Ad imageAd image

ಪ್ರತಿಭಟನೆ ವೇಳೆ ಬಿದ್ದು ಇಬ್ಬರು ಬಿಜೆಪಿ ಸಂಸದರಿಗೆ ಗಾಯ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ 

Bharath Vaibhav
ಪ್ರತಿಭಟನೆ ವೇಳೆ ಬಿದ್ದು ಇಬ್ಬರು ಬಿಜೆಪಿ ಸಂಸದರಿಗೆ ಗಾಯ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ 
WhatsApp Group Join Now
Telegram Group Join Now

ನವದೆಹಲಿ: ಸಂಸತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರ ನಡುವಿನ ಘರ್ಷಣೆಯ ನಂತರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಖೇಶ್ ರಜಪೂತ್ ತೀವ್ರವಾಗಿ ಗಾಯಗೊಂಡು ಐಸಿಯುಗೆ ದಾಖಲಾಗಿದ್ದಾರೆ.ವಾಗ್ವಾದದ ಸಮಯದಲ್ಲಿ ರಾಹುಲ್ ಗಾಂಧಿ ತಮ್ಮನ್ನು ತಳ್ಳಿದ್ದಾರೆ ಎಂದು ಗಾಯಗೊಂಡ ಇಬ್ಬರೂ ಸಂಸದರು ಆರೋಪಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಾರಂಗಿ, “ರಾಹುಲ್ ಗಾಂಧಿ ನನ್ನ ಮೇಲೆ ಬಿದ್ದ ಸಂಸದರನ್ನು ತಳ್ಳಿದರು, ಇದರಿಂದಾಗಿ ನಾನು ಕೆಳಗೆ ಬಿದ್ದೆ… ಅವರು ಸಂಸದರನ್ನು ತಳ್ಳಿದಾಗ ನಾನು ಮೆಟ್ಟಿಲುಗಳ ಬಳಿ ನಿಂತಿದ್ದೆ, ನಂತರ ಅವರು ನನಗೆ ಡಿಕ್ಕಿ ಹೊಡೆದರು ಎಂದಿದ್ದಾರೆ.

ನಾನು ಸಂಸತ್ತಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದೆ. ಬಿಜೆಪಿ ಸಂಸದರು ನನ್ನನ್ನು ತಡೆದು, ತಳ್ಳಿದರು. ನನಗೆ ಬೆದರಿಕೆಯನ್ನು ಹಾಕಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸಂಸತ್ ಭವನದ ಆವರಣದಲ್ಲಿ ಬಿಜೆಪಿ-ಕಾಂಗ್ರೆಸ್ ಸಂಸದರ ಪ್ರತಿಭಟನೆ ಹೇಳೆ ನೂಕಾಟ ತಳ್ಳಾಟ ನಡೆದು ಹೈಡ್ರಾಮಾ ನಡೆದಿದೆ.

ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಕೆಳಗೆ ಬಿದ್ದು ಗಾಯಗೊಂಡಿದ್ದು, ಲೋಕಸಭ ಅವಿಪಕ್ಷ ನಾಯಕ ರಾಹುಲ್ ಗಾಂಧಿ ನನ್ನನ್ನು ತಳ್ಳಿದ್ದರಿಂದ ನಾನು ಬಿದ್ದು ಗಾಯಗೊಂಡಿದ್ದಾಗಿ ಆರೋಪಿಸಿದ್ದಾರೆ.

ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ನಾನು ಯಾರನ್ನೂ ತಳ್ಳಿಲ್ಲ. ಮಾಧ್ಯಮಗಳ ಕ್ಯಾಮರಾದಲ್ಲಿ ಎಲ್ಲವೂ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!