ನಿಪ್ಪಾಣಿ :ಕಳೆದ ಲೋಕಸಭೆ ಚುನಾವಣೆಯ ನಂತರ ಬೆಳವಣಿಗೆ ಕಂಡ ರಾಜಕಾರಣದಲ್ಲಿ ವಿಶೇಷವಾಗಿ ಕತ್ತಿ ಹಾಗೂ ಜೊಲ್ಲೆ ಕುಟುಂಬಗಳ ಹಗ್ಗ ಜಗ್ಗಾಟದಲ್ಲಿ ಜೊಲ್ಲೆ ದಂಪತಿಗಳು ಯಶಸ್ಸು ಕಾಣುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆ ಎನಿಸಿಕೊಂಡ ಅಷ್ಟೇ ಅಲ್ಲ ಕತ್ತಿ ಕುಟುಂಬದ ಹಿಡಿತದಲ್ಲಿದ್ದ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ಈಗ ಮಾಜಿ ಸಂಸದ ಅಣ್ಣಾಸಾಹೇಬ್ ಜೊ ಲ್ಲೆಯವರ ನಿಯಂತ್ರಣಕ್ಕೆ ಬಂದಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮೇಲೆ ಹಿಡಿತ ಸಾಧಿಸಿದ್ದ ಜೊಲ್ಲೆ ಕುಟುಂಬ ಈಗ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ನಷ್ಟ ಅನುಭವಿಸುತ್ತಿದ್ದುದನ್ನು ಕಂಡು ಕಾರ್ಖಾನೆ ಲೀಸ್ ಮೇಲೆ ಕೊಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಬೀರೇಶ್ವರ ಬ್ಯಾಂಕಿನಿಂದ ಆರ್ಥಿಕ ನೆರವು ನೀಡಿ ಕಾರ್ಖಾನೆಯನ್ನು ಲೀಸನಿಂದ ತಪ್ಪಿಸಿದ್ದಾರೆ.

ಸದರಿ ಸಮಸ್ಯೆಗೆ ಕಾರ್ಖಾನೆ ಆಡಳಿತ ಮಂಡಳಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ವಿಶ್ವಾಸಕ್ಕೆ ಸಹಕರಿಸಿದ್ದ ಬಸವರಾಜ ಕಲ್ಲಟ್ಟಿಯನ್ನು ಅಧ್ಯಕ್ಷರಾಗಿ ಹಾಗೂ ಅಶೋಕ್ ಪಟ್ಟಣಶೆಟ್ಟಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮತ್ತೊಮ್ಮೆ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಮೇಲು ಹಿಡಿತ ಸಾಧಿಸಿದ್ದಾರೆ ಈ ಎಲ್ಲ ಬೆಳವಣಿಗೆಯಿಂದಾಗಿ ಜಿಲ್ಲೆಯ ರಾಜಕಾರಣದಲ್ಲಿಯ ರಾಜಕಾರಣಕ್ಕೆ ಹೊಸ ತಿರುವು ಪಡೆದುಕೊಂಡಂತಾಗಿದೆ.
ವರದಿ :ಮಹಾವೀರ ಚಿಂಚಣೆ




