ಬಾಗಲಕೋಟೆ : ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅಶ್ಲೀಲವಾಗಿ ನಿಂದಿಸಿರುವ ಕುರಿತಂತೆ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಬಿಜೆಪಿಯವರ ಸಂಸ್ಕೃತಿಯೇ ಅದು. ಬಿಜೆಪಿಯ ನಾಯಕರು ಕೀಳುಮಟ್ಟದ ಭಾಷೆಯನ್ನು ಬಳಸುತ್ತಾರೆ. ವಿಜಯಪುರದ ಒಂದು ಕೋಣ ಅಲ್ಲ ಗೊಡ್ಡೆಮ್ಮೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸ್ಕೃತಿಗೆ ಅದು. ಅವರಿಗೆ ಸಂಸ್ಕಾರ ಸಂಸ್ಕೃತಿಯೇ ಇಲ್ಲ. ಬಿಜೆಪಿ ನಾಯಕರು ಕೀಳು ಮಟ್ಟದ ಶಬ್ದವನ್ನು ಬಳಸಿದ್ದಾರೆ.
ಬಿಜೆಪಿ ಶಾಸಕ ಯತ್ನಾಳ ಹೆಸರು ಹೇಳದೆ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ನಡೆಸಿದ್ದು, ವಿಜಯಪುರದ ಕೋಣ ಅಲ್ಲಲ್ಲ ಗೊಡ್ಡೆಮ್ಮೆ ಎಂದು ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಬಿಜೆಪಿ ನಿಂದಿಸಿದ್ದಾರೆ.
ಸಿಟಿ ರವಿ ಒಬ್ಬ ಬಚ್ಚಾ. ಸದನದಲ್ಲಿ ಯಾವ ಶಬ್ದ ಬಳಕೆ ಮಾಡಬೇಕೆಂಬ ಬಗ್ಗೆ ನಿಯಮವಿದೆ. ಆದರೆ ಸಿಟಿ ರವಿ ಮಂತ್ರಿಯಾಗಿದ್ದರೂ ಸಂಸದೀಯ ಪದ ಬಳಸಿದ್ದಾರೆ. ಒಬ್ಬ ಹೆಣ್ಣು ಮಗಳ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದನ್ನು ಖಂಡಿಸುತ್ತೇನೆ.
ಅದಕ್ಕೆ ಅವನನ್ನು ಜನರು ಮನೆಯಲ್ಲಿ ಕೂರಿಸಿದ್ದಾರೆ. ಅಲ್ಲದೆ ಬಿಜೆಪಿ ಅವರಿಗೆ ಕೊಬ್ಬು ಹೆಚ್ಚಾಗಿದೆ. ಸಿಟಿ ರವಿಗೆ ಕಾನೂನು ಪ್ರಕಾರ ಏನು ಕ್ರಮ ಆಗಬೇಕು ಅದು ಹಾಗೆ ಆಗುತ್ತದೆ ಎಂದು ಹೊನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.