ತಮಿಳುನಾಡಿನ ತಿರುಚ್ಚಿಯಲ್ಲಿ ಅನಧಿಕೃತ ಟ್ಯಾಟೂ ಪಾರ್ಲರ್ ನಡೆಸುತ್ತಿದ್ದ ಮತ್ತು ಯಾವುದೇ ಸುರಕ್ಷತಾ ಉಪಕರಣಗಳು ಅಥವಾ ವೈದ್ಯಕೀಯ ತರಬೇತಿಯಿಲ್ಲದೆ ಯುವಕನ ನಾಲಿಗೆ ಸೀಳುವ ಪ್ರಕ್ರಿಯೆ ನಡೆಸಿದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಈ Tongue-Splitting ಅಪಾಯಕಾರಿ ಪ್ರಕ್ರಿಯೆಯನ್ನು ಪ್ರಚಾರ ಮಾಡುವ ಸಲುವಾಗಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಪೊಲೀಸರು ಇಬ್ಬರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಈ ಆರೋಪಿಗಳ ಅನಧಿಕೃತ ಟ್ಯಾಟೂ ಕೇಂದ್ರವನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ.Tongue-Splitting ಅಪಾಯಕಾರಿ ಪ್ರಕ್ರಿಯೆ ನಿರ್ವಹಿಸಲು ಇಬ್ಬರಿಗೂ ಯಾವುದೇ ಅಗತ್ಯ ತರಬೇತಿಯಾಗಲಿ ಅಥವಾ ಈ ಕೇಂದ್ರ ನಡೆಸಲು ಯಾವುದೇ ಅರ್ಹತೆಯಾಗಲಿ ಅಥವಾ ಪರವಾನಗಿಯಾಗಲಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.