ಯಳಂದೂರು:ಸುವರ್ಣವತಿ ನದಿಯ ನೀರಲ್ಲಿ ದಾಟಿ ಶವ ಸಾಗಿಸಿದ ಸ್ಥಳಕ್ಕೆ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎನ್. ಮಹೇಶ್ ಮತ್ತು ಮಾಜಿ ಶಾಸಕರಾದ ಎಸ್. ಬಾಲರಾಜ್ ರವರು ಭೇಟಿ.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎನ್. ಮಹೇಶ್ ರವರು ಮಾತನಾಡಿ ಮದ್ದೂರು ಗ್ರಾಮದಲ್ಲಿ ಪರಿಶಿಷ್ಟ ಜನಾಂಗಕ್ಕೆ ಸೇರಿದ ಸ್ಮಶಾನಕ್ಕೆ ಶವ ಸಂಸ್ಕಾರಕ್ಕೆ ತೆರಳಲು ಸುವರ್ಣವತಿ ನದಿ ದಾಟಿ ಶವವನ್ನು ತೆಗೆದುಕೊಂಡು ಹೋಗಬೇಕೆಂದು ಪತ್ರಿಕೆಗಳಲ್ಲಿ ಬಂದಿದ್ದು, ಇದರ ಬಗ್ಗೆ ಪರಿಶೀಲನೆ ಮಾಡಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ವಿಚಾರವಾಗಿ ಬಂದಿದ್ದು, ಹಿಂದೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಾನ್ಯ ಸುರೇಶ್ ಕುಮಾರ್ ಅವರು ನನಗೆ ಕರೆ ಮಾಡಿ ಈ ವಿಚಾರವಾಗಿ ಪ್ರಸ್ತಾಪಿಸಿದಾಗ ಆ ಕೆಲಸದ ಕಾಮಗಾರಿ ಎಲ್ಲಿಯವರೆಗೆ ನಿಂತಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದರೂ, ನಾನು ಶಾಸಕನಾಗಿದ್ದಾಗ 2022 ರಲ್ಲಿ ವಿಶೇಷ ಘಟಕ ಯೋಜನೆಯಲ್ಲಿ ಮದ್ದೂರು ಗ್ರಾಮದಿಂದ ಸ್ಮಶಾನಕ್ಕೆ ಹೋಗಲು ಸುವರ್ಣ ವತಿ ನದಿಗೆ ಅಡ್ಡಲಾಗಿ ಸೇತುವೆ ಮಾಡಲು 85 ಲಕ್ಷದ ಪ್ರೊಫೆಸಲ್ ನೀಡಿದೆ, ಪಂಚಾಯತ್ ರಾಜ್ ಇಂಜಿನಿಯರ್ ರವರು ಅದಕ್ಕೆ 150 ಲಕ್ಷ ಸೇರಿಸಿ ಅದನ್ನು ಸರ್ಕಾರಕ್ಕೆ ಕಳಿಸಿದ್ದು ಅದು ಚಾಲ್ತಿಯಲ್ಲಿದ್ದು ಅದನ್ನು ಮುಂದುವರಿಸಿದರೆ ಕಾಮಗಾರಿಯೋ ತಕ್ಷಣ ನಡೆಯುವುದು, ಮಾನ್ಯ ಸುರೇಶ್ ಕುಮಾರ್ ಅವರು ನನ್ನ ಜೊತೆ ಮಾತನಾಡಿ ವಿಧಾನಸಭೆಯ ಅರ್ಜಿ ಸಮಿತಿಗೆ ಗ್ರಾಮಸ್ಥರಿಂದ ಮನವಿ ಪತ್ರ ನೀಡಿಸಿದರೆ ತಕ್ಷಣ ಇದರ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಆಗಾಗಿ ಗ್ರಾಮಸ್ಥರಿಂದ ನನಗೆ ಒಂದು ಅರ್ಜಿ ಕೊಡಿಸಿ ಎಂದು ತಿಳಿಸಿದರು. ಹಾಗಾಗಿ ಈ ಕಾಮಗಾರಿ ತಕ್ಷಣ ನಡೆಯುವಂತೆ ಮಾಡಲಾಗುವುದು, ಈ ಸ್ಥಳಕ್ಕೆ ಇವಾಗ AC ಹಾಗೂ ತಾಸಿಲ್ದಾರ್ ರವರು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ, ಈ ಕಾಮಗಾರಿಯ ಫೈಲ್ ನ ತಿಥಿ ಹೇಗಿದೆ ಎಂಬುದರ ಬಗ್ಗೆ ತಿಳಿಸಲಾಗಿದೆ, ಹಾಗಾಗಿ ಮದ್ದೂರು ಗ್ರಾಮಕ್ಕೆ ತಕ್ಷಣ ಸೇತುವೆ ವ್ಯವಸ್ಥೆ ಆಗಬೇಕೆಂದು ತಿಳಿಸಿದರು.
ಮಾಜಿ ಶಾಸಕ ಎಸ್ ಬಾಲರಾಜು ಮಾತನಾಡಿ ನನ್ನ ಸ್ವಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ರಸ್ತೆ ಇಲ್ಲದ ಕಾರಣ ನಮ್ಮ ಗ್ರಾಮಸ್ಥರು ಸಾವನ್ನು ತೆಗೆದುಕೊಂಡು ನದಿಯಲ್ಲಿ ಹಾದು ಹೋಗಿದ್ದು, ನಾವು ಈ ಹಿಂದೆ 2022 ರಲ್ಲಿ ಎಸಿಪಿ ಯೋಜನೆ ಅಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದು, ಆನಂತರ ಚುನಾವಣೆ ಬಂದ ಹಿನ್ನೆಲೆ ಅದು ಸ್ಥಗಿತವಾಗಿದ್ದು ಈಗಿನ ಶಾಸಕರು ಹಾಗೂ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಸೇತುವೆ ನಿರ್ಮಾಣ ಕಾರ್ಯವನ್ನು ತಕ್ಷಣ ಜರೂರಾಗಿ ಮಾಡಬೇಕೆಂದು ಒತ್ತಾಯಿಸಿದ್ದರು, ನಮ್ಮ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಒಂದು ಎಕರೆ ಸ್ಮಶಾನ ಜಾಗವಿದ್ದು, ಗ್ರಾಮಸ್ಥರು ಸೇರಿ ಹೆಚ್ಚುವರಿಯಾಗಿ ಎರಡು ಎಕ್ಕರೆಯನ್ನು ಸ್ವತಹ ಖರೀದಿ ಮಾಡಿದ್ದು, ಒಟ್ಟು ಮೂರು ಎಕರೆ ಜಾಗದಲ್ಲಿ ಸ್ಮಶಾನ ಇದೆ, ಈಸ್ಟ್ ಮಸಾನಕ್ಕೆ ಹೋಗಲು 3 ಕಿ.ಮೀ ನಷ್ಟು ಬಳಸಿಕೊಂಡು ಹೋಗಬೇಕಾಗಿದ್ದು ಆದ್ದರಿಂದ ನದಿಗೆ ತಕ್ಷಣ ಸೇತುವೆ ಯಾದರೆ ಶವವನ್ನು ಸಾಗಿಸಲು ಅನುಕೂಲವಾಗುತ್ತದೆ, ಇದರ ಬಗ್ಗೆ ಸರ್ಕಾರ ಯಾವ ಹಂತದಲ್ಲಿ ಈ ಕಾಮಗಾರಿಯು ಇದೆ ಎಂಬುದನ್ನು ಪರಿಶೀಲನೆ ಮಾಡಿ ತಕ್ಷಣ ಮದ್ದೂರು ಗ್ರಾಮದ ಸ್ಮಶಾನದ ಸೇತುವೆಯನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು .
ಈ ಸಂದರ್ಭದಲ್ಲಿ ಮದ್ದೂರು ಗ್ರಾಮದ ಯಜಮಾನರು ಕುಲಸ್ಥರು ಹಾಗೂ ಯುವಕರು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ