ವಿಜಯಪುರ : ಭೀಮಾತೀರದಲ್ಲಿ ಯಾವತ್ತು ಹರಿಯುತ್ತಿದ್ದ ರಕ್ತದೊಕಳಿ ಮತ್ತೆ ಇಂದು ಹರಿದಿದೆ.
ಕೆಲವು ದಿನಗಳಿಂದ ತಣ್ಣಗಾಗಿದ್ದ ಭೀಮಾತೀರದಲ್ಲಿ ಎಂದು ಮತ್ತೆ ರಕ್ತದೊಕುಳಿ ಹರಿದಿದೆ.
ಭೀಮಾ ತೀರದ ಹಂತಕನಂದೆ ಕರೆಯಲ್ಪಡುವ ಬಾಗಪ್ಪ ಹರಿಜನ್ ನನ್ನು ದುಷ್ಕರ್ಮಿಗಳು ನಿನ್ನೆ ರಾತ್ರಿ ವಿಜಯಪುರದ ಮದೀನಾ ನಗರದಲ್ಲಿರುವ ಅವನ ಮನೆಯಿಂದ ಹೊರ ಬರುತ್ತಿರುವಾಗ ಮಾರಕಾಸ್ತ್ರಗಳಿಂದ ಅವನ ಮುಖ ಮತ್ತು ತಲೆ ಸೇರಿದಂತೆ ಸಿಕ್ಕಸಿಕ್ಕಲ್ಲೆ ಕೊಚ್ಚಿ ಕೊಲೆ ಮಾಡಲಾಗಿದೆ.
ಬಾಗಪ್ಪ ಹರಿಜನ್ ವಯಸ್ಸು 49, ಇವನು ಚಂದಪ್ಪ ಹರಿಜನ್ ಅವರ ಶಿಷ್ಯನಾಗಿದ ಚಂದಪ್ಪ ಹರಿಜನ್ ಎನ್ಕೌಂಟರ್ ಆದ ನಂತರ ಬಾಗಪ್ಪ ಹರಿಜನ ಕಲ್ಬುರ್ಗಿ ಮತ್ತು ವಿಜಯಪುರದಲ್ಲಿ ಸಕ್ರಿಯನಾಗಿದ್ದನು ಆದರೆ ಇಂದು ರೇಡಿಯೋ ಕೇಂದ್ರದ ಮುಂಭಾಗದಲ್ಲಿ ಸಮಯ 8:30ರ ಸುಮಾರಿಗೆ ವಿಜಯಪುರದಲ್ಲಿರುವ ಅವನ ಬಾಡಿಗೆ ಮನೆಯಿಂದ ಹೊರ ಬರುತ್ತಿರುವಾಗ ಎಂಟು ಆಟೋಗಳಲ್ಲಿ ಬಂದ ದುಷ್ಕರ್ಮಿಗಳು ರೇಡಿಯೋ ಕೇಂದ್ರ ಮುಂಬಾಗದಲ್ಲಿ ಕೊಡಲಿ ಮತ್ತು ಮಾರಕಾಸ್ತ್ರಗಳಿಂದ ತಲೆ ಮತ್ತು ಕೈಯನ್ನು ತುಂಡರಿಸಿ ಪರಾರಿಯಾಗಿದ್ದಾರೆ.
ಘಟನಾಸ್ಥಳಕ್ಕೆ ವಿಜಯಪುರ ಎಸ್ ಪಿ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೂ ಬಾಗಪ್ಪ ಹರಿಜನ್ ಹಂತಕರ ಪತ್ತೆಗಾಗಿ ಎ ಎಸ್ ಪಿ ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಬಾಗಪ್ಪ ಹರ್ಜನ್ ಅನೇಕ ಪ್ರಕರಣದಲ್ಲಿ ಅಂದರೆ ಆರು ಕೊಲೆ ಆರೋಪಿಯಾಗಿದ್ದು ಇನ್ನಿತರ 9 ಪ್ರಕರಣಗಳು ಅವನ ಮೇಲೆ ಮೇಲೆ ದಾಖಲಾಗಿವೆ ಜಾಮೀನಿನ ಮೇಲೆ ಹೊರಗಿದ್ದನು.
ವರದಿ : ಸಾಯಬಣ್ಣ ಮಾದರ




