Ad imageAd image

ಪಾವಗಡದ ಸಾಧಕರಿಗೆ ಭಾರತ ರತ್ನ ಸೇವಾ ಪುರಸ್ಕಾರ 2024 ಪ್ರಶಸ್ತಿ

Bharath Vaibhav
ಪಾವಗಡದ ಸಾಧಕರಿಗೆ ಭಾರತ ರತ್ನ ಸೇವಾ ಪುರಸ್ಕಾರ 2024 ಪ್ರಶಸ್ತಿ
WhatsApp Group Join Now
Telegram Group Join Now

ಪಾವಗಡ: ಶ್ರೀ ಮಾತೃ ಫೌಂಡೇಶನ್. ಬಳ್ಳಾರಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರನ್ನು ಗುರುತಿಸಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಇರುವ ಸಿಟಿ ಸೆಂಟರ್ ಹೋಟೆಲ್ ಸಭಾಂಗಣದಲ್ಲಿ ಭಾರತ ರತ್ನ ಸೇವಾ ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು

ಈ ಕಾರ್ಯಕ್ರಮದಲ್ಲಿ ಪಾವಗಡ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿರುವ
1)ಶ್ರೀ ಲೋಕೇಶ್ ಪಾಳೇಗಾರ್. ರವರಿಗೆ ನಿಡಗಲ್ಲು ಉತ್ಸವ ಹಾಗೂ ಹೋರಾಟಗಳಿಗೆ ಪ್ರಶಸ್ತಿ
2) ರಾಮಪುರಂ ನಾಗೇಶ್ ರವರಿಗೆ ಉತ್ತಮ ಎಸ್. ಡಿ ಎಮ್.ಸಿ. ಶಾಲೆ ಪ್ರಶಸ್ತಿ
3) ಯೂನಿಸ್. ಅಧ್ಯಕ್ಷರು. ಯುವ ಭಾರತ್ ಟ್ರಸ್ಟ್. ಆರೋಗ್ಯ ಕ್ಷೇತ್ರದಲ್ಲಿ ಉಚಿತ ಆಂಬುಲೆನ್ಸ್ ಸೇವೆಗಾಗಿ ಪ್ರಶಸ್ತಿ
4) ಶ್ರೀ ಮಾನಂ ಶಶಿಕಿರಣ್. ಅಧ್ಯಕ್ಷರು ಹೆಲ್ಪ್ ಸೊಸೈಟಿ ಹಾಗೂ ಶ್ರೀ ಮಾತೃ ಫೌಂಡೇಶನ್. ಆರೋಗ್ಯ ಶಿಬಿರಗಳಿಗೆ. ಹಾಗೂ ಸಮಾಜಸೇವೆಗೆ ಪ್ರಶಸ್ತಿ
5) ಶ್ರೀ ಓಬಳೇಶ್ ಪಾಳೇಗಾರ್. ಶಿಕ್ಷಕರು. ಶಿಕ್ಷಕರ ಕ್ಷೇತ್ರದಲ್ಲಿ ವೇದ ತರಬೇತಿಗಳ ಸೇವೆಗಾಗಿ ಪ್ರಶಸ್ತಿ
6) ನರಸೀ ಪಾಟೇಲ್. ಉಪಾಧ್ಯಕ್ಷರು. ಕರವೇ ಪಾವಗಡ. ಕನ್ನಡ ನಾಡು ನುಡಿ ಸೇವೆ ಶಾಲಾ ಮಕ್ಕಳಿಗೆ ಉಚಿತ ಲೇಖನ ಸಾಮಗ್ರಿಗಳ ವಿತರಣೆಗಾಗಿ ಪ್ರಶಸ್ತಿ ನೀಡಲಾಗಿದೆ ಪಾವಗಡ ವಿವಿಧ ಕ್ಷೇತ್ರಗಳಲ್ಲಿ ಸಾಧಾರಣ ಮಾಡಿದ ಸಮಾಜ ಸೇವಕರಿಗೆ ಪ್ರಶಸ್ತಿ ನೀಡಿ ಬೆಂಗಳೂರಿನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಲೋಕೇಶ್ ನಾಯಕ್. ಎಮ್. ರಾಷ್ಟ್ರೀಯ ಅಧ್ಯಕ್ಷರು ಎ.ಐ.ಎಸ್.ಓ.ಸಿ. ನ್ಯೂ ಡೆಲ್ಲಿ. ಹಾಗೂ ಸದಸ್ಯರು. ಯುವ ಸಬಲೀಕರಣ ಮತ್ತು ಕ್ರೀಡೆ ಭಾರತ ಸರ್ಕಾರ ದೆಹಲಿ. ಮಾತೃಶ್ರೀ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ. ಗೋವರ್ಧನ್ ದೇಸಾಯಿ ಗೋ ಸೇವೆ ಸಮಾಜ ಸೇವಕರು. ಡಾ. ಶ್ರೀವಾತ್ಸವ್ ಮಾನವ ಹಕ್ಕುಗಳ ಆಯೋಗ ನವದೆಹಲಿ ಮುಂತಾದವರು ಭಾಗವಹಿಸಿದ್ದರು

ವರದಿ: ಶಿವಾನಂದ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!