Ad imageAd image

ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ವಿರೋಧಿ ಹೇಳಿಕೆ ಖಂಡಿಸಿ ದಲಿತ ಮುಖಂಡರಿಂದ ಪ್ರತಿಭಟನೆ

Bharath Vaibhav
ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ವಿರೋಧಿ ಹೇಳಿಕೆ ಖಂಡಿಸಿ ದಲಿತ ಮುಖಂಡರಿಂದ ಪ್ರತಿಭಟನೆ
WhatsApp Group Join Now
Telegram Group Join Now

ಸವಣೂರ :ದಿನಾಂಕ.18/12/2024 ರಂದು ಸಂಸತ್ ಅಧಿವೇಶನದ ರಾಜ್ಯಸಭಾ ಭಾಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಭಾಷಣ ಮಾಡುವ ವೇಳೆ ಅಂಬೇಡ್ಕರ.. ಅಂಬೇಡ್ಕರ್..ಅಂಬೇಡ್ಕರ್.. ಹೆಸರು ಫ್ಯಾಷನ್ ಆಗಿ ಬಿಟ್ಟಿದೆ ಅದನ್ನು ಬಿಟ್ಟು ದೇವರ ಜಪ ಮಾಡಿದರೆ ಸ್ವರ್ಗಕ್ಕೆ ಹೋಗ್ತೀರಿ ಎಂದು ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬರನ್ನು ಅವಮಾನಿಸಿದ ಕೇಂದ್ರ ಸಚಿವರಾದ ಅಮಿತ್ ಶಾ ರನ್ನು ಕೂಡಲೇ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸಿ ಅವರ ಮೇಲೆ ಅಟ್ರಾ ಸಿಟಿ ಕೇಸ್ ಹಾಗೂ ದೇಶದ್ರೂಹ ಪ್ರಕರಣವನ್ನು ದಾಖಲಿಸಿ. ಭಾರತ ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ. ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ವಿವಿಧ ದಲಿತ ಮುಖಂಡರಗಳ ಮುಖಾಂತರ. ಸವಣೂರ ತಾಲೂಕ ಉಪ ವಿಭಾಗ ಅಧಿಕಾರಿಗಳ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಸವಣೂರಿನ ವಿವಿಧ ದಲಿತ ಸಮಾಜದ ಮುಖಂಡರುಗಳು ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಲಕ್ಷ್ಮಣ್ ಕನವಳ್ಳಿ. ನಾಗರಾಜ್ ಹರಿಜನ. ಗಂಗಪ್ಪ ಹರಿಜನ. ಆನಂದ ವಡಕಮ್ಮನವರ ರಾಘವೇಂದ್ರ ಬಾಲೆ ಹೋಸುರು. ಮನೋಜ್ ದೊಡ್ಡಮನಿ. ಸುರೇಶ್ ತಳವಾರ್. ಮಂಜುನಾಥ್ ಮಳ್ಳಿಹಳ್ಳಿ. ಮುತ್ತು ಲಕ್ಮೆಶ್ವರ್. ಲಕ್ಷ್ಮಣ್ ಮುಗಳಿ. ಬಾಬಾನ ಸಾಬ್ ರಾಯಚೂರ. ಶಂಕರ್ ಮರ್ಗಪ್ಪನವರ್ ದ್ಯಾಮಣ್ಣ ಪೂಜಾರ. ಪ್ರಶಾಂತ್ ಮುಗಳಿ. ರಾಜು ಮರಗಪ್ಪನವರ.ಎಂ ಆರ್ ಮೈಲಮ್ಮನವರ್ ರಾಜು ಮುನಿಯಪ್ಪವರ. ಮನೋಜ್ ಕನವಳ್ಳಿ ಅನೇಕ ದಲಿತ ಮುಖಂಡರು ಉಪಸ್ಥಿತರಿದ್ದರು,

ವರದಿ :ಮನೋಜ್ ದೊಡ್ಡಮನಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!