಮಾನ್ಯ ಘನವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ, ತಾಲೂಕ ಅಧ್ಯಕ್ಷ, ಚಿಕ್ಕೋರಪ್ಪ ತುರವಿಹಾಳ, ಕಾರ್ಯಧ್ಯಕ್ಷ, ಬಿ. ಬಸವರಾಜ, ಸಿಂಧನೂರು, ಉಪಾಧ್ಯಕ್ಷರಾದ, ಆಲಂ ಬಾಷ್ ಬೂದಿವಾಳ, ಯಮನೂರ ಬಸಾಪುರ.ಕ್ಕೆ, ಪ್ರಧಾನ ಕಾರ್ಯದರ್ಶಿ, ಛತ್ರಪ್ಪ ಬಸಾಪುರ.ಕ್ಕೆ.
ದಲಿತ ಮುಖಂಡರಾದ, ಪಂಪಾಪತಿ ಹಂಚಿನಾಳ, ಮಹೇಶ್ ಸಿಂಧನೂರು, ಬಸವರಾಜ್ ತುರುವಿಹಾಳ, ಇನ್ನು ಅನೇಕರಿದ್ದರು,
ಬಸವರಾಜ ಬುಕ್ಕನಹಟ್ಟಿ