ಬೆಂಗಳೂರು: ಇನ್ನೂ ಮುಂದೆ ಸುರಕ್ಷತೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಎಂದು ಬೆಳಗಾವಿ ಕಮಿಷನರ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಅವರನ್ನು ಬಂಧಿಸಿದ ಬಳಿಕ ಪೊಲೀಸರು ಅವರನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿದರು.ಯಾರಾದರೂ ಸೇಫ್ಟಿಗಾಗಿ, ಕಬ್ಬಿನ ಗದ್ದಗೆ ಅಥವಾ ಕಾಡಿಗೆ ಕರೆದುಕೊಂಡು ಹೋಗ್ತಾರಾ? ಹಾಗಿದ್ರೆ ಪರಪ್ಪನ ಅಗ್ರಹಾರದಲ್ಲಿರುವ ಖೈದಿಗಳನ್ನು ಎಲ್ಲರನ್ನೂ ಕರೆದುಕೊಂಡು ಹೋಗಿ ಕಬ್ಬಿನ ಗದ್ದೆ, ಮತ್ತೆ ಕಾಡಿಗೆ ಬಿಟ್ಟು ಬಿಡಿ. ಇಂತಹ ಮುಖ್ಯಮಂತ್ರಿ, ಇಂತಹ ಪೊಲೀಸ್ ಕಮಿಷನರ್ ನಮ್ಮ ರಾಜ್ಯಕ್ಕೆ ಸಿಕ್ಕಿರೋದು ದುರ್ದೈವ ಎಂದರು.
ರಾಜ್ಯದ ಮುಖ್ಯಮಂತ್ರಿಗಳಿಗೂ ಸೇಫ್ಟಿ ಇದೆಯಲ್ಲ. ಇನ್ಮುಂದೆ ಅವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಬನ್ನಿ. ಆ ನಂತರ ಸೇಫ್ಟಿಗಾಗಿ ಕಬ್ಬಿನ ಗದ್ದೆಗೋ ಅಥವಾ ಕಾಡಿಗೆ ಬಿಟ್ಟು ಬಿಡಿ ಎಂದ ಅವರು, ಸಿಟಿ ರವಿ ಪ್ರಕರಣದಲ್ಲಿ ಪೊಲೀಸರ ಹಿಂದೆ ಇರೋದೇ ಡಿಸಿಎಂ ಡಿಕೆ ಶಿವಕುಮಾರ್ ಆಗಿದ್ದಾರೆ. ವಿಪಕ್ಷಗಳನ್ನು ಬಗ್ಗು ಬಡಿದರೆ ಬೇಗ ಸಿಎಂ ಆಗಬೇಕೆಂಬುದು ಎನ್ನುವುದಕ್ಕೆ ಈ ರೀತಿಯ ತಂತ್ರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.