Ad imageAd image

ಸ್ತ್ರೀ ಕುಲಕ್ಕೆ ಅವಮಾನ ಮಾಡಿದ ಸಿಟಿ ರವಿಗೆ ಧಿಕ್ಕಾರವಿರಲಿ: ಶೀತಲ್ ಮಠಪತಿ

Bharath Vaibhav
ಸ್ತ್ರೀ ಕುಲಕ್ಕೆ ಅವಮಾನ ಮಾಡಿದ ಸಿಟಿ ರವಿಗೆ ಧಿಕ್ಕಾರವಿರಲಿ: ಶೀತಲ್ ಮಠಪತಿ
WhatsApp Group Join Now
Telegram Group Join Now

ಬೆಳಗಾವಿ:ನಿನ್ನೆ ನಡೆದ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತಾಗಿ ಮಾತನಾಡಿದ ಘಟನೆ ಇಡೀ ಸ್ತ್ರಿ ಕುಲವೇ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಸಂಸ್ಕಾರವಿಲ್ಲದ ಮನೆತನದಲ್ಲಿ ಹುಟ್ಟಿ ಬೆಳೆದಂಥ ಸಿಟಿ ರವಿ ಅವರ ಮನಸ್ಥಿತಿಯನ್ನು ನೋಡಿದರೆ ತನ್ನ ಹೆತ್ತ ತಾಯಿಯ ಶೀಲವನ್ನು ಸಂಕಿಸುವ ಹೀನ ಮನಸ್ಥಿತಿಯವನು ಎಂಬುದು ಅರ್ಥವಾಗುತ್ತದೆ. 30 ವರ್ಷದ ರಾಜಕೀಯ ಅನುಭವ ಇರುವ ಇಂತಹ ವ್ಯಕ್ತಿ ನಿನ್ನೆ ಸದನದಲ್ಲಿ ಬಳಸಿದ ಶಬ್ದ ರಾಜ್ಯದ ಸ್ತ್ರೀ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಇಂತಹ ಹೀನ ಮನ ಸ್ಥಿತಿಯ ರಾಜಕೀಯ ಮುಖಂಡನ ವಿರುದ್ಧ ರಾಜ್ಯದ ಮಹಿಳೆಯರು ಕಿತ್ತೂರು ರಾಣಿ ಚೆನ್ನಮ್ಮನರೀತಿ ಕೆಚ್ಚೆದೆಯಂತೆ ಸಿಡಿದು ನಿಂತರೆ ಈತನ ಅವನತಿಯಾಗುವುದರಲ್ಲಿ ಸಂಶಯವಿಲ್ಲ.

ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಅಧಿವೇಶನ ನಡೆಸುತ್ತಿದ್ದರೆ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಬಯಸದ ಸಿಟಿ ರವಿ ದುರುದ್ದೇಶದಿಂದಲೇ ಹೆಬ್ಬಾಳ್ಕರ್ ಅವರ ವಿರುದ್ಧವಾಗಿ ಅಶ್ಲೀಲ ಪದ ಬಳಸುವುದರ ಮೂಲಕ ಬೆಳಗಾವಿ ಅಧಿವೇಶನ ನಡೆಯದಂತೆ ಮಾಡುವುದೇ ಈತನ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಬಾಯಿ ಎತ್ತಿದರೆ ಸಂಸ್ಕಾರ ಸಂಸ್ಕೃತಿ ಮಾತನಾಡುವ ಬಿಜೆಪಿಯವರು ಇಂಥ ನೀಚ ರಾಜಕೀಯ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಸಿಟಿ ರವಿ ಕಂಡ ಕಂಡಲ್ಲಿ ಮಳೆಯರು ಕಪ್ಪು ಮಸಿ ಬಳೆದು ಪೊರ್ಕೆ ಸೇವೆ ಮಾಡುತ್ತೇವೆ. ಇಂತಹ ಅಯೋಗ್ಯ ಸಿಟಿ ರವಿ ರಾಜಕಾರಣದಲ್ಲಿ ಇರಲು ನಾಲಾಯಕ್ ಇದ್ದಾನೆ. ಈತನ ವರ್ತನೆ ಇದೇ ರೀತಿಯಾಗಿ ಮುಂದುವರೆದರೆ ಹಾಗೂ ತಕ್ಷಣವೇ ಸಚಿವೆ ಹೆಬ್ಬಾಳ್ಕರ್ ಹಾಗೂ ರಾಜ್ಯದ ಮಹಿಳೆಯರ ಕ್ಷಮೆ ಯಾಚಿಸದಿದ್ದರೆ ಮುಂದಿನ ದಿನಗಳಲ್ಲಿ ಸಿಟಿ ರವಿಗೆ ಬೆಳಗಾವಿಗೆ ಕಾಲಿಡಲು ಬಿಡುವುದಿಲ್ಲ ಎಂದು  ಶೀತಲ್ ಮಠಪತಿ ಯುವ ಕಾಂಗ್ರೆಸ್ ಘಟಕ (ರಾಜ್ಯ ಪ್ರಧಾನ ಕಾರ್ಯದರ್ಶಿ) ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!