ಸಿಂಧನೂರು : ರಾಜ್ಯಸಭೆ ಕಲಾಪದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ರಾಜೀನಾಮೆ ಪಡೆಯಲು ಒತ್ತಾಯಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಅಮಿತ್ ಶಾ ಕೇಂದ್ರ ಸರ್ಕಾರದ ಮಂತ್ರಿಯಾಗಿ ಅಂಬೇಡ್ಕರ್ ಕುರಿತು ಅಂಬೇಡ್ಕರ್ ಜಪ ಒಂದು ಪ್ಯಾಶನ್ ಆಗಿದೆ ಇದರ ಬದಲು ದೇವರ ಜಪ ಮಾಡಿದರೆ ಸ್ವರ್ಗದಲ್ಲಿ ಒಳ್ಳೆ ಸ್ಥಾನಮಾನ ಸಿಗುತ್ತದೆ ಎಂದು ಮಾತನಾಡಿದ್ದಾರೆ ಹಾಗಾಗಿ ಇದು ಅಸಂವಿಧಾನಿಕ ನಡೆಯಾಗಿದೆ ಈ ಹೇಳಿಕೆ ಕೋಮುವಾದಿ ಮನಸ್ಥಿತಿಯ ಬಣ್ಣವನ್ನು ಬಹಿರಂಗಪಡಿಸುವಂತಾಗಿದೆ ಹೀಗಾಗಿ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು ಆಗ್ರಹಿಸಿ ಹಾಗೂ ದೇಶದ ಅಂಬೇಡ್ಕರ್ ಅನುವಾಯಿಗಳಿಗೆ ಕ್ಷಮೆ ಯಾಚಿಸಲು ತಾಸಿಲ್ದಾರ್ ಅವರ ಮುಖಾಂತರ ಮಾನ್ಯ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ – ಆರ್. ಅಂಬ್ರುಸ್, ಜಗದೀಶ್ ವಕೀಲ್, ಕೆ.ಮರಿಯಪ್ಪ, ಅಲ್ಲಮಪ್ರಭು ಪೂಜಾರ್, ಮೌನೇಶ್ ಜಾಲವಾಡಗಿ, ಎಚ್. ಎನ್. ಬಡಿಗೇರ್, ಹುಸೇನಪ್ಪ ಬಾಲಿ, ನಾಗರಾಜ್ ಪೂಜಾರ್, ಗುರುರಾಜ್ ಮುಕುಂದ, ಆಲಂಬಾಸ್ ಬೂದಿಹಾಳ, ಪಂಪಾಪತಿ ಹಂಚಿನಾಳ, ಎಂ. ಗಂಗಾಧರ್, ಮುತ್ತು ಸಾಗರ್, ಸಬ್ಜಲಿ ಸಾಬ್, ಮಹೇಶ್ ಸುಕಲ್ಪೇಟೆ, ಇನ್ನು ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ