ಕಾಳಗಿ : ಸಾರ್ವಜನಿಕರಿಗೆ ನೇರವಾಗಿ ಸೇವೆ ನೀಡುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸ್ವಂತ ಕಚೇರಿ ನೀಡಬೇಕು, ಮಹಿಳಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುರಕ್ಷತಾ ಸೌಲಭ್ಯಗಳನ್ನ ನೀಡಬೇಕು, ಗ್ರಾಮ ಆಡಳಿತ ಅಧಿಕಾರಿಗಳು ಕುಟುಂಬದವರೊಂದಿಗೆ ನೆಮ್ಮದಿಯಿಂದ ಜೀವನ ನಡೆಸಲು ಅಂತರ ಜಿಲ್ಲಾ ವರ್ಗಾವಣೆ, ಗ್ರಾಮ ಆಡಳಿತ ಬಡ್ತಿ, ಸರ್ಕಾರದ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಾನೂನಿನ ರಕ್ಷಣೆ ನೀಡಬೇಕು,ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಸೋಮವಾರ ದಿಂದ ಕರೆ ನೀಡಿದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾಳಗಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಬೆಂಬಲ ನೀಡಿ, ಕಾಳಗಿ ತಾಲೂಕಿನ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿ , ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷರಾದ ಸಿದ್ದಲಿಂಗ ಕ್ಷೇಮಶೆಟ್ಟಿ ಅವರು ಮಾತನಾಡಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಛೇರಿ ಉತ್ತಮ ಗುಣಮಟ್ಟದ ಟೇಬಲ್ ಮತ್ತು ಅಲ್ಮೆರಾ. ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್ ( 12ಜಿಬಿ /256ಜಿಬಿ) ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್. ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು. ಅಂತರ ಜಿಲ್ಲಾ ವರ್ಗಾವಣೆಯ ಕೆ.ಸಿ.ಎಸ್.ಆರ್ ನಿಯಮ 16ಎ ರ ಉಪಖಂಡ (2) ನ್ನು ಮರುಸ್ಥಾಪಿಸುವ ಬಗ್ಗೆ ಅಥವಾ ಇತರೆ ಎಲ್ಲಾ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿಯನ್ನು ರಚಿಸಬೇಕು, ಕಳೆದ ನಾಲ್ಕು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಪದೋನ್ನತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ, ಕೆ.ಸಿ.ಎಸ್.ಆರ್ ನಿಯಮ 16 ಎ ರ ಉಪಖಂಡ(2) ವನ್ನು ಹಿಂಪಡೆದಿರುವುದರಿಂದ ನೌಕರರ ಜೀವನದಲ್ಲಿ ಈ ಕೆಳಕಂಡಂತೆ ಹಲವಾರು ಸಮಸ್ಯೆಗಳು ಉಂಟಾಗಿರುತ್ತದೆ, ಆದ್ದರಿಂದ ಈ 16 ಎ ಉಪಖಂಡ(2)ನ್ನು ಮರುಸ್ಥಾಪಿಸುವಂತೆ ಅಥವಾ ಕಂದಾಯ ಇಲಾಖೆಯಲ್ಲಿ ಇತರೆ ಎಲ್ಲಾ ಇಲಾಖೆಗಳಲ್ಲಿ ಮಾಡಿರುವಂತೆ, ವರ್ಗಾವಣೆಯ ಮಾರ್ಗಸೂಚಿಯನ್ನು ರಚಿಸಬೇಕು ಎಂದರು ಹಲವಾರು ಬೇಡಿಕೆಗಳ ಕುರಿತು ಈ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರವಿಕಿರಣ್ ಕೆ ಪಿ ಕಲ್ಲಹಿಪ್ಪರಗ,ಸಂತೋಷ್ ಮಾವಿನಕರ ಕಾಳಗಿ, ರಾಜು ಗೋಪಣೆ ಕೊರವಾರ್, ರಾಜಕುಮಾರ್ ಚವಾಣ್ ಹೆಬ್ಬಾಳ್, ಇರ್ಷಾದಅಲಿ ಚಿಂಚೋಳಿ ಎಚ್, ಬಾಬುರಾವ್, ಮಹಾಂತೇಶ್ ಬಿಜ್ಜರಗಿ ಪೆಠಶಿರುರ, ಬಸವರಾಜ್ ಕಟ್ಟೊಳ್ಳಿ, ರುದ್ರಪ್ಪ ಯಲಗೋಡು ಮುಕ್ರಂಭ, ಶಿವರಾಜ್ ಕಂದುಗೊಳ್,ಶಿಲ್ಪಾ ಭೂಮಿ ಕೇಂದ್ರ, ಅಕ್ಕಮಹಾದೇವಿ ಭೂಮಿ ಕೇಂದ್ರ,ಶರಣಪ್ಪ ಮರ್ತೂರ್ ಭೂಮಿ ಕೇಂದ್ರ,
ಶಬ್ಬೀರ್ ಅಹ್ಮದ್ ಗಡಿಕೇಶ್ವರ್, ಇದ್ದರು
ವರದಿ : ಹಣಮಂತ ಕುಡಹಳ್ಳಿ




